ನವಗ್ರಹ ಸಿನಿಮಾದ ಖ್ಯಾತಿಯ ಗಿರಿ ದಿನೇಶ್‌ ನಿಧನ

ಬೆಂಗಳೂರು: ನ್ನಡ ಚಿತ್ರರಂಗ ಹಿರಿಯ ನಟ ದಿನೇಶ್‌ ಪುತ್ರ ನವಗ್ರಹ ಖ್ಯಾತಿಯ ಗಿರಿ ದಿನೇಶ್‌ ನಿಧನರಾಗಿದ್ದಾರೆ. 45 ವರ್ಷದ ಗಿರಿ ದಿನೇಶ್‌, ನೆನ್ನೆ ಫೆಬ್ರವರಿ 07, ಶುಕ್ರವಾರ ಸಂಜೆ ತಮ್ಮ ಅಣ್ಣನ ಮನೆಯಲ್ಲಿ ಪೂಜೆ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಖ್ಯಾತಿ

ಅವರು ಏಕಾಏಕಿ ಅಸ್ವಸ್ಥರಾಗಿ ಕುಸಿದ್ದು ಬಿದ್ದಿದ್ದೂ, ಕೂಡಲೇ ಅವರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಆದರೆ, ಗಿರಿ ದಿನೇಶ್‌ ಮಾರ್ಗ ಮಧ್ಯವೇ ಕೊನೆಯುಸಿರೆಳೆದಿದ್ದಾರೆ. ಗಿರಿ ದಿನೇಶ್‌ ಅವರಿಗೆ ಹೃದಯಾಘಾತವಾಗಿದೆ ಎನ್ನುವುದು ಸದ್ಯದ ಮಾಹಿತಿಯಾಗಿದೆ.

ಗಿರಿ ದಿನೇಶ್‌ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ನವಗ್ರಹ ಚಿತ್ರದಲ್ಲಿ ನಟಿಸಿದ್ದರು. ನವಗ್ರಹ ಚಿತ್ರದ ವಿಶೇಷತೆಯಾದ 9 ಖಳನಟರ ಪುತ್ರರಲ್ಲಿ ಇವರು ಕೂಡ ಒಬ್ಬರಾಗಿದ್ದರು. ಚಮ್ಕಾಯ್ಸು ಚಿಂದಿ ಉಡಾಯ್ಸು, ವಜ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಗಿರಿ ದಿನೇಶ್‌ ಗೆ ನಟನೆಯಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ.

ಇದನ್ನೂ ಓದಿ: ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ : ಬಿಜೆಪಿಗೆ ಆರಂಭಿಕ ಮುನ್ನಡೆ

ಆದರೆ ನವಗ್ರಹ ಚಿತ್ರ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ನವಗ್ರಹ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಗಿರಿ ದಿನೇಶ್‌ ಇತ್ತೀಚಿಗೆ ನವಗ್ರಹ ರೀ-ರಿಲೀಸ್‌ ವೇಳೆಯೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ನವಗ್ರಹ ಚಿತ್ರದಲ್ಲಿ ಗಿರಿ ದಿನೇಶ್‌ ಹಾಗೂ ನಾಗೇಂದ್ರ ಅರಸ್ ಅವರ ನಾಗಿ- ಶೆಟ್ಟಿ ಕಾಂಬಿನೇಷನ್ ಹಿಟ್ ಆಗಿತ್ತು. ಡ್ಯೂಪ್ಲಿಕೇಟ್ ವಸ್ತುಗಳನ್ನು ಮಾಡುವ ಬ್ಯುಸಿನೆಸ್‌ ಮಾಡಿಕೊಂಡಿದ್ದ ಈ ಜೋಡಿ ಕೊನೆಗೆ ಜಗ್ಗು ಅಂಡ್ ಗ್ಯಾಂಗ್ ಜೊತೆ ಸೇರಿ ಅಂಬಾರಿ ಕದಿಯುವ ಸಾಹಸಕ್ಕೆ ಕೈ ಹಾಕುತ್ತಾರೆ.

ಮೈಸೂರು ದಸರಾ ಅಂಬರಿ ಕದಿಯುವ ಕಥೆಯಲ್ಲಿ ನಾಗಿ- ಶೆಟ್ಟಿ ಡಮ್ಮಿ ಅಂಬಾರಿಯನ್ನು ಅಸಲಿ ಅಂಬಾರಿ ಜಾಗಕ್ಕೆ ಇಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನವಗ್ರಹದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಗಿರಿ ದಿನೇಶ್‌ ಬಳಿಕ ನಟನೆಯ ಅವಕಾಶವಿರದೇ ಚಿತ್ರರಂಗದಿಂದ ದೂರ ಉಳಿದುಕೊಂಡರು.

ಇದನ್ನೂ ನೋಡಿ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಂದ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *