ತಿರುವನಂತಪುರಂ : ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ದಿನದಂದು ನಕಲಿ ಮತ್ತು ಎರಡೆರಡು ಬಾರಿ ಮತ ಹಾಕದಂತೆ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುಬೇಕೆಂದು ಕೇರಳ ಹೈಕೋರ್ಟ್ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಕೇರಳದ ಮತದಾರರ ಕುರಿತು ವಿಧಾನಸಭೆವಾರು ಕ್ಷೇತ್ರ ಪರಿಶೀಲನೆ ನಡೆಸಿ, ಮತದಾರರ ಪಟ್ಟಿಯಲ್ಲಿ ರದ್ದು, ವರ್ಗಾವಣೆ, ನಿಧನ, ನಕಲು ಸೇರಿದಂತೆ ಎರಡೆರಡು ಕಡೆಗಳಲ್ಲಿ ದಾಖಲಾಗಿರುವ ಮತದಾರರ ವಿವರಗಳು ಇರುವ ಸಮಗ್ರ ಪಟ್ಟಿಯನ್ನು ಪರಿಶೀಲಿಸಲು ಡಿಇಒಗಳು ಮತ್ತು ಆರ್‌ಒಗಳಿಗೆ ನಿರ್ದೇಶಿಸಲಾಗಿದೆ.
ಇದನ್ನು ಓದಿ : ಪಶ್ಚಿಮ ಬಂಗಾಳದ ಚುನಾವಣೆ ಹೇಗಿದೆ ಆಡಳಿತ ವಿರೋಧಿ ಅಲೆ ಎಡಪಕ್ಷಕ್ಕೆ, ಬಿಜೆಪಿಗೆ ಲಾಭವಾಗುತ್ತಾ?
ಒಂದು ವೇಳೆ ಎಎಸ್‌ಡಿ ಎಂದು ಗುರುತಿಸಲ್ಪಟ್ಟ ಮತದಾರನು ಮತ ಚಲಾಯಿಸಲು ಮತದಾನ ಕೇಂದ್ರಕ್ಕೆ ಭೇಟಿ ನೀಡಿದರೆ, ವ್ಯಕ್ತಿಯು ಮತ ಚಲಾಯಿಸಲು ಅವಕಾಶ ನೀಡುವ ಮೊದಲು ಚುನಾವಣಾ ಅಧಿಕಾರಿಗಳು ನಿಗದಿಪಡಿಸಿದ ಎಸ್‌ಒಪಿಯನ್ನು ಬೂತ್ ಮಟ್ಟದ ಅಧಿಕಾರಿಗಳು ಆದೇಶದಂತೆ ಅಂತಹ ಮತದಾರನ ಹೆಬ್ಬೆರಳಿನ ಗುರುತನ್ನು ಕೂಡ ತೆಗೆದುಕೊಳ್ಳಲಾಗುವುದು.
ಮುಂದಿನ ಕ್ರಮಗಳನ್ನು ಜಾರಿಗೊಳಿಸಲು ಒಂದು ಮುಚ್ಚಳಿಗೆ ಪತ್ರ ಹಾಗೂ ಭಾವಚಿತ್ರವನ್ನು ಸಂಗ್ರಹಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171 ಡಿ, 171 ಎಫ್ ಪ್ರಕಾರ ಅನೇಕ ಸ್ಥಳಗಳಲ್ಲಿ ಮತ ಚಲಾಯಿಸಲು ಅಥವಾ ಸೋಗು ಹಾಕಲು ಪ್ರಯತ್ನಿಸುವವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ.
ಇದನ್ನು ಓದಿ : ಸರ್ಕಾರದ ವಿರುದ್ಧ ಧ್ವನಿ ಎತ್ತಿದವರೆಲ್ಲರೂ ಜೈಲಿಗೆ: ಪಿಣರಾಯಿ ಎಚ್ಚರಿಕೆ
ಮತದಾನದ ಸಂದರ್ಭದಲ್ಲಿ ಅನುಮಾನಗೊಂಡ ವ್ಯಕ್ತಿಗಳಿಗೆ ಮತದಾನದ ದಿನದಂದು ಅಳಿಸಲಾಗದ ಶಾಹಿ ಒಣಗಿದ ನಂತರವೇ ಮತದಾನಕ್ಕೆ ಅವಕಾಶ ಕಲ್ಪಿಸಬೇಕು.
ರಾಜ್ಯದಲ್ಲಿ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.