ಮಾದರಿ ನಡೆ| ಪ್ರಶಸ್ತಿ ಮೊತ್ತವನ್ನು ಮಕ್ಕಳ ಆಶ್ರಮಕ್ಕೆ ನೀಡಿದ ಮಾಧವಿ ಭಂಡಾರಿ

ಬೆಂಗಳೂರು ಇತ್ತೀಚೆಗೆ ಕೊಪ್ಪಳದಲ್ಲಿ ಎರಡು ದಿನಗಳ ಕಾಲ ನಡೆದ 10 ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿಕತೆಗಾರ್ತಿ ಮಾಧವಿ ಭಂಡಾರಿಗೆ “ಲಡಾಯಿ ಪ್ರಕಾಶನ ಗದಗ, ನವಲಕಲ್ ಬೃಹನ್ಮಠ ಶಾಂತವೀರಮ್ಮ ಹೆಸರಿನಲ್ಲಿ ಕೊಡಮಾಡುವ “ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ” ಯನ್ನು ನೀಡಲಾಯಿತು. ಮಾದರಿ

ಬಂಡಾಯಹ ಸಾಹಿತಿ ಆರ್.ವಿ.ಭಂಡಾರಿಯವರ ಪುತ್ರಿ ಜನಪರ ಚಿಂತಕಿಯಾಗಿರುವ ಮಾಧವಿಯವರು ಪ್ರಶಸ್ತಿ ಮೊತ್ತವನ್ನು ( ಹತ್ತು ಸಾವಿರ) ಅರಸಿಕೇರಿಯ ಕಸ್ತೂರಬಾ ಗಾಂಧಿ ನ್ಯಾಶನಲ್ ಮೇಮೊರಿಯಲ್ ಟ್ರಸ್ಟ್ ಗೆ ನೀಡಿ ತಮ್ಮ ‍ಶ್ರೇಷ್ಠತೆ ಮೆರೆದಿದ್ದಾರೆ. ಅರಸಿಕೇರೆಯಲ್ಲಿರುವ ಮಕ್ಕಳ ಆಶ್ರಮದಲ್ಲಿನ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಪ್ರಶ್ತಿಯ ಹಣವನ್ನು ನೀಡಿದ್ದಾರೆ.  “ನನ್ನ ಇಡೀ ಕುಟುಂಬ ಕೂಡಿಡುವುದಕ್ಕಿಂತ ಹಂಚುವುದರಲ್ಲೇ ಸುಖ ಕಂಡಿದ್ದು. ಅದೂ ಅನ್ನದಾನಮ್ಮನ ಹೆಸರಿನ ಪ್ರಶಸ್ತಿ ನನಗೆ ದಕ್ಕಿದ್ದು ಎಲ್ಲ ಪ್ರಶಸ್ತಿಗಿಂತ ಹೆಚ್ಚು ಸುಖ ತಂದ ಸಂಗತಿ. ಅದರ ಜೊತೆ ಬಂದ ಅಮೂಲ್ಯ ಮೊತ್ತವನ್ನು ಅನ್ನದಾಸೋಹಕ್ಕೆ ನೀಡಿದ್ದೆನೆ ಎಂದು ಮಾಧವಿಯವರು ಜನಶಕ್ತಿ ಮೀಡಿಯಾಗೆ ತಿಳಿಸಿದರು. ಮಾದರಿ

ಇದನ್ನೂ ಓದಿ: ಕೇಂದ್ರ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಶಿವಕುಮಾರ ಮೇಟಿ

” ಮಾಧವಿಯವರ ಕಾರ್ಯ ಖುಷಿ ಕೊಟ್ಟಿದೆ, ಅನ್ನದಾನಮ್ಮನ ದಾನವನ್ನು ಅನ್ನದಾಸೋಹಕ್ಕೆ ಬಳಸಿದ ತೃಪ್ತಿ ಇದೆ. ನನ್ನಮ್ಮ ಇನ್ನೂ ಬದುಕಿದ್ದಾಳೆ ಅನ್ನಿಸಿತು” ಎಂದು ಪ್ರಶಸ್ತಿಯನ್ನು ಪ್ರಯೋಜಿಸಿರುವ ಮಹಾಂತೇಶರವರು ಅಭಿಪ್ರಾಯ ಪಟ್ಟರು.

ಮಾಧವಿಯವರ ಈ ಕಾರ್ಯಕ್ಕೆ ದೊಡ್ಡ ಮನಸಿಗೆ ಏನು ಹೇಳಿದರೂ ಕಡಿಮೆ ಅನ್ನಿಸಿಬಿಡುತ್ತದೆ. ನಮ್ಮ ಎದೆಯಾಳದ ಸಾವಿರದ ಶರಣು ಶರಣಾರ್ಥಿಗಳು ಎಂದು ಲಡಾಯಿ ಪ್ರಕಾಶನದ ಬಸೂ ಅವರು ಪ್ರತಿಕ್ರಿಯಿಸಿದ್ದಾರೆ.

ಮಾಧವಿ ಭಂಡಾರಿಯವರ ಕಾರ್ಯವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್‌ ಶ್ಲಾಘಿಸಿದ್ದಾರೆ.  “ಆರ್.ವಿ ಇಡೀ‌‌ ಕುಟುಂಬ ತನಗಾಗಿ ಮಾಡಿಕೊಂಡಿದ್ದು ಏನು ಇಲ್ಲ ಆ ಪರಂಪರೆಯನ್ನು ‌ಮಾಧವೀ ಅಕ್ಕ ಮುಂದುವರೆಸಿದ್ದಾರೆ ಸ್ಥಾವರಕ್ಕಳಿವುಂಟು ಜಂಗಮಕೆ ಅಳಿವಿಲ್ಲ..” ಎಂದು ಪ್ರತಿಕ್ರಿಯಿಸಿದ್ದಾರೆ.

ಅತ್ಯಂತ ಹೆಮ್ಮೆಯ ಕೆಲಸಕ್ಕೆ ಅಭಿನಂದನೆಗಳು. ಪ್ರಶಸ್ತಿಯ ಅರ್ಥ ಇನ್ನಷ್ಟೂ ಹಿಗ್ಗಿಸಿದರು ಎಂದು ಪ್ರೀತಿಪದದ ಯಮುನಾ ಗಾಂವ್ಕರ್‌ ತಿಳಿಸಿದ್ದಾರೆ.

 ಇದನ್ನೂ ನೋಡಿ: ಚುನಾವಣಾ ಫಲಿತಾಂಶದ ನಂತರವೂ ಮುಸ್ಲಿಂರೇ ಟಾರ್ಗೆಟ್‌!? – ಮುನೀರ್ ಕಾಟಿಪಳ್ಳ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *