ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆದೇಶಾದ್ಯಂತ ಬೆಂಬಲ

ದೆಹಲಿ: ಡಬ್ಲ್ಯುಎಫ್‌ಐ ಮುಖ್ಯಸ್ಥ , ಬಿಜೆಪಿ ಸಂಸದನ್ನು ಬಂಧಿಸಿ: ಜೂನ್ 1 ರಂದು ದೇಶದೆಲ್ಲೆಡೆ ಆಗ್ರಹ ಸಂಯುಕ್ತಕಿಸಾನ್ ಮೋರ್ಚಾ, ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಮತ್ತು ಮಹಿಳಾ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಕರೆಗೆಓಗೊಟ್ಟು ಈ ಎಲ್ಲ ವಿಭಾಗಗಳ ಜನರು ಭಾರತ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬೃಜ್‌ ಭೂಷಣ್ ಶರಣ್ ಸಿಂಗ್ ರನ್ನುತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ನಡೆದಿರುವ ಮತ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ರ‍್ಯಾಣ, ಪಂಜಾಬ್, ಉತ್ತರಪ್ರದೇಶ, ಬಿಹಾರ, ಛತ್ತೀಸ್‌ಗಡ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಜಿಲ್ಲಾ ಮತ್ತು ಬ್ಲಾಕ್‌ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿವೆ, ಪೋಲೀಸರು ಅಂರ‍್ರಾಷ್ಟಿಯ ಖ್ಯಾತಿಯ ಮಹಿಳಾ ಕುಸ್ತಿಪಟುಗಳನ್ನು ಎಳೆದೊಯ್ಯುವ ಚಿತ್ರಗಳು ಗ್ರಾಮೀಣ ಜನರಲ್ಲಿಆಕ್ರೋಶ ಉಂಟು ಮಾಡಿವೆ ಎಂದು ವರದಿಯಾಗಿದೆ.

ಆರಂಭದಿಂದಲೂ ಈ ಹೋರಾಟದೊಂದಿಗೆಇರುವಎಐಡಿಡಬ್ಲ್ಯುಎ ಮುಖಂಡರಾದಜಗ್ಮತಿ ಸಂಗ್ವಾನ್‌ತಮ್ಮ ಹೆಣ್ಣುಮಕ್ಕಳ ಭದ್ರತೆಯ ಪ್ರಶ್ನೆ ಈಗ ಎಲ್ಲ ಜಾತಿಗಳ ಜನಗಳಲ್ಲೂ ಮಾರ್ದನಿಗೊಳ್ಳುತ್ತಿದೆಎಂದುಇಂತಹಒಂದು ಪ್ರತಿಭಟನೆಯಲ್ಲಿ ಭಾಗವಹಿಸುತ್ತ ಹೇಳಿದರು. ಕೇಂದ್ರ ಸರಕಾರ ತನಿಖೆಗಳಲ್ಲಿ ಹಸ್ತಕ್ಷೇಪ ಮಾಡಲಾಗದು ಎಂಬ ಕೇಂದ್ರ ಮಂತ್ರಿ ಸ್ಮೃತಿಇರಾನಿಯವರ ಟಿಪ್ಪಣಿಯ ಬಗ್ಗೆ ಪ್ರತಿಕ್ರಿಯಿಸುತ್ತ “ಕಾನೂನು ತನ್ನದಾರಿಯಲ್ಲಿ ನಡೆಯಲು ಬಿಡಬೇಕುಎಂದು ಹೇಳುವುದು ಕೇವಲ ನರಿಬುದ್ಧಿಯನ್ನುತೋರಿಸುತ್ತದೆ; ಇಲ್ಲ, ಕಾನೂನು ತನ್ನದಾರಿಯಲ್ಲಿ ನಡೆಯಲು ಬಿಡುತ್ತಿಲ್ಲ. ಸುಪ್ರಿಂಕೋರ್ಟ್ ಮಧ್ಯಪ್ರವೇಶಿಸಿದ ನಂತರವೇ ಎಫ್‌ ಈ ಆರ್‌ ದಾಖಲಾಗಿದೆ. ದೂರಿತ್ತ ಕುಸ್ತಿಪಟುಗಳ ಕುಟುಂಬಗಳ ಮೇಲೆ ಅಧಿಕಾರ ಬಲ ಮತ್ತು ಹಣಬಲದ ಭಾರೀಒತ್ತಡ ಬೀಳುತ್ತಿದೆ”ಎಂದುಅವರು ಹೇಳಿದರು.

ಕೇಂದ್ರ ದಿಲ್ಲಿಯಲ್ಲಿ ನಡೆದ ಮತಪ್ರದರ್ಶನದಲ್ಲಿ ಡಬ್ಲ್ಯುಎಫ್‌ಐಅಧ್ಯಕ್ಷನನ್ನು ಬಂಧಿಸಬೇಕೆಂಬ ಘೋಷಣೆಯೊಂದಿಗೆ “ದಿಲ್ಲಿ ಪೋಲೀಸ್‌ಗೆ ಧಿಕ್ಕಾರ”ದ ಘೋಷಣೆಗಳೂ, ‘ಇಂಕ್‌ಲಾಬ್‌ಜಿಂದಾಬಾದ್’ ಘೋಷಣೆಗಳೂ ಮೊಳಗಿದವು. “ದೂರುಕೊಡಲು ಹಿಂಜರಿಯುತ್ತಿದ್ದವರಲ್ಲಿ ಈ ಹೋರಾಟ ಈಗ ಧೈರ್ಯತುಂಬಿದೆ. ಆದ್ದರಿಂದಲೇಒಂದಲ್ಲಎರಡು ಬಾರಿಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ನಡೆದಿದೆ. ಇಡೀದೇಶ ,ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರುಅವರ ಬೆನ್ನಿಗೆ ನಿಂತಿದ್ದಾರೆ. ನಾವು ಗೆದ್ದೇಗೆಲ್ಲುತ್ತೇವೆ” ಎಂದುಎಐಡಿಡಬ್ಲ್ಯುಎ ನ ಇನ್ನೊಬ್ಬ ಮುಖಂಡರಾದ ಮೈಮುನಾ ಮೊಲ್ಲ ಹೇಳಿದ್ದಾರೆ.

ಈ ನಡುವೆಅಯೋಧ್ಯೆಯಲ್ಲಿ ಡಬ್ಲ್ಯುಎಫ್‌ ಅಧ್ಯಕ್ಷ ಜೂನ್ 5 ರಂದು ನಡೆಸಬೇಕೆಂದಿರುವ ‘ಜನಚೇತನರ‍್ಯಾಲಿ’ಯಲ್ಲಿ ಭಾಗವಹಿಸಲಿರುವ ಸಂತರುಗಳು ಪೋಕ್ಸೊಕಾಯ್ದೆಯತಿದ್ದುಪಡಿಗೆ ಆಗ್ರಹಿಸುವುದಾಗಿ ಹೇಳಿದ್ದಾರೆ. ಈ ಕಾಯ್ದೆಯ ಪ್ರಕಾತಈತ ಈಗಾಗಲೇ ಕಂಬಿ ಎಣಿಸಬೇಕಾಗಿತ್ತು. ದಿಲ್ಲಿ ಪೋಲೀಸರಕೃಪೆಯಿಂದ ಹಾಗಾಗಿಲ್ಲಎಂದುಒಬ್ಬರುಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅಯೋಧ್ಯೆ ಪೋಲೀಸರು ಈ ರ‍್ಯಾಲಿಗೆ ಅನುಮತಿಯನ್ನುಇದುವರೆಗೆ ನೀಡಿಲ್ಲಎಂದೂ ವರದಿಯಾಗಿದೆ. ಆ ದಿನ ಈ ರ‍್ಯಾಲಿ ನಡೆದರೆದೇಶಾದ್ಯಂತ ಬೃಜ್‌ಭೂಷಣ್ ಸಿಂಗ್ ಪ್ರತಿಕೃತಿದಹನವನ್ನು ನಡೆಸಲಾಗುವುದುಎಂದುಪ್ರತ್ರಿಭಟನಾಕಾರರು ಹೇಳಿದ್ದಾರೆ.

ರಾಷ್ಟ್ರಪತಿಗಳಿಗೆ ಎಸ್‌ಕೆಎಂ ಮನವಿ ಪತ್ರ

ಈ ಪ್ರತಿಭಟನೆಗಳಲ್ಲಿ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಸಂಯುಕ್ತಕಿಸಾನ್ ಮೋರ್ಚಾದಮನವಿ “.. ಕುಸ್ತಿ ಒಂದು ಗ್ರಾಮೀಣ ಕ್ರೀಡೆ ಎಂದು ಸ್ವತಃರೈತನ ಮಗಳಾದ ತಮಗೆಗೊತ್ತಿದೆ, ಮತ್ತು ಬೃಜ್‌ಭೂಷಣ್ ಶರಣ್ ಸಿಂಗ್‌ರ ದುಷ್ಟತನಕ್ಕೆ, ಬೇಟೆಗೆ ಬಲಿಯಾಗುತ್ತಿರುವವರು ಗ್ರಾಮೀಣ/ ರೈತರ ಕಟುಂಬಗಳಿಗೆ ಸೇರಿದವರು. ಆದ್ದರಿಂದಲೇದೇಶಕ್ಕೆ ಅಂರ‍್ರಾಷ್ಟಿಯ ಖ್ಯಾತಿ ತರಲುಕಠಿಣ ಶ್ರಮ ಹಾಕಿರುವರೈತರ ಹೆಣ್ಣುಮಕ್ಕಳನ್ನು ಕೇಂದ್ರ ಸರಕಾರ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿರುವುದು ನಮಗೆ ಆತಂಕ ಉಂಟುಮಾಡುತ್ತದೆ” ಎಂದು ಕಳವಳ ವ್ಯಕ್ತಪಡಿಸಿದೆ.

ಸುಪ್ರಿಂಕೋರ್ಟ್ ಮಧ್ಯಪ್ರವೇಶದ ನಂತರವೇಎಫ್‌ಐಆರ್ ಹಾಕಿದ ದಿಲ್ಲಿ ಪೋಲಿಸ್ ಒಂದೆಡೆ ಈ ವಿಳಂಬದ ನಂತರವೂತನಿಖೆಯಲ್ಲಿ ಕಾಲೆಳೆಯುತ್ತಿದ್ದರೆ, ಇನ್ನೊಂದೆಡೆಯಲ್ಲಿಕೇಂದ್ರ ಸರಕಾರದಅಢಿಯಲ್ಲಿರುವ ಈ ಪೋಲಿಸ್ ಕುಸ್ತಿಪಟುಗಳ ಪ್ರತಿಭಟನಾ ಮೆರವಣಿಗೆಯನ್ನುಅಮಾನುಷವಾಗಿದಮನ ಮಾಡಿಅವರ ಮೇಲೆಯೇಎಫ್‌ಐಆರ್ ಹಾಕಿ ಅವರುಅಲ್ಲಿ ಪ್ರತಿಭಟಿಸದಂತೆ ಮಾಡುತ್ತಿದೆಎಂಬುದನ್ನು ರಾಷ್ಟಪತಿಗಳ ಗಮನಕ್ಕೆ ತಂದಿರುವಎಸ್‌ಕೆಎಂ ಮಹಿಳಾ ಕುಸ್ತಿಪಟುಗಳೊಂದಿಗೆ ಅಮಾನುಷವಾಗಿ ವರ್ತಿಸಿರುವ ಪೋಲೀಸ್ ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಬೇಕು, ಕುಸ್ತಿಪಟುಗಳಿಗೆ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಯನ್ನು ಮುಂದುವರೆಸಲು ಅನುಮತಿಕೊಡಬೇಕು, ಬೃಜ್ ಭೂಷಣ್ ಶರಣ್ ಸಿಂಗ್‌ರನ್ನು ತಕ್ಷಣವೇ ಬಂಧಿಸಿ, ಪೋಲಿಸ್ ಕಸ್ಟಡಿಯಲ್ಲಿಆತನ ವಿಚಾರಣೆಯನ್ನುತ್ವರಿತವಾಗಿ ನಡೆಸಿ ಆರೋಪ ಪಟ್ಟಿಹಾಕಿ ವಿಚಾರಣೆ ನಡೆಸಬೇಕುಎಂದು ಆಗ್ರಹಿಸಿದೆ.

ಮಹಿಳಾ ಕುಸ್ತಿಪಟುಗಳ ವಿರುದ್ಧ ದಿಲ್ಲಿ ಪೋಲೀಸ್‌ವರ್ತನೆಗೆವ್ಯಾಪಕ ವಿರೋಧ :ಮಹಿಳೆಯರು, ರೈತರು ಮತ್ತುಚಿಂತಕರಖಂಡನೆ

ಇದರ ಮೊದಲುಹೊಸ ಸಂಸದ್ ಭವನದಉದ್ಘಾಟನಾ ಸಮಾರಂಭ ನಡೆಯುತ್ತಿದ್ದಾಗಲೇ ಮಹಿಳಾ ಗೌರವ ಪಂಚಾಯತ್‌ನಲ್ಲಿ ಭಾಗವಹಿಸಲು ಆ ಭವನದತ್ತ ತೆರಳುತ್ತಿದ್ದ ಕುಸ್ತಿಪಟುಗಳು ಮತ್ತುಅವರ ಬೆಂಬಲಿಗರ ವಿರುದ್ಧ ದಿಲ್ಲಿ ಪೋಲಿಸ್ ನಡೆಸಿರುವ ಕಾರ್ಯಾಚರಣೆಯನ್ನು ಮಹಿಳಾ ಸಂಘಟನೆಗಳು, ರೈತರ ಸಂಘಟನೆಗಳು ಮತ್ತುದೇಶದ ಸಾವಿರಕ್ಕೂ ಹೆಚ್ಚು ಬುದ್ಧಿಜೀವಿಗಳು, ಸಮಾಜ ಸೇವಕರು, ವಕೀಲರು, ಶಿಕ್ಷಣ ತಜ್ಞರು ಬಲವಾಗಿ ಖಂಡಿಸಿದ್ದಾರೆ.

ಅಮಾನುಷ ಹಲ್ಲೆ – ಎಐಡಿಡಬ್ಲ್ಯುಎ ಆಕ್ರೋಶ

ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ಪೊಲೀಸರುಅಮಾನುಷವಾಗಿ ಹಲ್ಲೆ ನಡೆಸಿ ಬಂಧಿಸಿರುವುದು ಆಕ್ರೋಶಕಾರಿ, ಈ ಸರಕಾರದ ಸರ್ವಾಧಿಕಾರಿ ಮುಖವನ್ನುಇದು ಬಹಿರಂಗಪಡಿಸುತ್ತದೆಎಂದಿರುವ ಅಖಿಲ ಭಾರತಜನವಾದಿ ಮಹಿಳಾ ಸಂಘ (ಎಐಡಿಡಬ್ಲ್ಯುಎ) ಹೇಳಿದೆ. ಈ ಪಂಚಾಯತಿಗೆ ಬೆಂಬಲ ಮತ್ತು ಸೌಹಾರ್ದ ವ್ಯಕ್ರಪಡಿಸಿ ಭಾಗವಹಿಸಲು ಹೊರಟಿದ್ದ ಮಹಿಳಾ ಕಾರ್ಯಕರ್ತರು ಮತ್ತು ಮುಖಂಡರನ್ನುಅವರ ನಿವಾಸಗಳಿಂದ ಪೊಲೀಸರು ಬಂಧಿಸಿದರು. ಮಹಿಳಾ ಕುಸ್ತಿಪಟುಗಳ ಪ್ರತಿಭಟನಾ ಸ್ಥಳವನ್ನು ದಿಲ್ಲಿ ಪೊಲೀಸರುಒಡೆದು ನಾಶಪಡಿಸಿದರು. ಎಐಡಿಡಬ್ಲ್ಯುಎ ಉಪಾಧ್ಯಕ್ಷರುಗಳಾದ ಸುಭಾಷಿಣಿ ಅಲಿ, ಜಗ್ಮತಿ ಸಂಗ್ವಾನ್, ದೆಹಲಿ ಅಧ್ಯಕ್ಷೆ ಮೈಮೂನಾ ಮೊಲ್ಲಾ, ಅನ್ನಿರಾಜಾ(ಎನ್‌ಎಫ್‌ಐಡಬ್ಲ್ಯು), ಪೂನಂ ಕೌಶಿಕ್ (ಪಿಎಂಎಸ್) ಮತ್ತು ನೂರಾರು ಮಹಿಳೆಯರೊಂದಿಗೆ ಡಿವೈಎಫ್‌ಐ ಮತ್ತುಎಸ್‌ಎಫ್‌ಐಕಾರ್ಯಕರ್ತೆಯರನ್ನೂ ಬಂಧಿಸಲಾಗಿದೆ. ಅಖಿಲ ಭಾರತಕಿಸಾನ್ ಸಭಾದ (ಎಐಕೆಎಸ್) ರೈತರ ಬಸ್ಸುಗಳನ್ನು ದೆಹಲಿಗೆ ಪ್ರವೇಶಿಸದಂತೆ ತಡೆಯಲಾಗುತ್ತಿದೆಎಂದುಎಐಡಿಡಬ್ಲ್ಯುಎ ಹೇಳಿದೆ.

