ಅಪಘಾತ ಪ್ರಕರಣ: ಡ್ರೈವಿಂಗ್‌ ಲೈಸೆನ್ಸ್ ಇಲ್ಲದಿರುವುದು ನಿರ್ಲಕ್ಷ್ಯವಲ್ಲ- ಸುಪ್ರೀಂ ಕೋರ್ಟ್

ವದೆಹಲಿ: ವ್ಯಕ್ತಿಯು ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿ ಅಪಘಾತವಾದಲ್ಲಿ ಅದು ನಿರ್ಲಕ್ಷ್ಯದಿಂದ ಆದ ಅಪಘಾತವೆಂದು ತೀರ್ಮಾನಿಸಲು ಅಪಘಾತ ಪ್ರಕರಣದಲ್ಲಿ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಅಪರಾಧ. ಆದರೆ, ಅಪಘಾತ ಪ್ರಕರಣಗಳಲ್ಲಿ ನಿರ್ಲಕ್ಷ್ಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದೂ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ, ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ

ಸ್ಕೂಟರ್ ಚಾಲಕನ ಬಳಿ ಲರ್ನಿಂಗ್ ಲೈಸೆನ್ಸ್ ಮಾತ್ರ ಇತ್ತು ಎನ್ನುವ ಅಂಶ ಸ್ಕೂಟರ್ ಚಾಲಕನ ಕಡೆಯಿಂದ ನಿರ್ಲಕ್ಷ್ಯ ಉಂಟಾಗಿದೆ ಎನ್ನುವ ತೀರ್ಮಾನಕ್ಕೆ ಬರಲು ಕಾರಣವಾಗುತ್ತದೆ ಎಂದು ನಾವು ಭಾವಿಸುವುದಿಲ್ಲ. ಲಾರಿ ಹಿಂಬದಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ ಎಂದ ಮಾತ್ರಕ್ಕೆ ಸ್ಕೂಟರ್ ಚಾಲಕ ಜಾಗರೂಕನಾಗಿರಲಿಲ್ಲ ಎಂದು ಹೇಳಲಾಗದು.

ಈ ಪ್ರಕರಣದಲ್ಲಿ ಪೊಲೀಸರ ತನಿಖೆಯ ವೇಳೆ ಲಾರಿ ಚಾಲಕನ ನಿರ್ಲಕ್ಷತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡ ಕಕ್ಷಿದಾರರಿಗೆ 16 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಪ್ರಸ್ತುತ ಐಎಎಸ್ ಅಧಿಕಾರಿಯಾಗಿರುವ ಶ್ರೀ ಕೃಷ್ಣಕಾಂತ್ ಸಿಂಗ್ 1999ರ ನವೆಂಬರ್ ನಲ್ಲಿ ಲರ್ನಿಂಗ್ ಲೈಸೆನ್ಸ್ ಹೊಂದಿದ್ದ ವ್ಯಕ್ತಿಯೊಬ್ಬರ ಸ್ಕೂಟರ್ ಹಿಂಬದಿಯಲ್ಲಿ ಕುಳಿತು ಹೋಗುವಾಗ ಅಪಘಾತ ಸಂಭವಿಸಿ ಅವರ ಕಾಲು ತುಂಡಾಗಿತ್ತು. ಈ ಪ್ರಕರಣದಲ್ಲಿ ವಿಮಾ ಕಂಪನಿ ಕೇವಲ 7.5 ಲಕ್ಷ ರೂ. ಪರಿಹಾರ ನೀಡಿತ್ತು.

ಇದನ್ನೂ ನೋಡಿ: ರಂಗಭೂಮಿ ದಿನ| ಜಲಗಾರ ನಾಟಕ – ರಂಗ ವಿನ್ಯಾಸ ನಿರ್ದೇಶನ – ಮೈಕೋ ಶಿವಶಂಕರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *