ಎನ್‌ಇಪಿ ದಿಢೀರ್‌ ಹೇರಿಕೆ ವಿರೋಧಿಸಿ-ಇಂಜಿಯರಿಂಗ್‌ ಶುಲ್ಕ ಹೆಚ್ಚಳ ಖಂಡಿಸಿ ಹೋರಾಟಕ್ಕೆ ಎಐಡಿಎಸ್‌ಒ ಸಮ್ಮೇಳನ ಕರೆ

ಬೆಂಗಳೂರು: ಎನ್‌ಇಪಿ-2020 ಧಿಡೀರ್ ಹೇರಿಕೆ ವಿರೋಧಿಸಿ, ಸರ್ಕಾರಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಳವನ್ನು ಖಂಡಿಸಿ ಪ್ರತಿಭಟನೆಯ ಮೂಲಕ ತಮ್ಮ ವಿದ್ಯಾರ್ಥಿಗಳು ತೀವ್ರತರವಾದ ಹೋರಾಟವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿ ಚಳುವಳಿಯನ್ನು ಪ್ರಬಲಗೊಳಿಸಬೇಕೆಂದು ಎಐಡಿಎಸ್‌ಓ ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್.‌ ಕರೆ ನೀಡಿದರು.

ಅಖಿಲ ಭಾರತ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಜಷನ್‌(ಎಐಡಿಎಸ್‌ಒ) 10 ನೇ ಬೆಂಗಳೂರು ಜಿಲ್ಲಾ ವಿದ್ಯಾರ್ಥಿ ಸಮ್ಮೇಳನವು ನಗರದ ಯುವಿಸಿಇ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಿತು. ಮುಂದುವರೆದು ಮಾತನಾಡಿದ ಅಶ್ವಿನಿ ಕೆ.ಎಸ್.‌ ಅವರು ಈ ಸಮ್ಮೇಳನವು ಒಂದು ಹೊಸ ಉತ್ಸಾಹ, ನಾಯಕತ್ವವನ್ನು ನೀಡಲಿ ಎಂದು ಹೇಳಿದರು.

200 ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಹಲವು ಪ್ರತಿಷ್ಠಿತ ಕಾಲೇಜುಗಳನ್ನು ಪ್ರತಿನಿಧಿಸಿ ಬಂದಿದ್ದ ವಿದ್ಯಾರ್ಥಿಗಳು, ಎಐಡಿಎಸ್‌ಓ ರಾಜ್ಯ ಸಮಿತಿಯ ಅಖಿಲ ಕರ್ನಾಟಕ ಪ್ರತಿಭಟನಾ ದಿನದ ಕರೆಯ ಮೇರೆಗೆ,  ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ, ಎನ್‌ಇಪಿ-2020 ರ ಧಿಡೀರ್ ಹೇರಿಕೆಯನ್ನು ಪ್ರಶ್ನಿಸಿ, ಸರ್ಕಾರಿ ಇಂಜಿನಿಯರಿಂಗ್ ಶುಲ್ಕ ಏರಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಸಮ್ಮೇಳನ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಸಂಘಟನೆಯ ರಾಜ್ಯ ನಾಯಕ ಅಭಯಾ ದಿವಾಕರ್ ಮಾತನಾಡಿದರು.

ಸಮ್ಮೇಳನದ ಉದ್ಘಾಟನೆಯನ್ನು ಅಶ್ವಿನಿ ಕೆ. ಎಸ್. ಹುತಾತ್ಮ ಸ್ಥಂಭಕ್ಕೆ ಮಾಲಾರ್ಪಣೆ ಮಾಡಿ, ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ಜಿಲ್ಲಾ ಅಧ್ಯಕ್ಷರಾದ ಸಿತಾರ , ಹುತಾತ್ಮರಿಗೆ ನಮನ ಸಲ್ಲಿಸಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೆ ಜನ್ಮ ವಾರ್ಷಿಕಕ್ಕೆ ಸಮರ್ಪಿತ ಸಮ್ಮೇಳನದಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹಾಗೂ ಎಸ್ ಯುಸಿ ಐ(ಸಿ) ಜಿಲ್ಲಾ ಕಾರ್ಯದರ್ಶಿ ಶ್ರೀರಾಮ್ ಅವರು ಮಾಲಾರ್ಪಣೆ ಮಾಡಿದರು.  ನಂತರ 3 ಪ್ರಮುಖ ಗೊತ್ತುವಳಿಗಳನ್ನು ಮಂಡಸಿ, ಅನುಮೋದನೆ ಪಡೆಯಲಾಯಿತು.

10 ನೆ ಬೆಂಗಳೂರು ಜಿಲ್ಲಾ ಸಮ್ಮೇಳನದಲ್ಲಿ, ನೂತನ ಅಧ್ಯಕ್ಷರಾಗಿ ಅಭಯಾ ದಿವಾಕರ್, ಕಾರ್ಯದರ್ಶಿಯಾಗಿ ಕಲ್ಯಾಣ್ ಕುಮಾರ್, ಉಪಾಧ್ಯಕ್ಷರುಗಳಾಗಿ ಸಿತಾರ ಹಾಗೂ ಅಪೂರ್ವ, ಖಜಾಂಚಿಯಾಗಿ ವಿನಯ್ ಚಂದ್ರ, ಕಛೇರಿ ಕಾರ್ಯದರ್ಶಿಯಾಗಿ ಕಿಶೋರ್ ಹಾಗೂ 9 ಜನರ ಕಾರ್ಯದರ್ಶಿ ಮಂಡಳಿ, 57 ಜನರ ಎಕ್ಸಿಕ್ಯೂಟಿವ್ ಮತ್ತು 100 ಜನ ಕೌನ್ಸಿಲ್ ಸದಸ್ಯರ ಸಮಿತಿ ಆಯ್ಕೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *