ನಗರದಲ್ಲಿ ನೀರು ಸೋರಿಕೆ ತಡೆಗಟ್ಟಲು ಜಾಗೃತದಳ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಗರದಲ್ಲಿ ನೀರಿನ ಕಳ್ಳತನ ತಡೆಯಲು, ಅಕ್ರಮವಾಗಿ ಸಂಪರ್ಕಿಸಿಕೊಂಡಿರುವುದು ಸೇರಿದಂತೆ ನೀರು ಸೋರಿಕೆಯನ್ನು ತಡೆಗಟ್ಟಲು ಜಾಗೃತ ದಳವನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಪರಿಷತ್‌ ಸದಸ್ಯೆ  ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಜಲಮಂಡಳಿ ಕಾವೇರಿ 1 ರಿಂದ 4ನೇ ಹಂತದವರೆಗೆ 1450 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಒಟ್ಟಾರೆ ಒಂದು ಕಿಲೋ ಮೀಟರ್‌ ಗೆ 3.83 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸಾರ್ವಜನಿಕ ಕೊಳಾಯಿಯಲ್ಲಿ ಶೇ 4ರಷ್ಟು, ಗೃಹ ಸಂಪರ್ಕಗಳ ಕೊಳವೆಗಳಲ್ಲಿ ಶೇ 5, ಜಲಮಾಪಕಗಳ ಲೋಪದೋಷದಿಂದ ಶೇ 5, ಕೊಳಗೇರಿ ಪ್ರದೇಶದಲ್ಲಿ ಶೇ 4, ಹಳೆಯ, ಶಿಥಿಲಗೊಂಡ ನೆಲಮಟ್ಟದ ಜಲಾಶಯದಲ್ಲಿ ಶೇ 5ರಷ್ಟು ದಿನವೂ ನೀರು ಸೋರಿಕೆಯಾಗುತ್ತಿದೆ.  ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ಓಡಾಟದಿಂದ ನೀರಿನ ಕೊಳವೆಗಳ ಸೋರಿಕೆ ಹಾಗೂ ನೀರಿನ ಕೊಳವೆಗಳನ್ನು ಶುಚಿಗೊಳಿಸಲು ಉಪಯೋಗಿಸಲು ಶೇ 6ರಷ್ಟು ಸೇರಿ ಒಟ್ಟು ಶೇ 29ರಷ್ಟು ನೀರು ಪೋಲಾಗುತ್ತಿದೆ ಎಂದು ಉತ್ತರಿಸಿದರು.

ಇದನ್ನು ಓದಿ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ: ಸದನದಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರ ವಾಗ್ವಾದ

ನೀರು ಸೋರಿಕೆ ಪ್ರಮಾಣವನ್ನು ಹಂತ ಹಂತವಾಗಿ ಕಡಿತ ಮಾಡಲಾಗುತ್ತಿದೆ. ನೀರು ಸರಬರಾಜಿಗಾಗಿ 50 ವರ್ಷಗಳ ಅಳವಡಿಸಲಾಗಿರುವ ಪೈಪ್‌ ಗಳು ಸದ್ಯ ಹಳೆಯದಾಗಿದ್ದು ಬದಲಾವಣೆ ಮಾಡಬೇಕಿದೆ. ಜೊತೆಗೆ ಹಳೆಯ ಶಿಥಲೀಕರಣಗಳ ಪುನಃಶ್ಚೇತನಗೊಳಿಸಬೇಕಿದೆ. ಈ ಎರಡು ಬಾಬ್ತುಗಳಿಗೆ ಸುಮಾರು ಎಂಟು ಸಾವಿರ ಕೋಟಿ ರೂಪಾಯಿ ಬೇಕಿದೆ. ಜಲಮಂಡಳಿಗೆ ಹೊರೆಯಾಗುವುದರಿಂದ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ನೀರು ಸರಬರಾಜಿಗೆ ಪ್ರತಿದಿನ 5.94 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸಂಗ್ರಹವಾಗುತ್ತಿರುವುದು 3.82 ಕೋಟಿ ರೂಪಾಯಿ ಮಾತ್ರ. ಬಾಕಿ 2.11 ಕೋಟಿ ರೂಪಾಯಿ ಪ್ರತಿ ದಿನ ನಷ್ಟವಾಗುತ್ತಿದೆ. ಇದನ್ನು ಹೇಗೆ ಭರಿಸಲಾಗುವುದು ಎಂದು ಭಾರತಿ ಶೆಟ್ಟಿ ಪ್ರಶ್ನಿಸಿದರು.

ಪ್ರತಿ ಕಿಲೋ ಮೀಟರ್ ನೀರು ಸರಬರಾಜಿಗೆ 41 ರೂಪಾಯಿ ವೆಚ್ಚವಾಗುತ್ತಿದೆ. ಅದರಂತೆ ದಿನವೊಂದಕ್ಕೆ ಮಂಡಳಿಗೆ 3.83 ಕೋಟಿ ರೂಪಾಯಿಗಳ ಶುಲ್ಕ ಸಂಗ್ರಹವಾಗುತ್ತಿದೆ.

ಇದನ್ನು ಓದಿ: ಸಚಿವರಿಗೆ ಪುರುಸೋತ್ತಿಲ್ಲವೆ? ಸದನಕ್ಕೆ ಗೈರಾದ ಮಂತ್ರಿಗಳ ನಡೆಗೆ ಸ್ಪೀಕರ್ ಕಾಗೇರಿ ಗರಂ

ಬೆಂಗಳೂರು ಜಲಮಂಡಳಿಯು ಮೊದಲಿನಿಂದಲೂ ಅನೇಕ ಸಮಸ್ಯೆ ಎದುರಿಸುತ್ತಿದೆ. ಸರಿಯಾದ ಪೈಪ್ ಲೈನ್ ಇಲ್ಲ, ನೀರಿನ ಸೋರಿಕೆ. 30-40 ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಸದ್ಯ 22 ಕಿ.ಮೀ ಹೊಸದಾಗಿ ಪೈಪ್ ಹಾಕುತ್ತಿದ್ದೇವೆ. ನೀರು ಕಳ್ಳತನ ತಡೆಯಲು ಜಲಮಂಡಳಿಗೆ ಒಂದು ವಿಶೇಷ ಜಾಗೃತ ಪಡೆ ಸ್ಥಾಪನೆ ಮಾಡಲಾಗುತ್ತಿದೆ. ನೀರಿನ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲು ಆಗಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ನೀರಿನ ಸಂಪರ್ಕದ ಲೆಕ್ಕ ಇಡಲು ಸಂಪೂರ್ಣ ಸಂಪರ್ಕಗಳಿಗೆ ಮೀಟರ್ ಅಳವಡಿಕೆ ಮಾಡುತ್ತೇವೆ ಎಂದು ಭರವಸೆಯನ್ನು ಕೊಟ್ಟರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *