ಪ್ರತಿ ವಾರ್ಡ್‌ನಲ್ಲೂ ನಿವಾಸಿಗಳ ಕುಂದುಕೊರತೆ ವಿಭಾಗ ಸ್ಥಾಪಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಜನತೆ ಹಲವು ಸಮಸ್ಯೆಗಳಿಗೆ ಈಡಾಗಿದ್ದಾರೆ. ಹಲವು ಕಡೆ ರಸ್ತೆ, ಮನೆಗಳು ಜಲಾವೃತಗೊಂಡಿದ್ದು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ನಿವಾಸಿಗಳ ಕುಂದುಕೊರತೆಯನ್ನು ಆಲಿಸಲು ಪ್ರತಿ ವಾರ್ಡ್​ನಲ್ಲೂ ಕುಂದುಕೊರತೆ ವಿಭಾಗ ಸ್ಥಾಪಿಸುವಂತೆ ಕರ್ನಾಟಕ ಹೈಕೋರ್ಟ್​ ಸೂಚನೆ ನೀಡಿದೆ.

ಕರ್ನಾಟಹ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿಯು ರಸ್ತೆಗಳ ಕಳಪೆ ನಿರ್ವಹಣೆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.

ನಿವಾಸಿಗಳ ಕುಂದುಕೊರತೆಗಳನ್ನು ಆಲಿಸುವುದು ಮತ್ತು ವ್ಯವಸ್ಥಿತ ನೀರಿನ ಹರಿವು ನಿರ್ವಹಿಸಲು ಬಿಬಿಎಂಪಿ ಪ್ರತಿ ವಾರ್ಡ್‌ಗೆ ಎಂಜಿನಿಯರ್‌ಗಳ ತಂಡವನ್ನು ಸ್ಥಾಪಿಸಬೇಕು. ಅವರು, ನಿವಾಸಿಗಳ ಕುಂದುಕೊರತೆಗಳನ್ನು ನಿಭಾಯಿಸಲು ಕಾರ್ಯನಿರ್ವಹಿಸಬೇಕೆಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್‌ ವಿಭಾಗವನ್ನು ಸ್ಥಾಪಿಸುವುದು ಕಡ್ಡಾಯ ಎಂದು ಹೇಳಿದೆ.

ಪ್ರಸ್ತಾವನೆಯನ್ನು ತ್ವರಿತಗೊಳಿಸಬೇಕು ಈ ಸಂಬಂಧ ರಾಜ್ಯ ಸರ್ಕಾರ ಶೀಘ್ರದಲ್ಲೇ ಅನುಮೋದನೆ ಪಡೆಯುವಂತೆ ನಾಗರಿಕ ಸಂಸ್ಥೆಗೆ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ವಕೀಲರು ನಗರದಲ್ಲಿ ಪ್ರವಾಹ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ತತ್‌ಕ್ಷಣದ ಕ್ರಮವಾಗಿ, ಪಂಪ್‌ಗಳನ್ನು ಬಳಸಿ ಜಲಾವೃತ ಪ್ರದೇಶಗಳಿಂದ ನೀರನ್ನು ಹೊರಬಿಡಲಾಗುತ್ತಿದೆ ಬೆಂಗಳೂರಿನ ಎಲ್ಲಾ ಕೆರೆಗಳಿಗೆ ಭರ್ತಿಯಾಗಿದೆ ಅವುಗಳಿಗೆ ಗೇಟ್ ಅಳವಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *