ಬೆಂಗಳೂರು: ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ತೆರವಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ತೀವ್ರವಾದ ಮುಖಭಂಗವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಜಯಗಳಿಸಿದೆ
ಬಳ್ಳಾರಿ ಮಹಾನಗರ ಪಾಲಿಕೆ, ರಾಮನಗರ ನಗರಸಭೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಸಭೆ, ಹಾಸನ ಜಿಲ್ಲೆಯ ಬೇಲೂರು ಪುರಸಭೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯತ್, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತ್ ನಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ.
ಇದನ್ನು ಓದಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ : ಕಾಂಗ್ರೆಸ್ಗೆ ಗೆಲುವು, ಬಿಜೆಪಿಗೆ ಮುಖಭಂಗ
ಮಡಿಕೇರಿ ನಗರಸಭೆಯಲ್ಲಿ ಮಾತ್ರ ಅಧಿಕಾರ ಹಿಡಿಯುವಲ್ಲಿ ಆಡಳಿತರೂಢ ಬಿಜೆಪಿ ಸಫಲವಾಗಿದೆ.
ಅಲ್ಲದೆ, ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಬಿ ಪುರಸಭೆಯ ಒಂದು ಸ್ಥಾನ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣ ಪಂಚಾಯತ್ ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರ ಹಿಡಿದಿದೆ.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್ ಬಹುಮತ ಪಡೆದಿದೆ.
25 ವರ್ಷಗಳಿಂದ ಅಧಿಕಾರದಲ್ಲಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಪತ್ಯಕ್ಕೆ ಈ ಬಾರಿ ಭಾರಿ ಮುಖಭಂಗವಾಗಿದೆ.
ಇದನ್ನು ಓದಿ: ಕೇರಳದಲ್ಲಿ ಎಡರಂಗ – ತಮಿಳುನಾಡಿಗೆ ಸ್ಟಾಲಿನ್, ಬಂಗಾಳದಲ್ಲಿ ತೃಣಮೂಲ
ಬಳ್ಳಾರಿ ಮಹಾನಗರ ಪಾಲಿಕೆ: ಒಟ್ಟು 39 ವಾರ್ಡುಗಳು – ಕಾಂಗ್ರೆಸ್-21, ಬಿಜೆಪಿ-13, ಪಕ್ಷೇತರರು 5 ಮಂದಿ ಗೆಲುವು
ಬೀದರ್ ನಗರಸಭೆ: ಒಟ್ಟು 33 ವಾರ್ಡುಗಳು – ಕಾಂಗ್ರೆಸ್-15, ಬಿಜೆಪಿ-9, ಜೆಡಿಎಸ್-7, ಆಮ್ ಆದ್ಮಿ ಪಕ್ಷ 1 ಹಾಗೂ ಎಐಎಂಐಎಂ 1 ಸ್ಥಾನದಲ್ಲಿ ಗೆಲುವು
ರಾಮನಗರ ನಗರಸಭೆ: 31 ವಾರ್ಡುಗಳು – ಕಾಂಗ್ರೆಸ್-19, ಜೆಡಿಎಸ್-11, ಪಕ್ಷೇತರ-1,
ಚನ್ನಪಟ್ಟಣ ನಗರಸಭೆ: 31 ವಾರ್ಡುಗಳು – ಕಾಂಗ್ರೆಸ್-7, ಬಿಜೆಪಿ-7, ಜೆಡಿಎಸ್-16, ಪಕ್ಷೇತರ-1.
ಭದ್ರಾವತಿ ನಗರಸಭೆ: 34 ವಾರ್ಡುಗಳು – ಕಾಂಗ್ರೆಸ್-18, ಬಿಜೆಪಿ-4, ಜೆಡಿಎಸ್-11, ಪಕ್ಷೇತರ-1.
ಮಡಿಕೇರಿ ನಗರಸಭೆ: 23 ವಾರ್ಡುಗಳು – ಕಾಂಗ್ರೆಸ್-1, ಬಿಜೆಪಿ-16, ಜೆಡಿಎಸ್-1, ಎಸ್ಡಿಪಿಐ-5.
ಬೇಲೂರು ಪುರಸಭೆ: 23 ವಾರ್ಡುಗಳು – ಕಾಂಗ್ರೆಸ್-17, ಬಿಜೆಪಿ-1, ಜೆಡಿಎಸ್-5.
ವಿಜಯಪುರ ಪುರಸಭೆ: 23 ವಾರ್ಡುಗಳು – ಕಾಂಗ್ರೆಸ್-7, ಬಿಜೆಪಿ-1, ಜೆಡಿಎಸ್-13, ಪಕ್ಷೇತರ-2
ತೀರ್ಥಹಳ್ಳಿ ಪಟ್ಟಣ ಪಂ.: 15 ವಾರ್ಡುಗಳು – ಕಾಂಗ್ರೆಸ್-9, ಬಿಜೆಪಿ-6.
ಗುಡಿಬಂಡೆ ಪಟ್ಟಣ ಪಂ.: 11 ವಾರ್ಡುಗಳು – ಕಾಂಗ್ರೆಸ್-6, ಜೆಡಿಎಸ್-2, ಪಕ್ಷೇತರ-3.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 10 ಸ್ಥಳೀಯ ಸಂಸ್ಥೆಗಳಲ್ಲಿ 7 ಕಡೆ ಗೆಲುವು ಸಾಧಿಸಿದ್ದೇವೆ. ಸರ್ಕಾರದ ವಿರುದ್ಧ ಜನರಿಗಿರುವ ಅತೃಪ್ತಿ ವ್ಯಕ್ತವಾಗಿದೆ. ಇದು ಪಕ್ಷದ ಚಿಹ್ನೆ ಮೇಲೆ ನಡೆದಿರುವ ಚುನಾವಣೆ. ಕಾಂಗ್ರೆಸ್ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ವಿಶ್ವಾಸ ಇಡಲು ಪ್ರಾರಂಭ ಮಾಡಿದ್ದಾರೆ. ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿಯೂ ಗೆಲ್ಲುವು ಸಾಧಿಸಿದ್ದೇವು. ಈಗ ಮತ್ತೊಮ್ಮೆ ಕಾಂಗ್ರೆಸ್ ಪರ ಒಲವು ತೋರಿದ್ದಾರೆ ರಾಜ್ಯದ ಜನತೆ. ಈ ಮೂಲಕ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.