ನೋ ಬೇಲ್‌ ಓನ್ಲಿ ಜೈಲ್: ಮಾಜಿ ಸಂಸದೆ ಸುಭಾಷಿಣಿ ಅಲಿ

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣ ಅಶ್ಲೀಲ ಪೆನ್‌ಡ್ರೈವ್‌ ಆರೋಪಿ ಪ್ರಜ್ವಲ್ ರೇವಣ್ಣ, ಹಾಗೂ ಅವರ ತಂದೆ ಹೆಚ್.ಡಿ.ರೇವಣ್ಣ ಸೇರಿದಂತೆ ಈ ಪ್ರಕರಣಗಳಲ್ಲಿರುವ ಇನ್ನಿತರ ಎಲ್ಲ ಆರೋಪಿಗಳನ್ನು ಕೂಡಲೇ ಬಂಧೀಸಬೇಕು. ಅವರಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದು, ಜೈಲು ಮಾತ್ರ ಅವರಿಗೆ ಸಿಗಬೇಕು. ʼನೋ ಬೇಲ್ ಓನ್ಲೀ ಜೈಲ್ʼ, ಎಂದು ಭಾರತೀಯ ಕಮ್ಯನಿಸ್ಟ್‌ ಪಾರ್ಟಿ (ಮಾರ್ಕ್ಸ್ವಾದಿ) ಪಾಲಿಟಿ ಬ್ಯೂರೋ ಸದಸ್ಯರೂ ಆಗಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಮಾಜಿ ಸಂಸದೆ ಸುಭಾಷಿಣಿ ಅಲಿ ಆಗ್ರಹಿಸಿದ್ದಾರೆ.

ವಿವಿಧ ಜನಪರ ಸಾಮಾಜಿಕ ಹೋರಾಟಗಾರರು, ವಿವಿಧ ಸಂಘಟನೆಗಳು ಒಗ್ಗಟ್ಟಾಗಿ ಹಾಸನದಲ್ಲಿಂದು ವಿಕೃತ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣ ಬಂಧನ್ಕಕೆ ಆಗ್ರಹ, ಲೈಂಗಿಕ ದೌರ್ಜ್ಯಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವ, ಹೆಣ್ಣು ಸಂಕುಲದ ಘನತೆ ಎತ್ತಿ ಹಿಡಿಯಲು “ ಹೋರಾಟದ ನಡಿಗೆ ಹಾಸನದ ಕಡೆಗೆ” ಅಡಿಬರಹದಡಿ ಹಾಸನ ಚಲೋ ಬೃಹತ್‌ ಕಾರ್ಯಕ್ರವನ್ನುದ್ದೇಶಿಸಿ ಸುಭಾಷಿಣಿ ಅಲಿ ಮಾತನಾಡಿದರು.

ಇಂದು ಮಹಾರಾಜ ಪಾರ್ಕ್ ನಿಂದ ಆರಂಭವಾದ ಮೆರವಣಿಗೆ ಹೊಸದೊಂದು ಜನತಂತ್ರದ ಹೋರಾಟದ ಆರಂಭವನ್ನು ಮಾಡುವ ಮೂಲಕ ಹೊಸದೊಂದು ಇತಿಹಾಸ ಬರೆದಿದೆ.ಯಾವುದೇ ಪ್ರಭಾವಕ್ಕೆ ಒಳಗಾಗದೇ ಮಣಿಯದೇ ಕರ್ನಾಟಕ ಸರ್ಕಾರ ಈ ಆರೋಪಿಗಳನ್ನು ಬಂಧಿಸಲೇಬೇಕು. ಅಪರಾಧ ಮಾಡಿದವರಿಗೆ ಶಿಕ್ಷೆ ನೀಡಲೇಬೇಕೆಂದು
ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಉತ್ತರ ಪ್ರದೇಶದಿಂದ ಬಂದು ಈ ಹಾಸನ ಚಲೋ ಹೋರಾಟದಲ್ಲಿ ಸೇರಿಕೊಂಡಿರುವುದಾಗಿ ಸ್ಪಷ್ಟಪಡಿಸಿದ ಸುಭಾಷಿಣಿ ಅಲಿ, ಇಂದು ಪುರುಷಪ್ರಧಾನ ಮೌಲ್ಯಗಳು ಜೀವಂತವಾಗಿರುವುದರ ಜೊತೆಗೆ ನವ ಬಂಡವಾಳಶಾಹಿ ವ್ಯವಸ್ಥೆ, ನವ ಉದಾರವಾದಿ ವ್ಯವಸ್ಥೆ ಮಹಿಳೆಯರ ಮೇಲಿನ ಹಿಂಸೆಯನ್ನು ಮತ್ತೊಂದಷ್ಟು ಹೆಚ್ಚಿಸಿದೆ,. ಕೋಮುವಾದಿ ವ್ಯವಸ್ಥೆ, ಬಂಡವಾಳವಾದಿ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆಗಳ ವಿರುದ್ಧ ಏಕಕಾಲದಲ್ಲಿ ನಾವು ಹೋರಾಟ ಮಾಡಬೇಕಾಗಿದೆ.

ಇದನ್ನು ಓದಿ : ದೇವೇಗೌಡ್ರೆ.., ಮಹಿಳಾ ಮೀಸಲಾತಿ ಘೋಷಿಸಿದಾಗ ಇದ್ದ ಮಹಿಳಾ ಕಾಳಜಿ ಈಗ್ಯಾಕ್ಕಿಲ್ಲ: ವರಲಕ್ಷ್ಮಿ

ಈ ಲೈಂಗಿಕಹಿಂಸಾಕಾಂಡದಲ್ಲಿ ನೊಂದ ಮಹಿಳೆಯರಿಗೆ ನಿಮ್ಮೊಂದಿಗೆ ಪ್ರತಿ ಹಂತದಲ್ಲಿ ನಾವು ಇದ್ದೇವೆ ಮತ್ತು ಇರುತ್ತೇವೆ ಎಂದು ಹೇಳುವುದು. ಸಂತ್ರಸ್ತ ಮಹಿಳೆಯರು ಯಾವ ಕಾರಣಕ್ಕೂ ಅಂಜಬೇಕಿಲ್ಲ, ತಪ್ಪಿತಸ್ಥ ಭಾವದಲ್ಲಿ ನರಳಬೇಕಿಲ್ಲ, ಇದು ಎಲ್ಲರ ಹೋರಾಟ, ಧೈರ್ಯಗೆಡುವುದು ಬೇಡ ಎಂಬ ಸಂದೇಶ ನೀಡುವುದು ಈ ಹಾಸನ ಹೋರಾಟದ ಉದ್ದೇಶವಾಗಿದೆ.

ಜನರು ನಿಮಗೆ ಮತ ಹಾಕಿದ್ದು ಯಾರಾದರೂ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಬಂದಾಗ, ಪಂಚಾಯ್ತಿಗೆ ಟಿಕೆಟ್ ಕೇಳಲು ಬಂದಾಗ, ಕೆಲಸದಲ್ಲಿ ಮೇಲಕ್ಕೆ ಹೋಗಲು ನೆರವು ಕೇಳಿ ಬಂದಾಗ ಅವರಿಗೆ ಸಹಾಯ ಮಾಡಬೇಕೇ ಹೊರತು ಅವರನ್ನು ದುರ್ಬಳಕೆ ಮಾಡುವುದಲ್ಲ, ಹಾಗೆ ಅವರು ತಮ್ಮ ಅಧೀಕಾರವನ್ನು ದುರ್ಬಳಕೆ ಮಾಡಿದ್ದನ್ನು ಶಿಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ, ನೊಂದವರಿಗೆ ರಕ್ಷಣೆ, ಕಾನೂನು ನೆರವು ಮತ್ತು ಪರಿಹಾರ ಒದಗಿಸಲೇಬೇಕು. ಅದನ್ನು ಸರ್ಕಾರ ಮಾಡದಿದ್ದರೆ ಸರ್ಕಾರ ತನ್ನ ಜವಾಭ್ದಾರಿ ನಿಭಾಯಿಸುವಂತೆ ನಾವು ಮಾಡುತ್ತೇವೆ ಎಂದು ಕರೆ ನೀಡಿದರು.

ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಸುಭಾಷಿಣಿ ಅಲಿ, ಈ ಹತ್ತು ವರ್ಷಗಳಲ್ಲಿ ನಾವು ನಿಮಗೆ ಕೇವಲ ಟ್ರೈಲರ್ ತೋರಿಸಿದ್ದೇವೆ, ಇನ್ನೂ ಸಿನೆಮಾ ಬಾಕಿ ಇದೆ ಎಂದಿದ್ದಾರೆ. ಇವರು ತೋರಿಸಿದ ಟ್ರೈಲರ್ ಏನು? ಬಿಲ್ಕೀಸ್ ಬಾನು ಅಪರಾಧಿಗಳಿಗೆ ಬಿಡುಗಡೆ, ಬ್ರಿಜ್ ಭೂಷಣ್ ಸಿಂಗ್ ಮಗನಿಗೆ ಟಿಕೆಟ್, ಅಪರಾಧಿಗಳಿಗೆ ರಕ್ಷಣೆ- ಇವರಿಗೆ ನಾವು ಹೇಳಬೇಕಾಗಿದೆ, ನಿಮ್ಮ ಪಿಕ್ಚರ್ ನಡೆಯಲೂ ನಾವು ಬಿಡುವುದಿಲ್ಲ, ನಿಮ್ಮ ಪಿಕ್ಚರ್ ನಡೆಯಲೂ ನಾವು ಬಿಡುವುದಿಲ್ಲ. ನಾವು ಜೂನ್ 4ರ ನಂತರ ಬೇರೆಯೇ ಚಿತ್ರ ತೋರಿಸುತ್ತೇವೆ. ನಾವು ಶಿಕ್ಷಣ ಪಡೆಯುತ್ತೇವೆ, ಉದ್ಯೋಗ ಪಡೆಯುತ್ತೇವೆ, ಚುನಾವಣೆಯಲ್ಲಿ ಸ್ಫರ್ಧೀಸಲು ಟಿಕೆಟ್ ಪಡೆಯುತ್ತೇವೆ, ನಿಮಗೆ ಸವಾಲೊಡ್ಡುತ್ತೇವೆ, ನಿಮ್ಮ ಪಾಳೇಗಾರಿಕೆಗೆ ಸೆಡ್ಡು ಹೊಡೆಯುತ್ತೇವೆ, ನಾವು ಎದ್ದು ಬಂದೇ ಬರುತ್ತೇವೆ. ನಾವು ಹೋರಾಡುತ್ತೇವೆ, ನಾವು ಗೆಲ್ಲುತ್ತೇವೆ ಎಂದು ಬಹಿರಂಗ ಘೋಷಣೆಯನ್ನು ಸುಭಾಷಿಣಿ ಅಲಿ ಮೊಳಗಿಸಿದರು.

ಇದನ್ನು ನೋಡಿ : ಮಣ್ಣಿನ ಮಕ್ಕಳು’ ಎಂದು ಹೇಳಿಕೊಂಡು ದೌರ್ಜನ್ಯ ನಡೆಸಿದ್ದೆ ಜಾಸ್ತಿ | ರೇವಣ್ಣ ರಿಪಬ್ಲಿಕ್Janashakthi Media

Donate Janashakthi Media

Leave a Reply

Your email address will not be published. Required fields are marked *