ನಂದಿಗ್ರಾಮ: ಪಶ್ಚಿಮ ಬಂಗಾಳದ ಅತ್ಯಂತ ಪ್ರಭಾವಿ ಕ್ಷೇತ್ರಗಳಲ್ಲಿ ಒಂದಾದ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಇಡೀ ದೇಶಕ್ಕೆ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಏಕೆಂದರೆ ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಸುವೇಂದು ಅಧಿಕಾರಿ ಕಣದಲ್ಲಿದ್ದರೂ ಸಹ ಸಿಪಿಐ(ಎಂ) ಪಕ್ಷದಿಂದ ಸ್ಪರ್ಧಿಸಿರುವ ಯುವ ನಾಯಕಿ ಮೀನಾಕ್ಷಿ ಮುಖರ್ಜಿ ಅವರ ಬಿರುಸಿನ ಪ್ರಚಾರ ಕೈಗೊಂಡಿದ್ದು ಪಕ್ಷದ ಭದ್ರಕೋಟೆಯಾದ ನಂದಿಗ್ರಾಮದ ಜನರಲ್ಲಿ ಪಕ್ಷದ ಮೇಲಿನ ವಿಶ್ವಾಸ ಮುಸುಕಾಗದಂತೆ ಭರವಸೆಯನ್ನು ಮೂಡಿಸಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ನಂದಿಗ್ರಾಮದಲ್ಲಿ ಮೀನಾಕ್ಷಿ ಮುಖರ್ಜಿ ಅವರು 100 ಕ್ಕೂ ಹೆಚ್ಚಿನ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ. ಅವರು ಸಲ್ವಾರ್-ಕಮೀಜ್ ಧರಿಸಿ ಕೈ ಮುಗಿದು ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಮೀನಾಕ್ಷಿ ಮುಖರ್ಜಿ ಅವರ ಪ್ರಚಾರ ಇತರೆ ಅಭ್ಯರ್ಥಿ ಮಾಡುವ ಅಬ್ಬರವಿಲ್ಲ, ಜನಪರ ಆದ್ಯತೆಯ ವಿಚಾರಗಳ ಬಗ್ಗೆ ಘೋಷಣೆಗಳನ್ನು ಹಾಕುವ ಮೂಲಕ ಬಿರುಸಿನ ಪ್ರಚಾರವನ್ನು ನಡೆಸಿದ್ದಾರೆ.
ಇದನ್ನು ಓದಿ : ಅಸ್ಸಾಂ ಚುನಾವಣೆ: “ಬಿಜೆಪಿಗೆ ಕುರ್ಚಿ- ಕಾಂಗ್ರೆಸ್ ಗೆ ಅಸ್ತಿತ್ವದ ಚಿಂತೆ”
37 ವರ್ಷದ ಮೀನಾಕ್ಷಿ ಮುಖರ್ಜಿ ಅವರು, ನಾವು ನಿರುದ್ಯೋಗದಿಂದ ಸಂಕಷ್ಟದಲ್ಲಿರುವ ಯುವಜನತೆಗೆ ಉದ್ಯೋಗಕ್ಕಾಗಿ ಹೋರಾಡುತ್ತಿದ್ದೇವೆ ನಿರಂತರವಾಗಿ ಹೋರಾಡುತ್ತಿರುವ ನಮಗೆ ಈ ಚುನಾವಣೆಯೂ ಹೋರಾಟವೇ ಆಗಿದೆ ಎನ್ನುತ್ತಾರೆ.
ಪ್ರಚಾರದ ಸಂದರ್ಭದಲ್ಲಿ 78 ವರ್ಷದ ರಶೀದ್ ಖಾನ್ ಅವರು ಮೀನಾಕ್ಷಿ ಮುಖರ್ಜಿ ಅವರನ್ನು ಉದ್ದೇಶಿಸಿ ʻʻನೀವು ನಮಗೆ ಹೊಸ ಶಕ್ತಿಯನ್ನು ನೀಡಿದ್ದೀರಿ. ಈ ಸಮಯದಲ್ಲಿ ನಾವು ನಿಮಗೆ ಮತ ಚಲಾಯಿಸುತ್ತೇವೆ, ನೀವು ಚಿಂತಿಸದಿರಿ ಹೋರಾಡಿʼʼ ಎಂದು ಕರೆ ನೀಡಿದರು.
ಇದನ್ನೂ ಓದಿ : ಬಿಜೆಪಿ, ಟಿಎಂಸಿಯನ್ನು ಸಂಯುಕ್ತ ರಂಗ ಸೋಲಿಸುತ್ತದೆ – ಸೀತಾರಾಮ್ ಯೆಚುರಿ
ಮುಖರ್ಜಿ ಅವರನ್ನು ಹೋರಾಟಗಾರ ಎಂದು ಸಂಬೋಧಿಸಿದ ರಶೀದ್ ಖಾನ್ ಅವರು ಇಲ್ಲಿನ ಬಹುತೇಕ ಕುಟುಂಬಗಳು ಸಿಪಿಐ(ಎಂ) ಪಕ್ಷದ ಬೆಂಬಲಿಗರು. ನಾವು ಯಾರನ್ನು ನೋಯಿಸುವುದಿಲ್ಲ. ಆದರೆ, 2011 ರಿಂದ ನಮಗೆ ಮತದಾನ ಮಾಡಲೂ ಸಹ ಅವಕಾಶ ನೀಡಿಲ್ಲ. ತೃಣಮೂಲ ಗೂಂಡಾಗಳು ನಮ್ಮ ಮತದಾರರ ಗುರುತಿನ ಚೀಟಿಗಳನ್ನು ಕಸಿದುಕೊಳ್ಳುತ್ತಿದ್ದರು ಮತ್ತು ನಾವು ಮತ ಚಲಾಯಿಸಲು ಆಗುತ್ತಿಲ್ಲ. ನನ್ನ ವಯಸ್ಸನ್ನು ಲೆಕ್ಕಸದ ತೃಣಮೂಲ ಯುವಕರು ಹಲ್ಲೆಗಳನ್ನು ನಡೆಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿ : ಜನರ ವಿಶ್ವಾಸದಿಂದ ಮತ್ತೆ ಎಲ್‌ಡಿಎಫ್ ಅಧಿಕಾರಕ್ಕೆ : ಡಾ. ವಿ.ಸಿವದಾಸನ್
ಸಿಪಿಎಂ ಯುವ ಕಾರ್ಯಕರ್ತ ಜಿಯೌರ್ ರಹಮಾನ್ “ನಂದಿಗ್ರಾಮದ ಪ್ರತಿಯೊಂದು ಪ್ರದೇಶದಲ್ಲೂ ನಮಗೆ ಬೆಂಬಲಿಗರಿದ್ದಾರೆ. ವಿರೋಧಿಗಳ ಬೆದರಿಕೆಗಳಿಂದಾಗಿ ಅವರು ಅದನ್ನು ಬಹಿರಂಗವಾಗಿ ಹೇಳಲಾಗುತ್ತಿಲ್ಲ. ಬಿಜೆಪಿ ಮತ್ತು ಟಿಎಂಸಿಯಲ್ಲಿ ಸಾಕಷ್ಟು ಹಣವಿದೆ, ಅದಕ್ಕಾಗಿಯೇ ಅವರು ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ. ಅವರಿಂದ ಜನರ ಪ್ರಶ್ನೆಗಳು ಮುನ್ನಲೆಗೆ ಬರುತ್ತಿಲ್ಲ. ಮತದಾರರಿಗೆ ಮುಕ್ತವಾಗಿ ಮತ ಚಲಾಯಿಸಲು ಅವಕಾಶವಿದ್ದರೆ, ಜನತೆ ಸಿಪಿಐ(ಎಂ)ಗೆ ಖಂಡಿತಾವಾಗಿಯೂ ಮತ ಹಾಕುತ್ತಾರೆ. ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.