ʻಸರ್ಕಾರಿ ನೌಕರರು ಗುಲಾಮರಲ್ಲʼ ನಿವೃತ್ತ ಅಧಿಕಾರಿಗಳ ವೇತನ ಆಯೋಗ ಬೇಡ

ಬೆಂಗಳೂರು: ರಾಜ್ಯ ಸರ್ಕಾರ ವಿಜಯ ಭಾಸ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಆಧಾರದಲ್ಲಿ ಖಾಲಿ ಹುದ್ದೆ ರದ್ದುಪಡಿಸಲು ಮುಂದಾಗಿದೆ. ನಮಗೆ ನಿವೃತ್ತ ಅಧಿಕಾರಿಗಳ ವೇತನ ಆಯೋಗ ಬೇಡ, ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚನೆ ಮಾಡಬೇಕು ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿಗಳ ಬೂಟಾಟಿಕೆಯ ಸಮಿತಿ ಮಾಡುತ್ತಿದೆ. ಸರ್ಕಾರಿ ನೌಕರರು ಗುಲಾಮರಲ್ಲ. ನಾವು ಅರ್ಹತೆಯ ಮೇಲೆ ಉದ್ಯೋಗ ಪಡೆದುಕೊಂಡಿದ್ದೇವೆ. ಸರ್ಕಾರ ನೌಕರರ ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಸಿದ ಅವರು ಸರ್ಕಾರದ ಧೋರಣೆ ವಿರುದ್ಧ ಸೆಪ್ಟೆಂಬರ್ 30 ರಂದು ಧರಣಿ ನಡೆಸಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ನೆರೆಯ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಿ ನೌಕರರ ವೇತನ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ವೇತನಕ್ಕೂ ಶೇ 40% ರಷ್ಟು ವ್ಯತ್ಯಾಸ ಇದೆ. ನಾವು ಈಗಾಗಲೇ ಮೂರ್ನಾಲ್ಕು ವೇತನ ಆಯೋಗಗಳನ್ನು ಕಳೆದುಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಒಂದು ಸಾವಿರ ಜನರಿಗೆ 18-20 ಸರ್ಕಾರಿ ನೌಕರರಿದ್ಧರೆ, ನಮ್ಮ ರಾಜ್ಯದಲ್ಲಿ 11 ಜನ ಇದ್ದಾರೆ. ಸರ್ಕಾರ ಹೊಸ ಹೊಸ ಯೋಜನೆ ಘೋಷಣೆ ಮಾಡುತ್ತಿದೆ. ಇದರಿಂದ ನೌಕರರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *