ಮುಜಾಫರ್‌ನಗರ ಗಲಭೆ ಪ್ರಕರಣದಲ್ಲಿ ಶಿಕ್ಷಗೆ ಗುರಿಯಾದ ಬಿಜೆಪಿ ಶಾಸಕ: ಕ್ಷೇತ್ರ ತೆರವು

ಲಖನೌ: ಮುಜಾಫರ್‌ನಗರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ 11 ಮಂದಿಗೆ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರಿಂದ ಇದೀಗ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿರುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.

2013ರ ಮುಜಾಫರ್‌ನಗರದಲ್ಲಿ ಸಂಭವಿಸಿದ ಭೀಕರ ಗಲಭೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪದಡಿ ವಿಕ್ರಮ್ ಸೈನಿ ಅವರಿಗೆ ಜನ ಪ್ರತಿನಿಧಿ ನ್ಯಾಯಾಲಯ ಅಕ್ಟೋಬರ್ 11ರಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಕಾರ್ಯದರ್ಶಿ ಶಾಸಕ ಸ್ಥಾನ ಅನರ್ಹಗೊಳಿಸಿ ಕ್ಷೇತ್ರ ತೆರವಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಮುಜಾಫರ್‌ನಗರ ಸಂಸದ/ಶಾಸಕರ ಜನಪ್ರತಿನಿಧಿ ನ್ಯಾಯಾಲಯವು ಸೈನಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ಅಕ್ಟೋಬರ್ 11 ರಿಂದ ಜಾರಿಗೆ ಬರುವಂತೆ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತೀರ್ಪು ಪ್ರಕಟಗೊಂಡ ಬಳಿಕ ಉತ್ತರ ಪ್ರದೇಶದ ಖತೌಲಿಯಿಂದ ಬಿಜೆಪಿ ಶಾಸಕರಾಗಿರುವ ಸೈನಿ ಮತ್ತು ಇತರರನ್ನು ಬಂಧಿಸಲಾಯಿತು ಮತ್ತು ನಂತರ ಅವರ ಅಪರಾಧದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ತಲಾ 25,000 ರೂ.ಗಳ ಎರಡು ಶ್ಯೂರಿಟಿಗಳನ್ನು ಒದಗಿಸುವ ಮೇಲೆ ಜಾಮೀನು ನೀಡಲಾಯಿತು. 12 ಮಂದಿಯನ್ನು ದೋಷಿಗಳೆಂದು ಘೋಷಿಸಲಾಗಿದೆ. ವಿಕ್ರಮ್ ಸೈನಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.

ಮುಜಾಫರ್‌ನಗರದ ಕಾವಲ್ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಯುವಕರಾದ ಗೌರವ್ , ಸಚಿನ್ ಮತ್ತು ಶಹನವಾಜ್ ಹತ್ಯೆಯು 2013 ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮುಜಾಫರ್‌ನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ ಕೋಮು ಘರ್ಷಣೆಯನ್ನು ಉಂಟುಮಾಡಿ, 60 ಜನರನ್ನು ಬಲಿ ತೆಗೆದುಕೊಂಡಿತ್ತು ಮತ್ತು 40,000 ಜನರನ್ನು ಸ್ಥಳಾಂತರಿಸಲಾಗಿತ್ತು. ಬಿಜೆಪಿ ಶಾಸಕ ಮತ್ತು ಇತರ 26 ಜನರು ತಮ್ಮ ಪಾತ್ರದ ಆರೋಪದ ಮೇಲೆ ವಿಚಾರಣೆ ಎದುರಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *