ಎಲ್ಲಾ ಮುನಿಸಿಪಾಲ್ ಕಾರ್ಮಿಕ ಸೇವೆ ಖಾಯಂಮಾತಿಗೆ ಒತ್ತಾಯಿಸಿ ಪ್ರತಿಭಟನೆ

ತುಮಕೂರು: ಎಲ್ಲಾ ಗುತ್ತಿಗೆ-ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ     ದುಡಿಯುತ್ತಿರುವ ಪೌರಕಾರ್ಮಿಕರು, ಲೋಡರ್‌ಗಳು, ವಾಟರ್ ಮ್ಯಾನ್‌ಗಳು, ಕಸದ ಅಟೋ ಚಾಲಕರು, ಕಂಪ್ಯೂಟರ್ ಅಪರೇಟರ್‌ಗಳು, ಯು.ಜಿ.ಡಿ ಕಾರ್ಮಿಕರು, ಕಛೇರಿ ಸಹಾಯಕರು, ಮಸಣ ಕಾರ್ಮಿಕರು, ಉದ್ಯಾನವನದಲ್ಲಿ ದುಡಿವ ಕಾರ್ಮಿಕರು ಇವರೆಲ್ಲರನ್ನೂ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಇಂದು ಮಧ್ಯಾನ್ಹ  3-30 ಗಂಟೆಯಿಂದ ಸಿಐಟಿಯು ನೇತೃತ್ವದಲ್ಲಿ ಪೌರ ಕಾರ್ಮಿಕರ ಸಂಘ, ನೀರು ಸರಬರಾಜು ಕಾರ್ಮಿಕರು, ಕಸದ ಅಟೋ ಚಾಲಕ ಮತ್ತು ಸಹಾಯಕರ ಸಂಘಗಳು  ಜಂಟಿಯಾಗಿ ತುಮಕೂರು ನಗರ ಟೌನ್ ಹಾಲ್‌ನಿಂದ  ಸ್ವಾತಂತ್ರ  ಚೌಕದ ತನಕ  ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿಪತ್ರವನ್ನು ಸಲ್ಲಿಸಿದರು.

ಗುತ್ತಿಗೆ-ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ – ಸಮಾನ ವೇತನದಡಿಯಲ್ಲಿ ಹತ್ತಾರು ವರ್ಷಗಳ ಕಾಲ ದುಡಿದು ಸೇವೆಯಲ್ಲಿ ಇರುವಾಗಲೇ ಮರಣ ಹೊಂದಿರುವ ಕಾರ್ಮಿಕರ ಕುಟುಂಬದ ದುಡಿವ ಮುಖ್ಯಸ್ಥರನ್ನು ಕಳೆದುಕೊಂಡು ಬೀದಿಗೆ ಬಿದ್ದಿರುತ್ತಾರೆ. ಹಾಗಾಗಿ  ಸೇವಯಲ್ಲಿ ಇರುವಾಗಲೇ ಮರಣ ಹೊಂದಿರುವ  ಎಲ್ಲಾ ಮುನಿಸಿಪಾಲ್ ಕಾರ್ಮಿಕ ಅವಲಂಬಿತರಿಗೆ ಕಡ್ಡಾಯವಾಗಿ ಮಾನವಿಯತೆಯ ನೆಲೆಯಲ್ಲಿ ಕೆಲಸ ನೀಡುಬೇಕು ಎಂದು ಸಹ ಆಗ್ರಹಿಸಿದ್ದಾರೆ.

ತಮ್ಮ ಸೇವೆಯನ್ನು ಖಾಯಂಗೊಳಿಸುವ ತನಕ ಎಲ್ಲಾ ಕಾರ್ಮಿಕರಿಗೆ  ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸುಪ್ರೀಂಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಲ್ಲಾ ಕಾರ್ಮಿಕರಿಗೆ ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ನಿಗದಿತ ಹಬ್ಬಗಳ‌ ರಜೆ, ಗಳಿಕೆ ರಜೆ, ಅನಾರೋಗ್ಯ ರಜೆ, ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ/ಮರಣ ಹೊಂದುವ ಮುನಿಸಿಪಲ್ ಕಾರ್ಮಿಕರಿ/ಅವಲಂಬಿತರಿಗೆ ಉಪಧನ ನೀಡುವ ಸಂಬಂದ ಸ್ಪಷ್ಟವಾದ ಅದೇಶ ಹೊರಡಿಸಬೇಕು ತಿಳಿಸಿದರು.

ಎಲ್ಲಾ ಗುತ್ತಿಗೆ ಮುನಿಸಿಪಾಲ್ ಕಾರ್ಮಿಕರು ಅಲ್ಪವೇತನದಲ್ಲಿ ಬದುಕುತ್ತಿದ್ದು, ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನೀವೆಶನವನ್ನು ನೀಡಬೇಕು, ಕಸವನ್ನು ಸಂಗ್ರಹಿಸಿ ನಗರದ ಸ್ವಚ್ಛತೆಯಲ್ಲಿ ತೊಡಗಿಕೊಂಡಿರುವ ದ ಎಲ್ಲಾ ಪೌರಕಾರ್ಮಿಕರು, ಲೋಡರ್ಸ್‌, ಕ್ಲೀನರ್ಸ್‌ ಮತ್ತು ಕಸದ ವಾಹನದ ಚಾಲಕರನ್ನು ಪೌರ ಕಾರ್ಮಿಕರೆಂದು ಪರಿಗಣಿಸಬೇಕು. ಸಮವಸ್ತ್ರ, ಸುರಕ್ಷಾತ ಸಲಕರಣೆಗಳು, ರೈನ್ ಕೋಟ್‌ಗಳನ್ನು ಕಡ್ಡಾಯವಾಗಿ ನೀಡಬೇಕು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ಸಂಖ್ಯೆ ನಿಗದಿಗೆ ಸಿ ಎಂಡ್ ಆರ್. ಇದೆ. ಪೌರಕಾರ್ಮಿಕ ಸಂಖ್ಯೆ ನಿಗದಿಪಡಿಸುವಾಗ 700 ಜನಸಂಖ್ಯೆಗೆ ಒಬ್ಬರಂತೆ ಮತ್ತು ಸಾಲಿಡ್ ವೇಸ್ಟ್ ಮ್ಯಾನೇಜಮೆಂಟ್ ಈ ಮೂರು ಆದೇಶಗಳಿದ್ದು ಸರ್ಕಾರ ಯಾವುದಾದರೂ ಒಂದು ಜಾರಿಗೆ ತರಲು ನಿರ್ದಿಷ್ಟ ಆದೇಶ ಹೊರಡಿಸಬೇಕು.

ಜಿಲ್ಲಾ  ಮಟ್ಟದಲ್ಲಿ  ಸಭೆ ನಡೆಸಲು ಉಪವಿಭಾಗಧಿಕಾರಿ ಭರವಸೆ:

ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಜಿಲ್ಲಾ ಯೋಜನಾ ನಿರ್ದೇಶಕರು, ಉಪ ವಿಭಾಗಧಿಕಾರಿ ಅಜಯ್ ಅವರು ಮುನಿಸಿಪಾಲ್ ಕಾರ್ಮಿಕರ ಸೇವೆಗಳು ನಾಗರೀಕ ಸಮಾಜಕ್ಕೆ ಅಗತ್ಯ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಭೆಯೊಂದನ್ನು ತಕ್ಷಣದಲ್ಲೇ  ನಡೆಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನಾಕಾರರು ನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕ ಅವರಿಗೆ ಮನವಿ ಸಲ್ಲಿಸಿದರು. ಎಲ್ಲಾ ಕಾರ್ಮಿಕರಿಗೆ ರಜೆಗಳಿಗೆ ಸಂಬಂಧಿಸಿದಂತೆ ಹಾಗೂ ಅಧಿಕ ಕೆಲಸದ ಒತ್ತಡ ಕುರಿತು  ದೂರು ನೀಡಿದರು. ಎಲ್ಲಾರಿಗೂ ತಿಂಡಿ ಹಾಗೂ ರೈನ್ ಕೋಟ್ ನೀಡುವಂತೆ ಅಗ್ರಹಿಸಿದರು. ಇದಕ್ಕೆ ಸಕಾರತ್ಮಕವಾಗಿ  ಸ್ಪಂದಿಸಿದ ಅಯುಕ್ತರು ಕಾನೂನು ಬದ್ದ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದರು.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹ:

ನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರು, ವಾಟರ್ ಮ್ಯಾನ್, ಚಾಲಕರು ಲೋಡರ್‌ಗಳ ಹುದ್ದೆಗಳಿಗೆ ಹಾಲಿ ದುಡಿಯುತ್ತಿರುವ ಕಾರ್ಮಿಕರನ್ನೇ ನೇಮಿಸುವಂತೆ ಪ್ರತಿಭಟನಾಕಾರರು ಒತಾಯಿಸಿದರು.

ಸಿಐಟಿಯು ಅಧ್ಯಕ್ಷ ಸೈಯದ್‌ ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಪೌರ ಕಾರ್ಮಿಕ ಸಂಘದ  ಕೆಂಪರಾಜು   ನಾಗರಾಜು, ಸಿ.ವೆಂಕಟೇಶ್, ತುಮಕೂರು ಜಿಲ್ಲಾ ನೀರು ಸರಬರಾಜು ನೌರಕರರ ಸಂಘ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷರಾದ ನಂದೀಶ್, ನಟರಾಜು, ಚಂದ್ರಪ್ಪ, ಕಾರ್ಯದರ್ಶಿಗಳಾದ ಮಂಜುನಾಥ್‌, ಪ್ರಕಾಶ್, ತುಮಕೂರು ಮಹಾನಗರ ಪಾಲಿಕೆ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘ (ರಿ.) ಕಾರ್ಯದರ್ಶಿ ಶಿವರಾಜು, ಸಹ ಕಾರ್ಯದರ್ಶಿಗಳಾದ ಮಂಜುನಾಥ್,  ಇರ್ಪಾನ್, ಶ್ರೀನಿವಾಸ್, ಸಾದ್ದಿಕ್‌ ಪಾಷ , ಅಂಜನಪ್ಪ, ಚಂದ್ರಣ್ಣ  ಇತರರು ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *