- ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಕೇಸ್!
- ಜಗತ್ತಿನಲ್ಲಿ ಸೋಂಕು ಪತ್ತೆಯಾದ ಎರಡೂವರೆ ವರ್ಷ ಬಳಿಕ ಘೋಷಣೆ
- ಲಾಕ್‌ಡೌನ್ ಜಾರಿ, ಮೊದಲ ಬಾರಿಗೆ ಮಾಸ್ಕ್ ಧರಿಸಿದ ಕಿಮ್ ಜಾಂಗ್
ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಮೊಟ್ಟಮೊದಲ ಕೋವಿಡ್-19 ಸೋಂಕು ಪತ್ತೆಯಾಗಿದೆ. ಕೊರೋನಾ ಸೋಂಕು 2019ರ ಅಂತ್ಯಕ್ಕೆ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿ ನಂತರ ವಿಶ್ವಕ್ಕೆಲ್ಲಾ ಹರಡಿ ಲಾಕ್ ಡೌನ್ ಹೇರಿಕೆಯಾಗಿದ್ದೆಲ್ಲ ಹಳೆಯ ಸುದ್ದಿ, ಇನ್ನು ಕೂಡ ವಿಶ್ವದ ಹಲವು ದೇಶಗಳು ಕೊರೋನಾ ಸೋಂಕಿನಿಂದ ಮುಕ್ತವಾಗಿಲ್ಲ. ಆದರೆ ಈ ಎರಡು ವರ್ಷಗಳಲ್ಲಿ ಉತ್ತರ ಕೊರಿಯಾದಲ್ಲಿ ಮಾತ್ರ ಒಬ್ಬ ವ್ಯಕ್ತಿಯಲ್ಲಿ ಕೂಡ ಪತ್ತೆಯಾಗಿರಲಿಲ್ಲ. ಇದೀಗ ಮೊಟ್ಟ ಮೊದಲ ಬಾರಿಗೆ ಅಲ್ಲಿ ಕಾಣಿಸಿಕೊಂಡಿದೆ.
ಉತ್ತರ ಕೊರಿಯಾದ ಪಯೋಂಗ್‌ಯಾಂಗ್‌ನಲ್ಲಿ ಜ್ವರದಿಂದ ಬಳಲುತ್ತಿರುವ ಜನರಿಂದ ಕಳೆದ ಭಾನುವಾರ ಸಂಗ್ರಹಿಸಲಾದ ಮಾದರಿಗಳ ಪರೀಕ್ಷೆ ನಡೆಸಿದಾಗ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢವಾಗಿದೆ. ಎರಡು ಮೂರು ವರ್ಷಗಳಿಂದ ಪ್ರಪಂಚದಾದ್ಯಂತ ಕೊರೋನಾ ಸೊಂಕು ಹಬ್ಬಿತ್ತು. ಹಾಗಾಗಿ ಪ್ರಪಂಚದ ಬಲಿಷ್ಟರಾಷ್ಟ್ರಗಳು ಕೊರೋನಾ ಸೊಂಕಿಗೆ ನಲುಗಿ ಹೋಗಿದ್ದವು. ಆದರೆ ಅಂತಹ ಸಂದರ್ಭದಲ್ಲೂ ಉತ್ತರ ಕೊರಿಯಾ ಕೊರೋನಾ ಸೊಂಕನ್ನ ದೂರವಿರಿಸಿ ,ಮುಂಜಾಗೃತವಾಗಿ ಕಟ್ಟುನಿಟಿನ ಕ್ರಮ ಕೈಗೊಂಡು, ನಮ್ಮ ದೇಶದಲ್ಲಿ ಕೊರೋನಾ ಸೊಂಕು ಇಲ್ಲಾ ಎಂದು ಹೇಳಿಕೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ ಮಾಸ್ಕ್ ದರಿಸಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ದೇಶದಲ್ಲಿ ಮೊದಲ ಕೊರೋನಾ ಸೊಂಕು ಕಾಣಿಸಿಕೊಂಡಿದ್ದು ವೈಧ್ಯಾದಿಕಾರಿಗಳಿಂದ ಅದು ಕೊರೋನಾ ಸೊಂಕು ಎಂದು ದೃಡವಾಗಿದೆ ಹಾಗಾಗಿ, ಜನರ ಆರೋಗ್ಯ ದೃಷ್ಟಿಯಿಂದ ದೇಶದಾದ್ಯಂತ ಲಾಕ್ ಡೌನ್ ಘೋಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಾಜಧಾನಿ ಪ್ಯೊಂಗ್ಯಾಂಗ್ನಲ್ಲಿ ಜ್ವರದಿಂದ ಆರು ಮಂದಿ ಸಾವನ್ನಪ್ಪಿದ್ದು, ಒಬ್ಬ ಜ್ವರ ಪೀಡಿತ ರೋಗಿಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಆ ವ್ಯಕ್ತಿಗೆ ಕೊರೋನಾ ರೂಪಾಂತರಿ ಓಮೈಕ್ರಾನ್ ಬಿಎ.2 ತಳಿ ದೃಡವಾಗಿದೆ ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈಗಾಗಲೆ 1,87,800 ಮಂದಿ ಜ್ವರದಿಂದ ಬಳಲುತ್ತಿದ್ದು, ಅವರುಗಳಿಗೆ ಐಸೊಲೇಶನ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕೃತ ಕೆಸಿಎಎನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಕೋರಿಯಾದಲ್ಲಿ ಇಲ್ಲಿಯವರೆಗೆ ಕೋವಿಡ್ ಪತ್ತೆಯಾಗದಿರುವುದು ಅಲ್ಲಿನ ಆರೋಗ್ಯ ವ್ಯವಸ್ಥೆಯನ್ನು ತೋರಿಸುತ್ತದೆ. ಅಲ್ಲಿ ಹೆಚ್ಚೆಚ್ಚು ವೈದ್ಯರಿದ್ದು, ಕೋವಿಡ್ ವಿರುದ್ದ ಹೋರಾಟ ನಡೆಸಲಿದ್ದಾರೆ. ಜನರಿಗೆ ಅಗತ್ಯವಾದ ಸೌಲಭ್ಯಗಳು ನೀಡುವುದಾಗಿ ಕಿಮ್ ಜಾಂಗ್ ತಿಳಿಸಿದ್ದಾರೆ.