ಪ್ರಜಾಪ್ರಭುತ್ವದ ಮೇಲೆ ನಾಚಿಕೆಗೇಡಿ ದಾಳಿ-ಎಸ್‌ಕೆಎಂ

ದೇಶವ್ಯಾಪಿ ರೈತ ಸಂಘಟನೆಗಳ ಐಕ್ಯ ವೇದಿಕೆ ‘ಸಂಯುಕ್ತಕಿಸಾನ್ ಮೋರ್ಚಾ’(ಎಸ್‌ಕೆಎಂ) ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಕರಾಳ ದಿನ, ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಮೇಲೆ ನಾಚಿಕೆಗೇಡಿ ದಾಳಿ ನಡೆಸಿರುವ ದಿನ ಎಂದು ಖಂಡಿಸಿದೆ. ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ದಮನವನ್ನು ನಿಲ್ಲಿಸಬೇಕು, ಬಂಧಿತಎಲ್ಲ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕುಎಂದುಅದು ಆಗ್ರಹಿಸಿದೆ.

ನರೇಂದ್ರ ಮೋದಿ ನೇತೃತ್ವದ ಹೇಡಿ ಬಿಜೆಪಿ ಸರ್ಕಾರ 2023 ರ ಮೇ 28 ರಂದು ಮಹಿಳಾ ಕುಸ್ತಿಪಟುಗಳು ಕರೆ ನೀಡಿದ್ದ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಮುರಿಯಲು ಮೇ 27 ರಿಂದಲೇ ದಿಲ್ಲಿ ಗಡಿಗಳನ್ನು ಮುಚ್ಚಿತು, ಅನೇಕ ಕಾರ್ಯಕರ್ತರನ್ನು ಬಂಧಿಸಿತು ಮತ್ತು ಹಲವರನ್ನುಗೃಹಬಂಧನದಲ್ಲಿ ಇರಿಸಿತು. ರೈತರು ಮತ್ತು ಮಹಿಳೆಯರು ದೆಹಲಿಗೆತಲುಪುವುದನ್ನುತಡೆಯಲು ಗಡಿಗಳನ್ನು ಮುಚ್ಚಲಾಯಿತು. ವಿಪರ್ಯಾಸವೆಂದರೆ ಹೊಸ ಸಂಸತ್ತನ್ನು ಪ್ರಧಾನಿ ಉದ್ಘಾಟಿಸಿದ ದಿನದಂದು, ಇಂತಹಅಭೂತಪೂರ್ವ ಬಲಪ್ರಯೋಗವನ್ನು ಸರಕಾರ ನಡೆಸಿತು. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ ಮಹಿಳಾ ಕುಸ್ತಿಪಟುಗಳು ಮತ್ತು ವಿವಿಧ ಕ್ರೀಡಾಪಟುಗಳು, ಮಹಿಳೆಯರು, ರೈತರನ್ನುಅವರಕೈಯಲ್ಲಿದ್ದರಾಷ್ಟ್ರಧ್ವಜಕ್ಕೂಅಗೌರವತೋರಿ ಎಳೆದಾಡಿ ಪೊಲೀಸರು ವಿವಿಧ ಠಾಣೆಗಳಿಗೆ ಕರೆದೊಯ್ದರು. ಭಾರತಕ್ಕೆ ಪದಕಗೆದ್ದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತುಇತರರ ಮೇಲೆ ಯಾವುದೇ ಪ್ರಚೋದನೆಇಲ್ಲದೆ ಹಲ್ಲೆ ನಡೆಸಿ ಬಂಧಿಸಲಾಯಿತು..ಅವರು ಶಾಂತಿಯುತ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಡೇರೆಯನ್ನೂ ಪೊಲೀಸರು ಸಂಪೂರ್ಣ ಧ್ವಂಸಗೊಳಿಸಿದರು. ವಿವಿಧ ಮಹಿಳಾ ಸಂಘಟನೆಗಳ ಮುಖಂಡರಾದ ಸುಭಾಷಿಣಿ ಅಲಿ, ಜಗಮತಿ ಸಂಗ್ವಾನ್, ಅನ್ನಿರಾಜಾ, ಪೂನಂ ಕೌಶಿಕ್, ಮೈಮೂನಾ ಮೊಲ್ಲಾ, ಮತ್ತುರೈತ ಮುಖಂಡರಾದ ಚರಂಜಿತ್‌ ಕೌರ್‌ಧುರಿಯನ್ ಮತ್ತು ದವೀಂದರ್‌ಕೌರ್ ಹರದಾಸ್ಪುರ ಮತ್ತುಇತರರನ್ನು ಬಂಧಿಸಲಾಯಿತು. ಇದು ಬಿಜೆಪಿಯ ಮಹಿಳಾ ವಿರೋಧಿ, ಪ್ರಜಾಸತ್ತಾತ್ಮಕವಲ್ಲದಗುಣವನ್ನು ಬಹಿರಂಗಪಡಿಸುತ್ತದೆ ಮತ್ತು ಲೈಂಗಿಕ ಕಿರುಕುಳದ ಆಪಾದಿತರನ್ನುರಕ್ಷಿಸಲುಅವರುಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂದು ಎಸ್‌ಕೆಎಂ ಅಭಿಪ್ರಾಯಪಟ್ಟಿದೆ. ಇದು ಪ್ರಧಾನಿಯವರ ಬೇಟಿ ಬಚಾವೋ ಘೋಷಣೆಯ ಪೊಳ್ಳುತನವನ್ನು ತೋರಿಸುತ್ತದೆ ಎಂದು ಅದು ಹೇಳಿದೆ.

ಹೋರಾಟ ತೀವ್ರಗೊಳ್ಳುತ್ತದೆ-ಸರಕಾರಕ್ಕೆಎಚ್ಚರಿಕೆ

‘ಮಹಿಳಾ ಸಮ್ಮಾನ್ ಮಹಾಪಂಚಾಯತ್’ನಲ್ಲಿ ಪಾಲ್ಗೊಳ್ಳಲು ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಸೌಹಾರ್ದ ವ್ಯಕ್ತಪಡಿಸಲು ಸಾವಿರಾರುಜನರು ದಿಲ್ಲಿಯತ್ತ ಬರುತ್ತಿದ್ದರು. ರೋಹ್ಟಕ್, ಹಿಸಾರ್, ಭಿವಾನಿ, ಜಿಂದ್, ಫತೇಹಾಬಾದ್, ಸಂಪ್ಲಾ, ಪಲ್ವಾಲ್, ಗುರ್ಗಾಂವ್ ಮತ್ತುಇತರ ಸ್ಥಳಗಳಲ್ಲಿ ಅವರ ಮೇಲೆ ದಬ್ಬಾಳಿಕೆ ಹರಿಯ ಬಿಡಲಾಯಿತು, ಸಾವಿರಾರುಜನರನ್ನು ಬಂಧಿಸಲಾಯಿತು. ಪಂಜಾಬ್‌ನ ಮಹಿಳೆಯರು ಮತ್ತುರೈತರನ್ನು ನರ್ವಾನಾ ಬಳಿಯ ಪಂಜಾಬ್-ಹರಿಯಾಣಗಡಿಯಲ್ಲಿ ಬಂಧಿಸಲಾಯಿತು.. ಅಂಬಾಲಾ ನಗರದಗುರುದ್ವಾರ ಮಂಜಿ ಸಾಹಿಬ್‌ನಲ್ಲಿ ನೂರಾರುಜನರನ್ನು ಬಂಧಿಸಲಾಯಿತು. ಅನೇಕ ರೈತರನ್ನು ಸಿಂಘು ಗಡಿಯ ಬಳಿ ಬಂಧಿಸಿ ಸೋನೆಪತ್‌ನ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು. ಟಿಕ್ರಿಗಡಿಗೆ ತೆರಳುತ್ತಿದ್ದ ಸುಮಾರು ಸಾವಿರರೈತರನ್ನು ವಶಕ್ಕೆ ಪಡೆಯಲಾಗಿದೆ. ಎಸ್‌ಕೆಎಂ ನಾಯಕರಾ ಕೇಶ್‌ಟಿಕಾಯ್ತ್ ಮತ್ತು 2೦೦೦ ಕ್ಕೂ ಹೆಚ್ಚು ರೈತರುಗಾಜಿಪುರಗಡಿಯನ್ನುತಲುಪಿದರುಅಲ್ಲಿಅವರನ್ನುತಡೆದರು. ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ರೈತರನ್ನು ಬಂಧಿಸಲಾಯಿತು ಎಂದಿರುವ ಎಸ್‌ಕೆಎಂಎಲ್ಲಾ ಪ್ರಜಾಸತ್ತಾತ್ಮಕ ವರ್ಗಗಳಿಗೆ ಪ್ರತಿಭಟನೆಯಲ್ಲಿಎದ್ದು ನಿಲ್ಲುವಂತೆ ಕರೆ ನೀಡಿದೆ. ಲೈಂಗಿಕ ಕಿರುಕುಳ ನೀಡಿದವರನ್ನು ಬಂಧಿಸಿ ಶಿಕ್ಷೆಯಾಗುವವರೆಗೂ ಹೋರಾಟವನ್ನು ತೀವ್ರಗೊಳಿಸಲಾಗುವುದು ಬಿಜೆಪಿ ಸರ್ಕಾರವನ್ನುಎಸ್‌ಕೆಎಂ ಎಚ್ಚರಿಸಿದೆ.

ಮೇ 28 ‘ಪ್ರಜಾಪ್ರಭುತ್ವಕ್ಕೊಂದು ಕರಾಳ ದಿನ’

ಹೀಗೆಂದುದೇಶದ ಸಾವಿರಕ್ಕೂ ಹೆಚ್ಚು ಚಿಂತಕರು, ಸಮಾಜ ಸೇವಕರು, ವಕೀಲರು, ಶಿಕ್ಷಣ ತಜ್ಞರುಕೂಡ ಖಂಡಿಸಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು, ಬಂಧಿತ ಮಹಿಳಾ ಕುಸ್ತಿಪಟುಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತುಅನ್ಯಾಯದ ವಿರುದ್ಧ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕಿನ ಮೇಲಿನ ದಾಳಿಯನ್ನು ನಿಲ್ಲಿಸಬೇಕುಎಂದುಇವರು ನೀಡಿರುವಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಪ್ರಮುಖ ವಕೀಲರಾದ ಸುಧಾ ಭಾರದ್ವಾಜ್, ಜೋಯಾ ಹಾಸನ್, ಉತ್ಸಾ ಪಟ್ನಾಯಕ್, ಪ್ರಭಾತ್ ಪಟ್ನಾಯಕ್, ಜವಾಹರ್ ಸರ್ಕಾರ್, ಜಯತಿಘೋಷ್, ಮಲ್ಲಿಕಾ ಸಾರಾಭಾಯ್, ಆನಂದ್ ಪಟವರ್ಧನ್ ಈ ಹೇಳಿಕೆಗೆ ಸಹಿ ಹಾಕಿದ್ದಾರೆ.

ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮೂರ್ತಕ್ರಮಕ್ಕೆಅಂರ‍್ರಾಷ್ಟ್ರೀಯಒಲಿಂಪಿಕ್ಸ್ ಸಮಿತಿಆಗ್ರಹ
ಕುಸ್ತಿಪಟುಗಳ ವಿರುದ್ಧ ಪೊಲೀಸ್‌ಕ್ರಮಕ್ಕೆಯು.ಡಬ್ಲ್ಯು.ಡಬ್ಲ್ಯುಖಂಡನೆ

ಭಾರತೀಯ ಕುಸ್ತಿಪಟುಗಳ ವಿರುದ್ಧ ದಿಲ್ಲಿ ಪೊಲೀಸರುದೌರ್ಜನ್ಯವನ್ನು ನಡೆಸುತ್ತಿದ್ದಾರೆಎಂಬುದನ್ನುಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯೂ ಈಗ ಗಮನಕ್ಕೆ ತಗೊಂಡಿದೆ. ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳ ಕುರಿತುತ್ವರಿತ ತನಿಖೆ ನಡೆಸಬೇಕುಎಂದುಅದು ಆಗ್ರಹಿಸಿದೆ.

ಹವ್ಯಾಸಿ ಕುಸ್ತಿಯ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯಾದ ‘ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ‘(ಯುಡಬ್ಲ್ಯುಡಬ್ಲ್ಯು) ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ಪೊಲೀಸ್‌ಕ್ರಮವನ್ನುಖಂಡಿಸುತ್ತ ಸಿಂಗ್ ವಿರುದ್ಧ ಸರಿಯಾದ ತನಿಖೆಯ ಕೊರತೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಬೆನ್ನಲ್ಲೇ ಐಒಸಿ ಯ ಈ ಹೇಳಿಕೆ ಬಂದಿದೆ.

“ಐಒಸಿ ಭಾರತೀಯಒಲಿಂಪಿಕ್ ಅಸೋಸಿಯೇಷನ್ ಕ್ರೀಡಾಪಟುಗಳನ್ನು ರಕ್ಷಿಸಲುಎಲ್ಲಾಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ ಮತ್ತುಡಬ್ಲ್ಯುಎಫ್‌ನ ಚುನಾವಣೆಗಳು ಯೋಜಿಸಿದಂತೆ ಮತ್ತುಅಂತರ್ರಾಷ್ಟ್ರೀಯ ಫೆಡರೇಶನ್ ಆಗಿ ಯುಡಬ್ಲ್ಯೂಡಬ್ಲ್ಯೂ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತಿವೆಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ” ಎಂದೂ ಐಒಸಿ ತಿಳಿಸಿದೆ.

ಮೇ 3೦ರಂದು, ಕುಸ್ತಿಪಟುಗಳು ತಮ್ಮ ದೂರುಗಳ ಬಗ್ಗೆ ಸರ್ಕಾರದಧೋರಣೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿತಮ್ಮ ಪದಕಗಳನ್ನು – ಒಲಿಂಪಿಕ್ಸ್ ಮತ್ತುಇತರಉನ್ನತಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಗೆದ್ದಿರುವುದನ್ನು- ಗಂಗಾ ನದಿಯಲ್ಲಿತೇಲಿ ಬಿಡಲು ಯೋಜಿಸಿದ್ದರು, ಆದರೆರೈತ ಮುಖಂಡ ನರೇಶ್‌ಟಿಕಾಯತ್ ಮಧ್ಯಪ್ರವೇಶಿಸಿದ ನಂತರ ಈ ಪ್ರತಿಭನಟೆಯನ್ನುಅವರು ಮುಂದೂಡಿದ್ದಾರೆ ಎಂಬುದನ್ನುಇಲ್ಲಿ ಗಮನಿಸಬಹುದು.

ಮೇ 28 ರಂದು ಕುಸ್ತಿಪಟುಗಳ ಮೇಲೆ ದಿಲ್ಲಿ ಪೊಲೀಸರು ಹಲ್ಲೆ ಮಾಡಿ ಬಂಧಿಸಿದರು ಮತ್ತುಜಂತರ್ ಮಂತರ್‌ನಲ್ಲಿಅವರ ಪ್ರತಿಭಟನಾ ಸ್ಥಳವನ್ನು ಕೆಡವಿ ಹಾಕಿದರು. ಜಂತರ್ ಮಂತರ್‌ಗೆ ಹಿಂತಿರುಗಲು ಬಿಡುವುದಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದು, ಕುಸ್ತಿಪಟುಗಳ ವಿರುದ್ಧಎಫ್‌ಐಆರ್ ದಾಖಲಿಸಿದ್ದಾರೆ.

ಅಂತರಾಷ್ಟ್ರೀಯ ಖಂಡನೆಗಳು ಹರಿದುಬರುತ್ತಿದ್ದರೂ, ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ದಿಲ್ಲಿ ಪೋಲೀಸರ ವರ್ತನೆಯ ಬಗ್ಗೆ ಕೇಂದ್ರ ಸರ್ಕಾರಏನನ್ನೂ ಹೇಳಿಲ್ಲ. ಬದಲಾಗಿ, ಲೈಂಗಿಕ ಕಿರುಕುಳದ ಆರೋಪಿ ಸಿಂಗ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಅಧ್ಯಕ್ಷತೆಯಲ್ಲಿ ನಡೆದ ಹೊಸ ಸಂಸತ್ ಭವನದಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದಕ್ಕೆ ಮೊದಲು ಈ ಮೇಲೆ ಹೇಳಿದಂತೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಒಂದು ಹೇಳಿಕೆ ನೀಡಿ ಭಾರತದ ಕುಸ್ತಿ ಒಕ್ಕೂಟದಅಧ್ಯಕ್ಷರ ವರ್ತನೆಯನ್ನುಕುರಿತತನಿಖೆಯ ಫಲಿತಾಂಶಗಳ ಕೊರತೆಯ ಬಗ್ಗೆ ತನ್ನ ನಿರಾಶೆಯನ್ನು ವ್ಯಕ್ತಪಡಿಸಿತ್ತು ಮತ್ತುಅವರ ವಿರುದ್ಧದ ಆರೋಪಗಳ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತತನಿಖೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿತ್ತು ಹಾಗೂ ಭಾರತದ ಕುಸ್ತಿಪಟುಗಳು ಪ್ರತಿಭಟಿಸುತ್ತಿರುವ ಪರಿಸ್ಥಿತಿಯನ್ನು ಬಹಳ ಕಳವಳದಿಂದ ಗಮನಿಸುತ್ತ ಬಂದಿರುವುದಾಗಿ ತಿಳಿಸಿತ್ತು.

“ಅವರ ಸ್ಥಿತಿ ಮತ್ತು ಸುರಕ್ಷತೆಯ ಬಗ್ಗೆ ವಿಚಾರಿಸಲು ಮತ್ತುಅವರ ಕಾಳಜಿಗಳ ನ್ಯಾಯಯುತ ಪರಿಹಾರಕ್ಕಾಗಿ ನಮ್ಮ ಬೆಂಬಲವನ್ನು ಮರುದೃಢೀಕರಿಸಲು” ಕುಸ್ತಿಪಟುಗಳೊಂದಿಗೆ ಸಭೆ ನಡೆಸುವುದಾಗಿಯೂಯುಡಬ್ಲ್ಯುಡಬ್ಲ್ಯು ಹೇಳಿದೆ.

“ಅಂತಿಮವಾಗಿ, ಭಾರತೀಯ ಒಲಿಂಪಿಕ್ ಸಂಘ ಮತ್ತು ಭಾರತದ ಕುಸ್ತಿ ಒಕ್ಕೂಟದತಾತ್ಕಾಲಿಕ ಸಮಿತಿಯಿಂದ ಮುಂದಿನ ಚುನಾಯಿತ ಸಾಮಾನ್ಯ ಸಭೆಯಕುರಿತು ಹೆಚ್ಚಿನ ಮಾಹಿತಿಯನ್ನುಯುಡಬ್ಲ್ಯುಡಬ್ಲ್ಯು ವಿನಂತಿಸುತ್ತದೆ. ಈ ಚುನಾಯಿತ ಸಭೆ ನಡೆಸಲುಆರಂಭದಲ್ಲಿ ನಿಗದಿಪಡಿಸಿದ ೪೫ ದಿನಗಳ ಗಡುವನ್ನುಗೌರವಿಸಲಾಗುತ್ತದೆ. ಹಾಗೆ ಮಾಡಲು ವಿಫಲವಾದರೆಅದು ಭಾರತದ ಕುಸ್ತಿ ಒಕ್ಕೂಟವನ್ನು ಅಮಾನತುಗೊಳಿಸಲು ಕಾರಣವಾಗಬಹುದು” ಎಂದೂಅದು ಹೇಳಿದೆ, ಅಂದರೆ ನಮ್ಮ ಕ್ರೀಡಾಪಟುಗಳು ನಮ್ಮ ದೇಶದಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಸಾಧ್ಯವಾಗದೇ ಹೋಗಬಹುದು. ಈ ವರ್ಷದ ಆರಂಭದಲ್ಲಿ ನವದೆಹಲಿಯಲ್ಲಿ ನಡೆಸಬೇಕೆಂದು ಯೋಜಿಸಲಾದ ಏಷ್ಯನ್ ಚಾಂಪಿಯನ್‌ಶಿಪ್ ಅನ್ನು ಮರುಹಂಚಿಕೆ ಮಾಡುವ ಮೂಲಕ ಈಗಾಗಲೇ ಯುಡಬ್ಲ್ಯುಡಬ್ಲ್ಯು ಈ ಪರಿಸ್ಥಿತಿಯಲ್ಲಿ ಒಂದುಕ್ರಮವನ್ನುತೆಗೆದುಕೊಂಡಿದೆ ಎಂದು ಕೂಡ ಅದರ ಹೇಳಿಕೆ ನೆನಪಿಸಿದೆ.

ಬಿಜೆಪಿ ಸಂಸದನ ವಿರುದ್ದ ದೂರುಗಳಲ್ಲಿ ಏನಿದೆ? 

ಭಾರತೀಯ ಕುಸ್ತಿ ಫೆಡರೇಷನ್‌ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು 2 ಎಫ್‌ಐಆರ್ ಮತ್ತು 1೦ ದೂರುಗಳನ್ನ ದಾಖಲಿಸಿದ್ದಾರೆ. ಇವುಗಳಲ್ಲಿ ಈ ಮಹಿಳಾ ಕುಸ್ತಿಪಟುಗಳು ಏನು ಹೇಳಿದ್ದಾರೆ ಎಂಬುದು ಈಗ ಮಾಧ್ಯಮಗಳಲ್ಲಿ ಬಯಲಿಗೆ ಬಂದಿದೆ.

ಕುಸ್ತಿಪಟುಗಳ ದೂರುಗಳ ಅನ್ವಯದೆಹಲಿಯಕನ್ನಾಟ್ ಪ್ಲೇಸ್ ಪೊಲೀಸ್‌ಠಾಣೆಯಲ್ಲಿಎಫ್‌ಐಆರ್‌ದಾಖಲಾಗಿದ್ದು, ಇದೀಗ ಎಫ್‌ಐಆರ್‌ನಲ್ಲಿ ದೂರುಗಳು ಏನೆಂಬುದು ಬಹಿರಂಗಗೊಂಡಿದೆ. ಎರಡುಎಫ್‌ಐಆರ್ ಪ್ರಕಾರ, ಬ್ರಿಜ್ ಭೂಷಣ್ ಲೈಂಗಿಕ ಬಯಕೆಗಳನ್ನು ವ್ಯಕ್ತಪಡಿಸುವುದು,ಅನುಚಿತವಾಗಿದೇಹ ಸ್ಪರ್ಶಿಸುವುದು, ಅವರನ್ನು ಹಿಂಬಾಲಿಸುವುದು, ಅನುಚಿತವಾದ ಮುಜುಗರತರುವ ಪ್ರಶ್ನೆಗಳನ್ನು ಕೇಳುವುದು ಸೇರಿದಂತೆ 1೦ ದೂರುಗಳನ್ನು ದಾಖಲಿಸಲಾಗಿದೆ.

ಭಾರತೀಯದಂಡ ಸಂಹಿತೆಯ ಸೆಕ್ಷನ್ 354, 354 (ಎ), 354 (ಡಿ) ಮತ್ತು 34 ಅಡಿಯಲ್ಲಿಎರಡುಎಫ್‌ಐಆರ್‌ದಾಖಲಾಗಿದ್ದು, ಆರೋಪಸಾಬೀತಾದಲ್ಲಿ ೩ ವರ್ಷಜೈಲುಶಿಕ್ಷೆಗೆಗುರಿಯಾಬೇಕಾಗುತ್ತದೆ. ಮೊದಲ ಎಫ್‌ಐಆರ್‌ ನಲ್ಲಿ ಆರು ಒಲಿಂಪಿಯನ್‌ಗಳ ದೂರನ್ನು ಉಲ್ಲೇಖಿಸಲಾಗಿದೆ. ಎರಡನೇ ಎಫ್‌ಐಆರ್‌ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ ಮಾಡಿರುವ ಆರೋಪದ ಮೇಲೆ ದಾಖಲಾಗಿದೆ. ಆತನ ಮತ್ತು ಜತೆಗಿರುವಇನ್ನೊಬ್ಬಅಧಿಕಾರಿಯ ವರ್ತನೆಗಳಿಂದಾಗಿ ಮಹಳಾ ಕುಸ್ತಿಪಟುಗಳು ಒಟ್ಟೊಟ್ಟಾಗಿಯೇ ಹೊರಗೆ ಹೋಗಬೇಕಾಗಿ ಬರುತ್ತಿದೆ, ಅದನ್ನೂತಪ್ಪಿಸುವ ಪ್ರಯತ್ನಗಳನ್ನು ಮಾಡಲಾಗಿದೆಎಂದೂ ದೂರುಗಳಲ್ಲಿ ಹೇಳಿರುವುದಾಗಿ ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *