ಬೆಂಗಳೂರು : ಸಚಿವ ಸ್ಥಾನಕ್ಕೆ ನಾಗೇಂದ್ರ ಕೊನೆಗೂ ರಾಜೀನಾಮೆ ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸಂಜೆ 7.30 ಕ್ಕೆ ಸಿಎಂಗೆ ರಾಜೀನಾಮೆ ಸಲ್ಲಸುತ್ತೇನೆ ಎಂದರು.
ಸಿಎಂ ಒಳ್ಳೆಯ ರೀತಿಯಾಗಿ ಆಡಳಿತ ನಡೆಸಿಕೊಂಡುಹೋಗುತ್ತಿದ್ದಾರೆ. ಸಿಎಂಗಾಗಲೀ ಡಿಸಿಎಂಗಾಗಲೀ ಎಐಸಿಸಿ ವರಿಷ್ಠ ಖರ್ಗೆ ಸಾಹೇಬರಿಗೆ ಯಾರಿಗೂ ಕೂಡ ಮುಜುಗರ ಆಗಬಾರದು ಎಂದು ನಾನು ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದರು.
ನಾನು ನಿರ್ದೋಷಿ ಎಂದು ಸಾಬೀತಾಗಿ ಬರುತ್ತೇನೆ. ಆಗ ಮತ್ತೆ ಮಂತ್ರಿಮಂಡಲಕ್ಕೆ ಸೇರಿಯೇ ಸೇರುತ್ತೇನೆ. ನಿಷ್ಪಕ್ಷವಾಗಿ ತನಿಖೆ ನಡೆಯುತ್ತದೆ. ನನ್ನ ರಾಜೀನಾಮೆಯನ್ನು ಯಾರ ಒತ್ತಡದಿಂದಾಗಲೀ ನಾನು ನೀಡುತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಸೇರಿದಂತೆ ನನ್ನ ಕ್ಷೇತ್ರದ ಮತದಾರರು ಹಿತೈಷಿಗಳು ರಾಜೀನಾಮೆ ಕೊಡುವುದು ಬೇಡಾ ಎಂದಲೇ ಹೇಳಿದ್ದಾರಾದರೂ ಆತ್ಮಸಾಕ್ಷಿಯಿಂದ ರಾಜೀನಾಮೆ ನೀಡುತ್ತೇನೆ ಎಂದರು.
ಇದನ್ನು ಓದಿ : ಉತ್ತರ ಪ್ರದೇಶದ ಸುಮಾರು 16 ಕ್ಷೇತ್ರಗಳಲ್ಲಿ ಬಿಜೆಪಿಗೆ ನೆರವಾದ ಬಹುಜನ ಸಮಾಜ ಪಕ್ಷ ಅಭ್ಯರ್ಥಿಗಳು
ವಾಲ್ಮೀಕಿ ನಿಗಮದ ಯಾವುದೇ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಇದರಲ್ಲಿ ನನ್ನ ಪಾತ್ರ ಏನೇನೂ ಇಲ್ಲ. ತನಿಖೆಗೆ ಯಾವುದೇ ಅಡ್ಡಿಯಾಗಬಾರದನ್ನುವ ಕಾರಣಕ್ಕೆ ಆತ್ಮಸಾಕ್ಷಿಯಿಂದ ರಾಜಿನಾಮೆ ನೀಡುತ್ತಿದ್ದೇನೆ.
ಒಂದೇ ಪೆನ್‌ಡ್ರೈವ್ ಇದೆ ಎಂದು ಇಡೀ ರಾಜ್ಯಕ್ಕೆ ಗೊತ್ತು. ನಮ್ಮದ್ಯಾವುದು ಗೊತ್ತಿಲ್ಲ ಎಂದುಸುದ್ದಿಗಾರರೊಬ್ಬರ ಪ್ರಶ್ನೆಗೆ ನಾಗೇಂದ್ರ ಉತ್ತರಿಸಿದರು. ಅನೇಕ ಹಗರಣಗಳು ಕೂಡ ಬಿಜೆಪಿಯನ್ನು ಸುತ್ತುವರೆದಿವೆ.ತನಿಖೆ ಅವರನ್ನೂ ಸುತ್ತುವರೆದಿವೆ. ಅವರ ಸತ್ಯಗಳು ಕೂಡ ಬಯಲಿಗೆ ಬರುತ್ತವೆ ಎಂದು ನಾಗೇಂದ್ರ ಮಾರ್ಮಿಕವಾಗಿ ಹೇಳಿದರು.
ಇದನ್ನು ನೋಡಿ : ಲೋಕಮತ 2024|ಕರ್ನಾಟಕದ ನೂತನ ಸಂಸದರುJanashakthi Media