ಬೆಂಗಳೂರು| ಚಿನ್ನ ಕಳ್ಳಸಾಗಣೆ ದಂಧೆಯಲ್ಲಿ ಪ್ರಭಾವಿ ಸಚಿವರ ಹೆಸರು

ಬೆಂಗಳೂರು: ವಿಧಾನಸಭೆಯ ಆಡಳಿತ-ವಿಪಕ್ಷದ ಮೊಗಸಾಲೆಯಲ್ಲಿ ಚಿನ್ನ ಕಳ್ಳಸಾಗಣೆ ದಂಧೆಯಲ್ಲಿ ಸಿಕ್ಕಿ ಬಿದ್ದಿರುವ ಚಿತ್ರನಟಿ ರನ್ಯಾ ರಾವ್‌ ಬಗ್ಗೆ ರೋಚಕ ಚರ್ಚೆಗಳು ಅನಾವರಣಗೊಳ್ಳುತ್ತಿದ್ದು, “ಅವರಂತೆ, ಇವರಂತೆ’ ಎಂಬ ವದಂತಿ ರೆಕ್ಕೆಪುಕ್ಕ ಕಟ್ಟಿ ಹಾರಾಟ ನಡೆಸುತ್ತಿದೆ. ಬೆಂಗಳೂರು

ಈ ವಿದ್ಯಮಾನ ಸರ್ಕಾರದ ಉನ್ನತ ಹಂತದಲ್ಲಿ ದಿಗಿಲು ಹುಟ್ಟಿಸಿದ್ದು, ಸಿಎಂ ಸಿದ್ದರಾಮಯ್ಯ ಕೆಲವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರು ಪ್ರಭಾವಿ ಸಚಿವರ ಹೆಸರು ಮೊಗಸಾಲೆಯಲ್ಲಿ “ಎರ್ರಾಬಿರ್ರಿ’ಯಾಗಿ ಚಲಾವಣೆಯಾಗುತ್ತಿದ್ದು, “ಚಿನ್ನ’ಕ್ಕೆ ಸಂಬಂಧವೋ, ಚಿನ್ನ “ಸಾಗಾಟ’ದೊಡನೆ ಸಂಬಂಧವೋ ? ಎಂಬುದೇ ಇಂದಿನ ಸದನ “ಸ್ವಾರಸ್ಯ’ ! ಇಬ್ಬರು ಸಚಿವರು ಹಾಗೂ ಒಬ್ಬ ಶಾಸಕನ ಪುತ್ರನ ಹೆಸರು ಬಲವಾಗಿ ಓಡಾಡುತ್ತಿದೆ. ಬೆಂಗಳೂರು

ಇದೆಲ್ಲದರ ಮಧ್ಯೆ ಸಿಎಂ ಸಿದ್ದರಾಮಯ್ಯ ಶಿಷ್ಟಾಚಾರ ಉಲ್ಲಂಘನೆ ವಿಚಾರದಲ್ಲಿ ಆದ ಲೋಪದ ಬಗ್ಗೆ ಹಿರಿಯ ಐಎಎಸ್‌ ಅಧಿಕಾರಿ ಗೌರವ ಗುಪ್ತಾ ಅವರನ್ನು ಕರೆಸಿ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಕಲಾಪ ಮುಗಿದ ಬಳಿಕ ಮನೆಗೆ ತೆರಳುತ್ತಿದ್ದ ಪ್ರಭಾವಿ ಸಚಿವರನ್ನೂ ವಾಪಸ್‌ ಕರೆಸಿಕೊಂಡು ಸ್ಪಷ್ಟನೆ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಸಂಭಾಜಿನಗರ| ಕಬ್ಬು ಸಾಗಿಸುತ್ತಿದ್ದ ಟ್ರಕ್ ಪಲ್ಟಿ; 6 ಕಾರ್ಮಿಕರು ಸಾವು

ಶಿಷ್ಟಾಚಾರ ಉಲ್ಲಂಘನೆ ವಿಚಾರದಲ್ಲಿ ನಾನು ಯಾವುದೇ ಪ್ರಭಾವ ಬೀರಿಲ್ಲ. ಅವರ ತಂದೆಯ ಸಂಪರ್ಕ ಬಳಸಿಕೊಂಡಿರಬಹುದು. ಯಾವುದೇ ತನಿಖೆ ಬೇಕಾದರೂ ನಡೆಯಲಿ. ತಾವು ಈ ಪ್ರಕರಣದಲ್ಲಿ ಪ್ರತ್ಯಕ್ಷ-ಪರೋಕ್ಷ ಸಂಪರ್ಕ ಹೊಂದಿಲ್ಲ ಎಂದು ಆ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಆದರೆ ರನ್ಯಾ ರಾವ್‌ ಕರೆ ಮಾಡಿ ಕೆಲ ನಿಮಿಷ ಮಾತನಾಡಿದ ಇನ್ನೊಬ್ಬ ಪ್ರಭಾವಿ ಸಚಿವರ ಜತೆಗೆ ಸಿಎಂ ಸಿದ್ದರಾಮಯ್ಯ ಇದುವರೆಗೆ ಮಾತನಾಡಿದ್ದಾರೋ, ಇಲ್ಲವೋ? ಎಂಬುದು ದೃಢಪಟ್ಟಿಲ್ಲ.

ತಲೆಬಿಸಿಗೆ ಕಾರಣವೇನು? :

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಚಿವರ ಪಾತ್ರ ಇದೆಯೋ, ಶಿಷ್ಟಾಚಾರ ಉಲ್ಲಂಘನೆಯಲ್ಲಿ ಮೌಖಿಕ ಸೂಚನೆ ಇದೆಯೋ ? ಎಂಬುದು ಈಗ ಸಿಬಿಐ ಅಂಗಳ ತಲುಪಿದೆ. ಯಾವುದೇ ಲೋಪಕ್ಕಾದರೂ ಸಚಿವರಿಗೆ ಸಿಬಿಐ ನೋಟಿಸ್‌ ನೀಡಿದರೆ ಇದು ಕೇರಳ ಮಾದರಿಯಲ್ಲಿ ರಾಷ್ಟ್ರಮಟ್ಟದ ಚರ್ಚೆಗೆ ಕಾರಣವಾಗಬಹುದೆಂಬುದು ಸಿಎಂ ಸಿದ್ದರಾಮಯ್ಯ ಅವರ ಚಿಂತೆಗೆ ಕಾರಣವಾಗಿದೆ.

ಇದನ್ನೂ ನೋಡಿ: Karnataka Legislative Assembly Live Day 08 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *