ನಾಮಪತ್ರ ವಾಪಸ್ಸು ಪಡೆಯಲು ಒತ್ತಡ ಹೇರಿದರು: ಮಲ್ಲಿಕಾರ್ಜುನ ಖೂಬಾ

ಬಸವಕಲ್ಯಾಣ : ಹಿಂದೆ ನಾನು ಜೆಡಿಎಸ್‌ ಶಾಸಕನಾಗಿದ್ದೆ, ಯಡಿಯೂರಪ್ಪ ಸಿಎಂ ಆಗಬೇಕೆಂದು ಬಿಜೆಪಿ ಸೇರಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕೆಲವೇ ಅಂತರದಲ್ಲಿ ಸೋತಿದ್ದೆ. ಆದರೆ, ಈಗ ಉಪಚುನಾವಣೆಯಲ್ಲಿ ನನ್ನನ್ನು ಕೈಬಿಟ್ಟಿರುವುದು ಸರಿಯಾದುದಲ್ಲ ಎಂದು ಬಸವಕಲ್ಯಾಣದ ಅಭ್ಯರ್ಥಿ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಆರೋಪಿಸಿದರು.

ಬಸವಕಲ್ಯಾಣದ ಕಾಂಗ್ರೆಸ್‌ ಶಾಸಕ ನಿಧನದಿಂದ ತೆರವಾಗಿದ್ದ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನು ಓದಿ : ಈಶ್ವರಪ್ಪರನ್ನು ಉಚ್ಛಾಟಿಸಿ, ಇಲ್ಲವೇ ರಾಜೀನಾಮೆ ನೀಡಿ : ಸಿಎಂ ಗೆ ಡಿಕೆಶಿ ಸವಾಲು

ಬಸವಕಲ್ಯಾಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖೂಬಾ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಭಗವಂತ ಖೂಬಾ ಅವರ ಪರವಾಗ ನಾನು ಜೆಡಿಎಸ್‌ ನಲ್ಲಿದ್ದು ಅವರಿಗೆ ಸಂಪೂರ್ಣವಾಗಿ ಬೆಂಬಲ ನೀಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಆಗ ನಾನು ಬಿಜೆಪಿ ಸೇರಿದ್ದೇ ಎಂದು ಹೇಳಿದರು.

ಸ್ವಾಭಿಮಾನ ಕಳೆದುಕೊಳ್ಳಲು ತಯಾರಿಲ್ಲದ ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸಿರುವೆ. ಹಳ್ಳಿ ಹಳ್ಳಿಗೆ ಹೋಗಿ ಜೋಳಿಗೆ ಹಿಡಿದು ಪ್ರಚಾರ ಮಾಡುವ ಜನ ನನಗೆ ಮತ ನೀಡುವರು ಎಂಬ ವಿಶ್ವಾಸ ನನಗಿದೆ ಎಂದು ವಿವರಿಸಿದರು.

ಶಾಸಕ ನಾರಾಯಣರಾವ್‌ ನಮ್ಮನ್ನು ಅಗಲಿರುವುದರಿಂದ ಉಪಚುನಾವಣೆ ಬಂದಿದೆ. ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೇಟ್‌ ನೀಡಿ ಎಂದು ಮನವಿ ಮಾಡಿದ್ದೇವು. ಬೀದರ್‌ ಸಂಸದ ಭಗವಂತ ಖೂಬಾ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವ ವಿ ಸೋಮಣ್ಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದೆ. ನಾನು ಶ್ರಮಪಟ್ಟು ಪಕ್ಷಕ್ಕಾಗಿ ದುಡಿದೆ ಆದರೆ, ಹೈಕಮಾಂಡ್‌ ನನ್ನನ್ನು ಕಡೆಗಣಿಸಿರುವುದು ನನಗೆ ಬೇಸರ ತಂದಿದೆ ಎಂದು ಮಲ್ಲಿಕಾರ್ಜುನ ಖೂಬಾ ಆರೋಪಿಸಿದರು.

ಇದನ್ನು ಓದಿ : ಬಿಜೆಪಿಯಿಂದ ಆಧಾರ್‌ ಮಾಹಿತಿ ಸೋರಿಕೆ: ತನಿಖೆಗೆ ಹೈಕೋರ್ಟ್‌ ಮಹತ್ವ ಆದೇಶ

ಕ್ಷೇತ್ರದ ಜನ ನನ್ನ ಬೆಂಬಲಕ್ಕೆ ಇದ್ದಾರೆ. ಬಿಜೆಪಿ ಟಿಕೇಟ್‌ ಕೊಟ್ಟಿಲ್ಲ, ಜನರ ಅಭಿಪ್ರಾಯದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಶರಣು ಸಲಗರ ಖೂಬಾ 48 ಗಂಟೆಯಲ್ಲಿ ನನ್ನ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದರು. ಸ್ವಾಮಿ ನಾನು ಸ್ವಾಭಾವಿಕವಾದ ಮನುಷ್ಯ, ನಾಮಪತ್ರ ವಾಪಸ್ಸು ಪಡೆಯುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ನವರು ಸಹ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಅಭ್ಯರ್ಥಿ ಮಾಡುತ್ತೇವೆ ಎಂದು ಹೇಳಿದರು. ಪರಿಷತ್‌ ಗೆ ನೇಮಕ ಮಾಡಿ ಎಂದೇ, ಆರು ತಿಂಗಳು ಕಾಯಲು ಹೇಳಿದರು. ಕಾಂಗ್ರೆಸ್‌ ನಲ್ಲೂ ಆಕಾಂಕ್ಷಿಗಳು ಬಹಳಷ್ಟು ಇದ್ದಾರೆ. ಈಗಲೇ ಹೀಗಾದರೆ, ಮುಂದೆ ಇನ್ನೂ ಕಠಿಣವಾಗಬಹುದು ಎಂದು ನಿರ್ಧರಿಸಿದೆ. ಕಾಂಗ್ರೆಸ್‌ ಪಕ್ಷದ ವಿಜಯಸಿಂಗ್‌ ಸಹ ನನ್ನ ಜೊತೆ ಮಾತನಾಡಿದರು.

ಬಸವಕಲ್ಯಾಣದಲ್ಲಿ ಮಟ್ಕಾ ದಂಧೆ, ಹಫ್ತಾ ವಸೂಲಿ, ಗೂಂಡಾಗಿರಿ ಬಂದ್‌ ಮಾಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದೆ. ಅವುಗಳನ್ನು ಬಂದ್‌ ಮಾಡಿದರೆ ಜನತೆಗೆ ಒಳ್ಳೆಯದೆ ಆಗುತ್ತದೆ. ಒಂದೂರಲ್ಲಿ ಇಪ್ಪತ್ತೈದು ಸಾವಿರ ಮಟ್ಕಾ ನಡೆಯುತ್ತಿದೆ ಎಂದು ಹೇಳುವ ಅವರು ಇಂಟಲಿಜೆನ್ಸ್‌ನವರಾ ಎಂದು ಪ್ರಶ್ನೆ ಮಾಡಿದರು. ಚುನಾವಣಾ ಪ್ರಚಾರಲ್ಲಿ ಮಾತ್ರ ಇವುಗಳನ್ನು ಹೇಳಲು ಸಾಧ್ಯ ಎಂದು ತಿರುಗೇಟು ನೀಡಿದರು.

Donate Janashakthi Media

Leave a Reply

Your email address will not be published. Required fields are marked *