ಸಹಿ ಸಂಗ್ರಹಣೆಯಂತಹ ಯಾವುದೇ ಬೆಳವಣಿಗೆಗಳು ಪಕ್ಷದಲ್ಲಿ ನಡೆಯುತ್ತಿಲ್ಲ: ಶಿವರಾಜ ತಂಗಡಗಿ

ಕಾರಟಗಿ: ಹೈಕಮಾಂಡ್ ಕೈಗೊಂಡ ನಿರ್ಧಾರಕ್ಕೆ ರಾಜ್ಯದ ಎಲ್ಲ ನಾಯಕರು ಬದ್ಧರಾಗಿದ್ದಾರೆ. ನಾನು ಕೂಡ ವರಿಷ್ಠರು ಹೇಳಿದಂತೆ ಕೇಳುತ್ತೇನೆ ಎಂದು ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು. ಸಂಗ್ರಹಣೆ

ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಕೂಡ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವು ಕೇಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಹಿರಿಯೂರು | ದ್ವಿಚಕ್ರ ವಾಹನಗಳನ್ನು ಓಡಿಸುವಾಗ ‘ಹೆಲ್ಮೆಟ್ ಧರಿಸಿ – ಪಿಎಸ್ಐ ಲಕ್ಷ್ಮಿ ನಾರಾಯಣ್

ಮುಖ್ಯಮಂತ್ರಿಗಳು ಈ ಮಾತನ್ನು ಹೇಳಿದ ಮೇಲೆ ನಾವೆಲ್ಲರೂ ಅವರ ಮಾತನ್ನು ಕೇಳುತ್ತೇವೆ. ಸಹಿ ಸಂಗ್ರಹಣೆಯಂತಹ ಯಾವುದೇ ಬೆಳವಣಿಗೆಗಳು ಪಕ್ಷದಲ್ಲಿ ನಡೆಯುತ್ತಿಲ್ಲ ಎಂದರು.

ಎಲ್ಲ ಸಹಿಗಳು ಮಾಧ್ಯಮದಲ್ಲಿ ಸಂಗ್ರಹವಾಗುತ್ತಿವೆ. ಇವೆಲ್ಲ ಬಿಜೆಪಿಯವರು ಸೃಷ್ಟಿ ಮಾಡಿದ ಕೆಲಸಗಳು. ಬಿಜೆಪಿಯವರು ಹಸಿದು ಕೂತಿದ್ದಾರೆ. ಅವರ ಬಗ್ಗೆ ಹೇಳಿಕೆ ಕೊಡುವ ಅವಶ್ಯಕತೆ ಇಲ್ಲ. ನಾವು ಯಾರೊಂದಿಗೂ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ನೋಡಿ: ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರ | ತಳ ಸಮುದಾಯಕ್ಕೆ ಎಸಗುತ್ತಿರುವ ದ್ರೋಹ Janashakthi Media

Donate Janashakthi Media

Leave a Reply

Your email address will not be published. Required fields are marked *