14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ₹29 ಏರಿಕೆ: ಹೊಸ ಬೆಲೆ ಜಾರಿ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಗಳ ನಡುವೆ ಅಡುಗೆ ಅನಿಲ ದರವೂ ಮತ್ತೊಮ್ಮೆ ಹೆಚ್ಚಳವಾಗಿದೆ. ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 29 ರೂಪಾಯಿ ಹೆಚ್ಚಳವಾಗಿದ್ದು, ಹೊಸ ದರಗಳು ದೇಶಾದ್ಯಂತ ಜಾರಿಗೆ ಬಂದಿವೆ.
ಕಳೆದ ಕೆಲ ತಿಂಗಳುಗಳಿಂದ ಇಂಧನ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಏರಿಳಿತದ ಪರಿಣಾಮವಾಗಿ ಸಿಲಿಂಡರ್ ದರ ಮತ್ತೆ ಹೆಚ್ಚಾಗಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿಯೂ ದರ ಏರಿಕೆ ಮಾಡಲಾಗಿತ್ತು. ಹೊಸ ಪರಿಷ್ಕರಣೆಯ ಬಳಿಕ ದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 942 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ: 2,823 ಎಕರೆ ಭೂಸ್ವಾಧೀನ ವಿರೋಧಿಸಿ ‘ವಿಧಾನಸೌಧ ಚಲೋ’; ರೈತರ ಬೈಕ್ ರ‍್ಯಾಲಿ ತಡೆದ ಪೊಲೀಸರು

ಗೃಹಬಳಕೆಯ ಸಿಲಿಂಡರ್ ಮಾತ್ರವಲ್ಲದೆ, 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲೂ ಇತ್ತೀಚೆಗೆ ಏರಿಕೆ ಮಾಡಲಾಗಿತ್ತು. ಇದರ ಪರಿಣಾಮವಾಗಿ ಹೋಟೆಲ್ ಹಾಗೂ ಆಹಾರ ಉದ್ಯಮಗಳ ಮೇಲೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಮತ್ತು ಅನಿಲ ಬೆಲೆ ಏರಿಕೆಯಿಂದ ಆಮದು ವೆಚ್ಚ ಹೆಚ್ಚಾಗಿದೆ. ಇದೇ ಕಾರಣದಿಂದ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿವೆ.

ನಷ್ಟ ಸರಿದೂಗಿಸಲು ಕ್ರಮ

ಅಂತಾರಾಷ್ಟ್ರೀಯ ಬೆಲೆ ಏರಿಕೆಯ ನಡುವೆಯೂ ಕಡಿಮೆ ದರದಲ್ಲಿ ಸಿಲಿಂಡರ್ ಪೂರೈಕೆ ಮಾಡುತ್ತಿದ್ದ ತೈಲ ಕಂಪನಿಗಳಿಗೆ ನಷ್ಟ ಉಂಟಾಗುತ್ತಿತ್ತು. ಈ ನಷ್ಟದ ಪ್ರಮಾಣವನ್ನು ಭಾಗಶಃ ಕಡಿಮೆ ಮಾಡುವ ಉದ್ದೇಶದಿಂದ ಹೊಸ ದರ ಜಾರಿಗೊಳಿಸಲಾಗಿದೆ.

ಸರ್ಕಾರ ಹಾಗೂ ತೈಲ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೂ ಗಮನಾರ್ಹ ಪ್ರಮಾಣದ ನಷ್ಟವನ್ನು ಭರಿಸುತ್ತಿದ್ದು, ಸದ್ಯವೂ ಆರ್ಥಿಕ ಒತ್ತಡ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ನೋಡಿ: ಖಾತೆ ಹಂಚಿಕೆಯಲ್ಲಿ ಅಸಮಾಧಾನ: ಹಿರಿತನ ಪರಿಗಣಿಸುತ್ತಿಲ್ಲ ಎಂದ ಸಚಿವ ಕೆ ಹೆಚ್ ಮುನಿಯಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *