ಹೊಸ ಶಾಸಕರಲ್ಲಿ ಅಪರಾಧ ಹಿನ್ನೆಲೆ ಇರೋರೆ ಹೆಚ್ಚು – ಎಡಿಆರ್‌ ವರದಿಯಲ್ಲಿ ಬಹಿರಂಗ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಅಂತ್ಯವಾಗಿ, ನೂತನ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿ ಕ್ರಿಮಿನಲ್‌ ಹಿನ್ನೆಲೆಯುಳ್ಳ ಶಾಸಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕರ್ನಾಟಕ ಎಲೆಕ್ಷನ್‌ ವಾಚ್‌ ಮತ್ತು ಅಸೊಸಿಯೇಷನ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದ ಶೇ.55ರಷ್ಟು ಶಾಸಕರಿಗೆ ಕ್ರಿಮಿನಲ್‌ ಹಿನ್ನೆಲೆ ಎಂಬುದು ಬಹಿರಂಗವಾಗಿದೆ.

122 ಶಾಸಕರು ಕ್ರಿಮಿನಲ್‌ ಹಿನ್ನೆಲೆಯುಳ್ಳವರಾಗಿದ್ದಾರೆ. ಅದರಲ್ಲಿ ಶೇ.32ರಷ್ಟು ಶಾಸಕರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ಬಾರಿಗೆ ಹೋಲಿಸಿದರೆ ಅಪರಾಧ ಹಿನ್ನೆಲೆ ಹೊಂದಿರುವ ಶಾಸಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಬಾರಿ ಅಂದ್ರೇ 2018ರಲ್ಲಿ ಶೇ.35ರಷ್ಟು ಶಾಸಕರು ಅಪರಾಧ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಶೇ.24ರಷ್ಟು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿದ್ದರು

ಇನ್ನು ಕಾಂಗ್ರೆಸ್‌ ಶಾಸಕರ ಪೈಕಿ ಶೇ.58ರಷ್ಟು ಎಂಎಲ್‌ಎಗಳು ಅಪರಾಧ ಹಿನ್ನೆಲೆ ಹೊಂದಿದ್ದರೆ, ಶೇ.52ರಷ್ಟು ಬಿಜೆಪಿ ಶಾಸಕರುಅಪರಾಧ ಹಿನ್ನೆಲೆ ಹೊಂದಿದ್ದರೆ. ಜೆಡಿಎಸ್‌ನ ಶೇ.47ಷ್ಟು ಶಾಸಕರ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್‌ನ 40 ಮಂದಿ, ಬಿಜೆಪಿಯ 23, ಜೆಡಿಎಸ್‌ನ 7 ಜನರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಓರ್ವ ಶಾಸಕರ ಮೇಲೆ ಕೊಲೆ ಪ್ರಕರಣ ಇದ್ದು, ಒಬ್ಬರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. 7 ಶಾಸಕರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ.

ಇದನ್ನೂ ಓದಿ2023ರ ಚುನಾವಣೆಯಲ್ಲಿ ಕ್ರಿಮಿನಲ್ ಕೇಸ್ ಹೊಂದಿರುವ ಅಭ್ಯರ್ಥಿಗಳು ಹೆಚ್ಚು!

ಪಕ್ಷವಾರು ಅಪರಾಧ ಹಿನ್ನೆಲೆ ಇರುವ ಶಾಸಕರು!

ಕಾಂಗ್ರೆಸ್‌ 78/134 (ಶೇ.58)
ಬಿಜೆಪಿ: 34/66 (ಶೇ.52)
ಜೆಡಿಎಸ್‌: 9/19 (ಶೇ.47)
ಕೆಆರ್‌ಪಿಪಿ: 1/1 (ಶೇ.100)
ಒಟ್ಟು: 122/223 (ಶೇ.55)

ಪಕ್ಷವಾರು ಗಂಭೀರ ಅಪರಾಧ ಹಿನ್ನೆಲೆ ಇರುವ ಶಾಸಕರು!

ಕಾಂಗ್ರೆಸ್‌: 40/134 (ಶೇ.30)
ಬಿಜೆಪಿ: 23/66 (ಶೇ.35)
ಜೆಡಿಎಸ್‌: 7/19 (ಶೇ.37)
ಕೆಆರ್‌ಪಿಪಿ: 1/1 (ಶೇ.100)
ಒಟ್ಟು: 122/223 (ಶೇ.55)

 

ಅಪರಾಧ ಹಿನ್ನಲೆ ಉಳ್ಳವರೇ ಶಕ್ತಿಸೌಧದ ತುಂಬ ತುಂಬಿಕೊಂಡರೆ ಜನಸಾಮಾನ್ಯರ ನ್ಯಾಯ ಕೇಳುವವರು ಯಾರು? ಅಪರಾಧ ಹಿನ್ನಲೆ ಇರುವವರು ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *