ದಾಖಲೆ ಇಲ್ಲದ್ದಕ್ಕೆ ಸಿಗದ ನೆರವು ! ಪರದಾಡಿದ ಬಡ ಫಲಾನುಭವಿಗಳು

ಮೈಸೂರು : ದಾಖಲೆ ಪತ್ರಗಳು ಇಲ್ಲ ಎಂಬ ಮೆಪವೊಡ್ಡಿ ಪರಿಹಅರವನ್ನು ನಿರಾಕರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಎಚ್‌.ಡಿ. ಕೋಟಿ  ತಾಲೂಕು ವ್ಯಾಪ್ತಿ ಪ್ರಕೃತಿ ವಿಕೋಪದಿಂದ 2022-23ನೇ ಸಾಲಿನಲ್ಲಿ 3 ಮಾನವ ಜೀವ, 4 ಜಾನುವಾರು, 197 ಮನೆ, 39 ಕೊಟ್ಟಿಗೆ, 18 ಹೆಕ್ಟೇರ್‌ ಸಾಗುವಳಿ ಜಮೀನು ಹಾನಿಗೀಡಾಗಿದೆ. ಪುನರ್‌ ಮನೆ ನಿರ್ಮಾಣಕ್ಕಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ.

ಮುಂಗಾರಿನಲ್ಲಿ ವಿಪರೀತ ಮಳೆಗೆ ಮನೆ ಕಳೆದಕೊಂಡ ಕುರಿತು ಸೂಕ್ತ ಮಾಹಿತಿ ಲಭಿಸಿದ್ದರೂ ದಾಖಲೆ ಇಲ್ಲ ಎಂಬ ಕಾರಣಕ್ಕೆ ಅನೇಕ ಕುಟುಂಬಗಳು ಸರಕಾರದ ನೆರವಿನಿಂದ ವಂಚಿತಗೊಳ್ಳುವಂತಾಗಿದೆ ಕೆಲವು ಕುಟುಂಬಗಳ ಬಳಿ ರೇಷನ್‌ಕಾರ್ಡ್‌, ಆಧಾರ್‌ಕಾರ್ಡ್‌ ಇಲ್ಲದ ಕಾರಣ ಪುನರ್‌ ಮನೆ ನಿರ್ಮಾಣದ 5 ಲಕ್ಷ ರೂ. ಬಿಡುಗಡೆಗೆ ನಿರಾಕರಿಸಲಾಗಿದೆ.

ಮುಂಗಾರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಂತರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಅನೇಕ ಮನೆಗಳು ಹಾನಿಗೀಡಾಗಿವೆ. ಸಂಪೂರ್ಣ ಮನೆ ಕುಸಿದ ಕುಟುಂಬವೊಂದರ ಬಳಿ ರೇಷನ್‌ ಕಾರ್ಡ್‌ ಇಲ್ಲ ಎಂಬ ಕಾರಣಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿ ನೆರವು ನಿರಾಕರಿಸಲಾಗಿದೆ ಎಂದು ಅಂತರಸಂತೆ ಗ್ರಾ.ಪಂ.ಸದಸ್ಯ ಸುರೇಶ್‌ ಕೆ ಹೇಳಿದರು.

ತಂತ್ರಾಂಶದಲ್ಲಿ ಕೋರಿರುವ ಮಾಹಿತಿ ಅನ್ವಯ ರೇಷನ್‌ಕಾರ್ಡ್‌, ಆಧಾರ್‌ಕಾರ್ಡ್‌ ದಾಖಲೆ ಜೋಡಣೆ ಅನಿವಾರ್ಯ. ಕಾರ್ಡ್‌ ಇಲ್ಲದ ಕುಟುಂಬದ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಂಕಷ್ಟಕ್ಕೀಡಾದ ಕುಟುಂಬಕ್ಕೆ ನೆರವು ನೀಡುವ ಕ್ರಮ ಜರುಗಿಸಲಾಗುತ್ತದೆ ಎಂದು ತಹಸೀಲ್ದಾರ್ ರತ್ನಾಂಬಿಕೆ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *