ನಿಯಮಗಳ ಅರಿವಿಲ್ಲದವರು ಶಾಸಕರಾಗಿರುವುದು ಅವಿಭಜಿತ ಜಿಲ್ಲೆಯ ದುರಂತ: ಬಿ ಕೆ ಇಮ್ತಿಯಾಜ್

ಸುರತ್ಕಲ್‌: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತ್ರ ಅಲ್ಲ. ಜಿಲ್ಲೆಯ ಬಹುತೇಕ ಶಾಸಕರುಗಳು ಮಾಡಬೇಕಾದ ಕೆಲಸಗಳು ಏನೆಂದು ತಿಳಿದಿಲ್ಲ. ಉದ್ಯೋಗ, ಶಿಕ್ಷಣ ಸೇರಿದಂತೆ ಯಾವುದೇ ಮೂಲಭೂತ ಅಭಿವೃದ್ದಿಗಳು ತುಳುನಾಡಿನಲ್ಲಿ ನಡೆಯುತ್ತಿಲ್ಲ. ಜನರನ್ನು ಭಾವನಾತ್ಮಕವಾಗಿ ವಿಭಜಿಸಿ ರಾಜಕಾರಣ ನಡೆಸುವುದೇ ಅವರ ಗುರಿಯಾಗಿದೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ ಕೆ ಇಮ್ತಿಯಾಜ್ ಹೇಳಿದರು.

ಸುರತ್ಕಲ್‌ ಟೋಲ್ ಗೇಟ್ ತೆರವಿಗೆ ಆಗ್ರಹಸಿ ಸುರತ್ಕಲ್ ನಲ್ಲಿ ನಡೆಯುತ್ತಿರುವ ಹಗಲು ರಾತ್ರಿ ಧರಣಿಯ ಹದಿನಾಲ್ಕನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ದಿ ಅಜೆಂಡಾವನ್ನು ಬದಿಗೆ ಸರಿಸುವುದು ಬಿಜೆಪಿಗೆ ಅಭ್ಯಾಸವಾಗಿದೆ. ನಿಯಮಗಳ ಅರಿವಿಲ್ಲದೆ ಮಾತಾಡುವವರು ಶಾಸಕರಾಗಿರುವುದು ಟೋಲ್ ಗೇಟ್ ಸೇರಿದಂತೆ ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಮೂಲ. ಇದು ಅವಿಭಜಿತ ಜಿಲ್ಲೆಯ ದುರಂತ ಎಂದು ಆರೋಪಿಸಿದರು.

ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯಚಂದ್ರ ಜೈನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ವೈ ರಾಘವೇಂದ್ರ ರಾವ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಶೀರ್ ಬೈಕಂಪಾಡಿ, ಪುರುಷೋತ್ತಮ ಚಿತ್ರಾಪುರ, ಅಯಾಝ್ ಕೃಷ್ಣಾಪುರ, ಮಯ್ಯದ್ದಿ ಕಿನ್ನಿಗೋಳಿ, ಮಾಜಿ ಮೇಯರ್ ಅಶ್ರಫ್ ಕೆ, ರಫೀಕ್ ಹರೇಕಳ, ಸಾಹುಲ್ ಹಮೀದ್ ಬಜ್ಪೆ, ಹರೀಶ್ ಆಚಾರ್, ರಾಜೇಶ್ ಪೂಜಾರಿ ಕುಳಾಯಿ, ರೇವಂತ್ ಕದ್ರಿ,  ಬೀದಿ ಬದಿ ವ್ಯಾಪಾರಸ್ಥರ ಸಂಘದ ಆಸಿಫ್ ಬಾವಾ, ರೆಹಮಾನ್, ಶ್ರೀಧರ ಭಂಡಾರಿ, ನೌಷಾಧ್, ಮೂರ್ತಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಅಬ್ದುಲ್ ರೆಹಮಾನ್ ಕೋಡಿಜಾಲ್, ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ, ಉಳ್ಳಾಲ ನಗರ ಸಭೆ ಸದಸ್ಯರಾದ ಸ್ವಪ್ನ ಸತೀಶ್, ರಝಿಯಾ ಇಬ್ರಾಹಿಂ ಸೇರಿದಂತೆ ವಿವಿಧ ಸಂಘಟನೆಗಳು ಹಲವು ಮುಖಂಡರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *