ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಜಗತ್ತನ್ನು ನಿರ್ಮಾಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ

ನವದೆಹಲಿ : ಇಂದು ವಿಶ್ವ ಪರಿಸರದ ಅಂಗವಾಗಿ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರೆ ನೀಡಿದ್ದು, ಹವಾಮಾನ ಬದಲಾವಣೆಯು ಜೀವನ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಸುಸ್ಥಿರತೆಯ ಆಧಾರದ ಮೇಲೆ ಉತ್ತಮ ಮತ್ತು ಹಸಿರು ಜಗತ್ತನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.

ಇದನ್ನು ಓದಿ : ಕರ್ನಾಟಕ ಲೋಕಸಭೆ | ಬಿಜೆಪಿಗೆ ಆಘಾತ, ಕೈಗೆ ಹೊಡೆತ!

ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ಭೂಮಿ ತಾಯಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಮೂಲಭೂತ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ನಾವು ನೈಸರ್ಗಿಕ ಸಂಪನೂಲಗಳ ಟ್ರಸ್ಟಿಗಳು ಮತ್ತು ಮಾಲೀಕರಲ್ಲ. ಹವಾಮಾನ ಬದಲಾವಣೆಯು ಜೀವನ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ, ವಿಶೇಷವಾಗಿ ದುರ್ಬಲ ಸಮುದಾಯಗಳಲ್ಲಿ.

ಸುಸ್ಥಿರತೆಯ ಆಧಾರದ ಮೇಲೆ ಉತ್ತಮ ಮತ್ತು ಹಸಿರು ಜಗತ್ತನ್ನು ನಿರ್ಮಿಸಲು ನಾವು ಸಾಮೂಹಿಕ ಪ್ರಯತ್ನಗಳನ್ನು ಮಾಡೋಣ ಎಂದು ಮುರ್ಮು ಹೇಳಿದರು.ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಇದನ್ನು ನೋಡಿ : ಬಿಜೆಪಿ ನಿದ್ದೆ ಗೆಡಿಸಿದ ಸಟ್ಟಾ ಬಜಾರ್ : INDIA ಮತ್ತು NDA ನಡುವೆ ತೀವ್ರ ಪೈಪೋಟಿ Janashakthi Media

Donate Janashakthi Media

Leave a Reply

Your email address will not be published. Required fields are marked *