ಬಹುಮತದತ್ತ ಎನ್‌ಡಿಎ ದಾಪುಗಾಲು, 270+ ಕ್ಷೇತ್ರಗಳಲ್ಲಿ ಮುನ್ನಡೆ, 200+ ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು 8 ಗಂಟೆಗೆ ಆರಂಭವಾಗಿದೆ. ಅಂಚೆ ಮತ ಎಣಿಕೆ ಮುಗಿದಿದ್ದು ಇವಿಎಂ ಮತ ಎಣಿಕೆ ಆರಂಭವಾಗಿದೆ. ತಮಿಳುನಾಡು, ಆಂಧ್ರ, ತೆಲಂಗಾಣ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ಮತಎಣಿಕೆಯ ಲೈವ್‌ ಅಪ್‌ಡೇಟ್ಸ್‌ ಇಲ್ಲಿದೆ. ಬಹುಮತ

ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಆರಂಭವಾಗಿದೆ. ಭಾರತದ ಮುಂದಿನ ಪ್ರಧಾನ ಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಲಿರುವ ಈ ಚುನಾವಣಾ ಫಲಿತಾಂಶವನ್ನು ಜಗತ್ತು ಕುತೂಹಲದಿಂದ ಗಮನಿಸುತ್ತಿದೆ. ಷೇರುಪೇಟೆ ಹೂಡಿಕೆದಾರರು ರಿಸಲ್ಟ್‌ ಮುನ್ನೋಟಕ್ಕೆ ತಕ್ಕಂತೆ ಷೇರು ಖರೀದಿ ಮಾರಾಟದ ಕೆಲಸದಲ್ಲಿ ನಿರತರಾಗಿದ್ದಾರೆ. ಭಾರತದ ಹಲವು ಸಂಸದರ ಭವಿಷ್ಯ ಬರೆಯಲಿರುವ, ಭಾರತದ ಅಭಿವೃದ್ಧಿ, ಭವಿಷ್ಯದ ಕುರಿತು ಮುನ್ನುಡಿಯಾಗಲಿರುವ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆಯ ಫಲಿತಾಂಶ; ಅರುಣಾಚಲದಲ್ಲಿ ಬಿಜೆಪಿಗೆ ಬಹುಮತ, ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಮೆಲುಗೈ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಹರಿಯಾಣ, ಕೇರಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಓಡಿಶಾ, ಅಸ್ಸಾಂ, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮೇಘಾಲಯ, ತ್ರಿಪುರ ಸೇರಿದಂತೆ ವಿವಿಧ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಲೋಕಸಭಾ ಕ್ಷೇತ್ರಗಳ ಲೈವ್‌ ಅಪ್‌ಡೇಟ್ಸ್‌ ಇಲ್ಲಿ ನೀಡಲಾಗುತ್ತಿದೆ. ತಾಜಾ ಮಾಹಿತಿಗಾಗಿ ಈ ಪುಟವನ್ನು ಆಗಾಗ ರಿಫ್ರೆಶ್‌ ಮಾಡುತ್ತಿರಿ.

9:20
ಮ್ಯಾಜಿಕ್‌ ನಂಬರ್‌ ತಲುಪಿದ ಎನ್‌ಡಿಎ
ದೇಶಾದ್ಯಂತ ಎನ್‌ಡಿಎ ಮೈತ್ರಿಕೂಟ 272ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸರಳ ಬಹುಮತಕ್ಕೆ 272 ಕ್ಷೇತ್ರಗಳಲ್ಲಿ ಗೆಲುವು ಅನುವಾರ್ಯ. ಎನ್‌ಡಿಎ ಈಗಾಗಲೇ 272 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

9:18 AM
ಸಂದೇಶ್‌ಖಲಿಯಲ್ಲಿ ಬಿಜೆಪಿಗೆ ಮುನ್ನಡೆ
ದೇಶದ ಗಮನಸೆಳೆದಿರುವ ಪಶ್ಚಿಮಬಂಗಾಳದ ಸಂದೇಶ್‌ಖಲಿ ಇರುವ ಬಸೀರ್‌ಹತ್‌ ಕ್ಷೇತ್ರದಲ್ಲಿ ಬಿಜೆಪಿಯ ರೇಖಾ ಪಾತ್ರ ಮುನ್ನಡೆ ಸಾಧಿಸಿದ್ದಾರೆ. ಆರಂಭಿಕ ಟ್ರೆಂಡ್‌ ಪ್ರಕಾರ ರಾಜ್ಯದಲ್ಲಿ ಬಿಜೆಪಿ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, 8 ಕ್ಷೇತ್ರಗಳಲ್ಲಿ ಟಿಎಂಸಿ ಮುಂದಿದೆ.

9:15 AM
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮುನ್ನಡೆ
ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿರುವ ಸಮಾಜವಾದಿ ಪಕ್ಷದ 15 ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ 9 ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಎಸ್‌ಪಿಯ ವೀರೇಂದ್ರ ಸಿಂಗ್‌, ಡಿಂಪಲ್‌ ಯಾದವ್‌, ಅಕ್ಷಯ್‌ ಯಾದವ್‌ ಮುನ್ನಡೆಯಲ್ಲಿದ್ದಾರೆ. ಗೊರಖ್‌ಪುರದಲ್ಲಿ ಬಿಜೆಪಿಯ ರವಿಕಿಶನ್‌ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ನೋಡಿ: ಬಿಜೆಪಿ ನಿದ್ದೆ ಗೆಡಿಸಿದ ಸಟ್ಟಾ ಬಜಾರ್ : INDIA ಮತ್ತು NDA ನಡುವೆ ತೀವ್ರ ಪೈಪೋಟಿ Janashakthi Media

Donate Janashakthi Media

Leave a Reply

Your email address will not be published. Required fields are marked *