ಚೀನಾದ ಮಕ್ಕಳಲ್ಲಿ ನಿಗೂಢ ನ್ಯುಮೋನಿಯಾ | ಭಾರತದಲ್ಲಿ ಹೆಚ್ಚಿನ ಅಪಾಯವಿಲ್ಲ ಎಂದ ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್‌ನಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿರುವ ಚೀನಾದಲ್ಲಿ ಮತ್ತೊಂದು ಸಂಭಾವ್ಯ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ಈ ಬಾರಿ ನಿಗೂಢ ನ್ಯುಮೋನಿಯಾ ಉತ್ತರ ಚೀನಾದ ಶಾಲೆಗಳಲ್ಲಿ ವ್ಯಾಪಿಸುತ್ತಿದೆ ಎಂದು ವರದಿಯಾಗಿದೆ. ಈ ನಡುವೆ ಭಾರತದಲ್ಲಿ ಇದನ್ನು ಸೋಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ಅದಾಗ್ಯೂ H9N2 (ಏವಿಯನ್ ಇನ್‌ಫ್ಲುಯೆಂಜಾ ವೈರಸ್) ಕರೆಯಲಾಗುವ ಈ ವೈರಸ್‌ನಿಂದಾಗಿ ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಎಂದು ಸರ್ಕಾರ ಹೇಳಿದೆ ಎಂದು ವರದಿಗಳು ಹೇಳಿವೆ.

ಪ್ರಸ್ತುತ ಪರಿಸ್ಥಿತಿಯಿಂದ ಹೊರಹೊಮ್ಮಬಹುದಾದ ಯಾವುದೇ ರೀತಿಯ ತುರ್ತು ಪರಿಸ್ಥಿತಿಗೆ ದೇಶವು ಸನ್ನದ್ಧವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. “ಭಾರತವು ಯಾವುದೇ ರೀತಿಯ ಸಾರ್ವಜನಿಕ ಆರೋಗ್ಯದ ಅಗತ್ಯತೆಗಳಿಗೆ ಸಿದ್ಧವಾಗಿದೆ. ಅಂತಹ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಮಗ್ರ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಭಾರತವು ಒಂದು ಆರೋಗ್ಯ ವಿಧಾನವನ್ನು ಕೈಗೊಳ್ಳುತ್ತಿದೆ” ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಕಾನೂನು ರಚನೆಗೆ ರಾಜ್ಯಪಾಲರು ಅಡ್ಡಿಪಡಿಸಬಾರದು: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಆರೋಗ್ಯ ಮೂಲಸೌಕರ್ಯದಲ್ಲಿ ಗಮನಾರ್ಹವಾದ ಬಲವರ್ಧನೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 2023ರ ಅಕ್ಟೋಬರ್‌ನಲ್ಲಿ ಚೀನಾದಲ್ಲಿ H9N2 (ಏವಿಯನ್ ಇನ್ಫ್ಲುಯೆನ್ಸ ವೈರಸ್) ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ದೇಶದಲ್ಲಿ ಏವಿಯನ್ ಇನ್ಫ್ಲುಯೆನ್ಸ ಪ್ರಕರಣಗಳ ವಿರುದ್ಧದ ಸನ್ನದ್ಧತೆಯ ಕ್ರಮಗಳನ್ನು ಚರ್ಚಿಸಲು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಇತ್ತೀಚೆಗೆ ಸಭೆಯನ್ನು ನಡೆಸಿತ್ತು.

ಸಾಂಕ್ರಮಿಕ ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಾಡಿರುವ ಒಟ್ಟಾರೆ ಅಪಾಯದ ಮೌಲ್ಯಮಾಪನವು ಮಾನವನಿಂದ ಮಾನವರಿಗೆ ಹರಡುವ ಕಡಿಮೆ ಸಂಭವನೀಯತೆಯನ್ನು ಸೂಚಿಸುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೆ WHO ಗೆ ವರದಿಯಾದ H9N2 ನ ಮಾನವ ಪ್ರಕರಣಗಳಲ್ಲಿ ಕಡಿಮೆ ಪ್ರಮಾಣದ ಸಾವಿನ ಪ್ರಮಾಣವನ್ನು ಸೂಚಿಸುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಮಾನವ, ಪಶುಸಂಗೋಪನೆ ಮತ್ತು ವನ್ಯಜೀವಿ ವಲಯಗಳ ನಡುವೆ ಕಣ್ಗಾವಲು ಬಲಪಡಿಸುವ ಮತ್ತು ಸಮನ್ವಯವನ್ನು ಸುಧಾರಿಸುವ ಅಗತ್ಯವನ್ನು ಸಚಿವಾಲಯ ಒತ್ತಿಹೇಳಿದೆ.

ಚೀನಾದಲ್ಲಿ ಸಾಂಕ್ರಮಿಕದ ಕೇಂದ್ರಬಿಂದುಗಳು ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳಾಗಿದ್ದು, ಅಲ್ಲಿ ಮಕ್ಕಳ ಆಸ್ಪತ್ರೆಗಳು ಅಗಾಧ ಸಂಖ್ಯೆಯ ಅನಾರೋಗ್ಯ ಪೀಡಿತ ಮಕ್ಕಳು ದಾಖಲಾಗಿದ್ದಾರೆ. ಪರಿಸ್ಥಿತಿಯ ತೀವ್ರತೆಯಿಂದ ಕೆಲವು ಶಾಲೆಗಳ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ವಿಡಯೊ ನೋಡಿ:  ನೇಜಾರು ಹತ್ಯೆ ಪ್ರಕರಣ :ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ, ಕೋಮುವಾದದ ವಾಸನೆಯೂ ಬಡಿಯುತ್ತಿದೆ Nejaru murder case

Donate Janashakthi Media

Leave a Reply

Your email address will not be published. Required fields are marked *