ನಾಲ್ಕು ವರ್ಷಗಳ ಪದವಿ ವ್ಯಾಸಂಗ ಬೇಡವೆ ಬೇಡ

ನಿತ್ಯಾನಂದಸ್ವಾಮಿ

ಹೊಸ ಶಿಕ್ಷಣ ನೀತಿ ಅನ್ವಯ ಪದವಿ ವ್ಯಾಸಂಗವನ್ನು ನಾಲ್ಕು ವರ್ಷಗಳಿಗೆ ಹೆಚ್ಚಿಸಲಾಗಿದೆ. ಇದು ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ಕೊಡಲಿ ಏಟು ನೀಡುವ ಪ್ರಯತ್ನವಾಗಿದೆ. ಹಳ್ಳಿಗಾಡು, ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳ ಮಕ್ಕಳು ಶಿಕ್ಷಣವನ್ನು ತೊರೆಯುವಂತಾಗುವುದು ಮಾತ್ರವಲ್ಲ ಒಮ್ಮೆ ವಿದ್ಯಾಭ್ಯಾಸವನ್ನು ಅವರು ತೊರೆದರೆ ಮತ್ತೆ ಅವರು ಶಿಕ್ಷಣವನ್ನು ಮುಂದುವರೆಸುವುದು ಕಷ್ಟ. ನಾಲ್ಕು ವರ್ಷಗಳ ಪದವಿ ಕಲಿಕೆಯ ಪದ್ಧತಿಯಿಂದ  ಅವರು ಶಿಕ್ಷಣದಿಂದ ವಿಮುಖರಾಗುವವರ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನಾಲ್ಕು ವರ್ಷಗಳ ಪದವಿ ಕೋರ್ಸ್ ಯಾರ ಹಿತಸಾಧನೆಗಾಗಿ? ಹೊಸ ಶಿಕ್ಷಣ ನೀತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ಆಗಿಲ್ಲ. ಪೋಷಕರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಆಲಿಸಿಲ್ಲ. ಈ ನೀತಿಯನ್ನು ಏಕಪಕ್ಷೀಯವಾಗಿ ಹಾಗೂ ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಶಿಕ್ಷಣ ನೀತಿಯನ್ನು ರೂಪಿಸುವವರು ಶಿಕ್ಷಣ ತಜ್ಞರು ಆಗಿರಬಹುದು. ಆದರೆ ಅವರು ರಾಜಕೀಯ ಪಕ್ಷಗಳ ಹಿಂಬಾಲಕರಲ್ಲ.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

ಈಗಿನ ಶಿಕ್ಷಣ ನೀತಿಯು ಬಹುಶಿಸ್ತೀಯ ಪದ್ಧತಿಯಾಗಿದೆ. ವಿದ್ಯಾರ್ಥಿಗಳು ಹಲವು ವಿಷಯಗಳನ್ನು ಏಕಕಾಲಕ್ಕೆ ಕಲಿಯುತ್ತಿರುತ್ತಾರೆ. ಅಂತರ್ ಶಿಸ್ತೀಯ ಕಲಿಕೆ ಈಗಿನ ಅಗತ್ಯ ಮಾಹಿತಿ ಹೊತ್ತ ಪಶುಗಳ ಅಗತ್ಯವಿಲ್ಲ. ಅಮೇರಿಕದಲ್ಲಿ ಜಾರಿಯಲ್ಲಿರುವ ಶಿಕ್ಷಣ ವ್ಯವಸ್ಥೆಯ ನಕಲನ್ನು ಯಥಾ ರೀತಿಯಲ್ಲಿ ನಮ್ಮ ದೇಶದಲ್ಲಿ ಬೇರೂರಿಸುವ ಪ್ರಯತ್ನ ಈಗ ನಡೆಯುತ್ತಿದೆ. ನೂತನ ಶಿಕ್ಷಣ ನೀತಿಯಿಂದ ಪದವಿಯ ಅವಧಿ ಹಾಗೂ ಪಠ್ಯಕ್ರಮ ಬದಲಾಗಲಿದೆ. ಅದರ ಸಾಧಕ ಬಾಧಕಗಳನ್ನು ಅವಲೋಕಿಸದೆಯೇ ಹೊಸದೊಂದು ನೀತಿ ಜಾರಿಗೊಳಿಸುವುದು ಯಾವ ಕಾರಣಕ್ಕೂ ಸರಿಯಲ್ಲ.

ಶಿಕ್ಷಣ ತಜ್ಞರ ಪ್ರಕಾರ ಈ ಹೊಸ ಶಿಕ್ಷಣ ನೀತಿಯ ಜಾರಿಗೆ ಸುಧೀರ್ಘ ಸಮಯ ತಗಲುತ್ತದೆ. ಸರ್ಕಾರ ಮಾಡಲು ಹೊರಟಿರುವುದು ದೊಡ್ಡ ಮಟ್ಟದ ಬದಲಾವಣೆ. ಇದರ ಕುರಿತು ಎಲ್ಲ ವಲಯಗಳಲ್ಲೂ ಚರ್ಚೆಯಾಗಬೇಕು. ಸಾಧಕ ಬಾಧಕಗಳ ಬಗ್ಗೆ ವಿವರವಾದ ಪರಿಶೀಲನೆ ಆಗಬೇಕು.

ಹೊಸ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಯ ಕಲಿಕೆ ಕಡೆಗಣಿಸಲ್ಪಟ್ಟಿದೆ. ಭಾಷೆಯು ಅಭಿವ್ಯಕ್ತಿಯ ಸಾಧ್ಯ. ಹೀಗಾಗಿ ಪ್ರಾದೇಶಿತ ಭಾಷೆ ಕಲಿಕೆಗೆ ಒತ್ತು ನೀಡಬೇಕು. ಮೂರು ವರ್ಷಗಳ ಪದವಿಯನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸಲು ಕಾರಣವೇನು? ಮೂರು ವರ್ಷ ಪದವಿ ಶಿಕ್ಷಣ ಪಡೆದವರು ಜಾಣರಾಗಿಲ್ಲವೆ? ಪದವಿ ಅವಧಿಯ ವಿಸ್ತರಣೆಯಿಂದ ಯಾವುದೇ ಪ್ರಯೋಜನವಿಲ್ಲ. ಇರುವ ಪದವಿ ಅವಧಿಯಲ್ಲೇ ಪರಿಣಾಮಕಾರಿ ಕಲಿಕೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು.

ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳಾದ ಎಸ್.ಎಫ್.ಐ., ಎಐಎಸ್‍ಎಫ್ ಮೊದಲಾದ ವಿದ್ಯಾರ್ಥಿ ಸಂಘಟನೆಗಳು ನಾಲ್ಕು ವರ್ಷಗಳ ಪದವಿ ವ್ಯಾಸಂಗ ಬೇಡವೇ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹೊರೆಯಾಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿಗೆ ಅನುವು ಮಾಡಿಕೊಟ್ಟಂತಾಗಲಿದೆ. ಆದ್ದರಿಂದ ಸರ್ಕಾರದ ಈ ತಪ್ಪು ಧೋರಣೆಯನ್ನು ಎಲ್ಲರೂ ಸೇರಿ ವಿರೋಧಿಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *