ಪ್ರಧಾನಿ ಮೋದಿಗೆ ನೊಬೆಲ್‌ ಗರಿ ಎಂಬುದು ಸುಳ್ಳು ಸುದ್ದಿ!

ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪನಾಯಕ ಆಸ್ಲೆ ಟೋಜೆ ಹೇಳಿದ್ದಾರೆ ಎಂಬ ಸುದ್ದಿ ಕಳೆದೊಂದು ದಿನದಿಂದ ಸಾಕಷ್ಟು ಚರ್ಚೆಯಲ್ಲಿತ್ತು.

ಇದೀಗ ನೊಬೆಲ್ ಪ್ರಶಸ್ತಿ ಸಮಿತಿಯ ಉಪನಾಯಕ ಆಸ್ಲೆ ಟೋಜೆ ಅವರೇ ಸ್ವತಃ ಈ ವಿಚಾರ ಶುದ್ಧ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಇದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಚಾರವನ್ನು ಹಬ್ಬಿಸಿದವು. ಆದರೆ ಇದನ್ನು ಫೇಕ್‌ ನ್ಯೂಸ್‌ ಟ್ವೀಟ್‌ ಅನ್ನು ಸುದ್ದಿ ಮಾಡಲಾಗಿದೆ. ಮತ್ತೆ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಟ್ವೀಟ್‌ ನಲ್ಲಿರುವ ಯಾವುದೇ ಸಂಗತಿಯನ್ನು ನಾನು ಹೇಳಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಮೋದಿಯವರ ಪ್ರಾಮಾಣಿಕ ಉತ್ತರಕ್ಕಾಗಿ ನಾನೂ ಕಾಯುತ್ತಿದ್ದೇನೆ : ಸಿದ್ದರಾಮಯ್ಯ

ಆಸ್ಲೆ ಟೋಜೆ ಕುರಿತು :
ಟೋಜೆರವರು ನಾರ್ವೆ ದೇಶದವರಾಗಿದ್ದು, ನೊಬೆಲ್‌ ಶಾಂತಿ  ಪುರಸ್ಕಾರ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಜರ್ಮನಿ, ಫ್ರಾನ್ಸ್‌, ಇಂಗ್ಲೇಂಡ್‌, ಬೆಲ್ಜಿಯಂ, ಅಮೆರಿಕಾ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸಿರುವ ಇವರು ರಾಜಕೀಯ ಶಾಸ್ತ್ರದ ವಿದ್ವಾಂಸ ಹಾಗೂ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಓಸ್ಲೋ ಹಾಗೂ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿ ಪಿಎಚ್‌ಡಿಯನ್ನು ಪಡೆದಿದ್ದಾರೆ. ಅವರು ಇಂಗ್ಲಿಷ್ ಮತ್ತು ನಾರ್ವೇಜಿಯನ್ ಭಾಷೆ ಮಾತನಾಡುತ್ತಾರೆ. ಜತೆಗೆ, ಜರ್ಮನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿಯೂ ಅವರು ಸಂವಹನ ನಡೆಸುತ್ತಾರೆ.

ನೊಬೆಲ್‌ ಶಾಂತಿ ಪ್ರಶಸ್ತಿ ಕುರಿತು ನಿಮಗೆಷ್ಟು ಗೊತ್ತು ? 
ಡೀ ವಿಶ್ವದಲ್ಲಿ ಅತ್ಯುನ್ನತ ಪ್ರಶಸ್ತಿ ಎಂದರೆ ನೊಬೆಲ್ ಪ್ರಶಸ್ತಿ. 1901ರಿಂದ ಪ್ರಾರಂಭವಾಗಿ ಪ್ರತಿ ವರ್ಷ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಶರೀರ ವಿಜ್ಞಾನ ಅಥವಾ ಔಷಧ, ಸಾಹಿತ್ಯ, ಶಾಂತಿ ಮತ್ತು 1968ರಿಂದ ಅರ್ಥಶಾಸ್ತ್ರ – ಈ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ ಕೊಡಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಹಿಂದಿನ ವರ್ಷದದವರೆಗೆ ಮಾನವ ಕುಲಕ್ಕೆ ಅತ್ಯಂತ ಹೆಚ್ಚು ಪ್ರಯೋಜನ ಉಂಟುಮಾಡಿದ ಈಗಲೂ ಜೀವಂತ ಇರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಗಳ ಜನಕ ಸ್ವೀಡನ್ನಿನ ಆಲ್ಫ್ರೆಡ್ ನೊಬೆಲ್ ಎಂಬುವವರು.

ಅವರು ರಸಾಯನ ಶಾಸ್ತ್ರಜ್ಞ, ಎಂಜಿನಿಯರ್, ಸಂಶೋಧಕ ಮತ್ತು ಉದ್ಯಮಿ. ಅವರ ಹೆಸರಿನಲ್ಲಿ 355 ಪೇಟೆಂಟ್ ಗಳಿದ್ದವು. ಅವರ ಬಳಿ ಇದ್ದ ಅಪಾರ ಸಂಪತ್ತಿನ ಒಂದು ಫಂಡ್ ಮಾಡಿ ಅದರ ಆದಾಯದಿಂದ ಪ್ರಪಂಚದ ಅತಿ ಶ್ರೇಷ್ಠ ಮೇಧಾವಿಗಳಿಗೆ ಪ್ರತಿ ವರ್ಷ ಬಹುಮಾನ ನೀಡಬೇಕೆಂದು ತಮ್ಮ ಕೊನೆಯ ಉಯಿಲಿನಲ್ಲಿ ಬರೆದಿದ್ದರು. ಅಂತಹ ಮೇಧಾವಿಗಳನ್ನು ಆಯ್ಕೆ ಮಾಡಲು ಸ್ವೀಡನ್ನಿನಲ್ಲಿ ಅದಾಗಲೇ ಹೆಸರು ಗಳಿಸಿದ್ದ ಮೂರು ಸಂಸ್ಥೆಗಳು ಮತ್ತೊಂದು ನಾರ್ವೆಯಲ್ಲಿ ಹೊಸದಾಗಿ ರಚನೆ ಮಾಡಲಾಗುವ ಸಂಸ್ಥೆ – ಹೀಗೆ ನಾಲ್ಕು ಸಂಸ್ಥೆಗಳಿಗೆ ಜವಾಬ್ದಾರಿ ಕೊಡಲಾಗಿತ್ತು. (1814ರಿಂದ 1905ರವರೆಗೆ ಸ್ವೀಡನ್ ಮತ್ತು ನಾರ್ವೆ ಒಂದು ಒಕ್ಕೂಟದಲ್ಲಿದ್ದವು.) ಈ ನಾಲ್ಕು ಸಂಸ್ಥೆಗಳು 1900ರಲ್ಲಿ ನೊಬೆಲರ ಆಸ್ತಿಯನ್ನು ನೋಡಿಕೊಳ್ಳಲು ನೊಬೆಲ್ ಫೌಂಡೇಶನ್ ಸ್ಥಾಪಿಸಿದರು. ಇದು ನೊಬೆಲರ ಉಯಿಲಿನಂತೆ ಇದುವರೆಗೆ ನೊಬೆಲ್ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದೆ.

 

Donate Janashakthi Media

Leave a Reply

Your email address will not be published. Required fields are marked *