ಭೂಗತ ಪಾತಕಿ ದಾವೂದ್‌ ಆಪ್ತರ ನಿವಾಸಗಳ ಮೇಲೆ ಎನ್‌ಐಎ ದಾಳಿ

ಮುಂಬೈ: ದಾವೂದ್ ಇಬ್ರಾಹಿಂಗೆ ಸಂಬಂಧಸಿದ ಅವರ  ಸಹಚರರ  ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ಮಾಡಿದ್ದು, ಮುಂಬೈನ 20 ಸ್ಥಳಗಳಲ್ಲಿ ದಾಳಿ ನಡೆಸಿದೆ. ಮುಂಬೈನ ನಾಗ್ಪಾಡಾ, ಗೋರೆಗಾಂವ್, ಬೋರಿವಲಿ, ಸಾಂತಾಕ್ರೂಜ್, ಮುಂಬ್ರಾ, ಭೇಂಡಿ ಬಜಾರ್‌ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ.

ಗೃಹ ಸಚಿವಾಲಯದ ಆದೇಶದಂತೆ ದಾವೂದ್ ಇಬ್ರಾಹಿಂ, ಡಿ ಕಂಪನಿ ವಿರುದ್ದ ರಾಷ್ಟ್ರೀಯ ತನಿಖಾ ಸಂಸ್ಥೆ  ಪ್ರಕರಣ ದಾಖಲಿಸಿದೆ. ದಾಳಿ ನಡೆದ 20 ಸ್ಥಳಗಳಲ್ಲಿ ದಾವೂದ್ ನ ಶಾರ್ಪ್ ಶೂಟರ್‌ಗಳು, ಸ್ಮಗ್ಲರ್ ಗಳು ವಾಸವಾಗಿರುವ ಸ್ಥಳವಾಗಿದ್ದವರು. ಇವುಗಳು ಡಿ. ಕಂಪನಿಯ ಮ್ಯಾನೇಜರ್‌ ಗಳಿಗೆ ಸಂಬಂಧಿಸಿವೆ ಎಂದು ಎನ್‌ಐಎ ತಂಡ ತಿಳಿಸಿವೆ.

ಡಿ ಕಂಪನಿಯು ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟಿದೆ. 1993 ರಲ್ಲಿ ನಡೆದ ಮುಂಬೈ ಸ್ಪೋಟದಲ್ಲಿ ಆರೋಪಿಯಾಗಿದ್ದ ದಾವೂದ್ ಇಬ್ರಾಹಿಂ 2003ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯೇ ಘೋಷಣೆ ಮಾಡಿದೆ.

ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ: ಸಚಿವ ನವಾಬ್​ ಮಲಿಕ್​ಗೆ 14 ದಿನಗಳ ನ್ಯಾಯಾಂಗ ಬಂಧನ

ಗೃಹ ಸಚಿವಾಲಯದ ಪ್ರಕಾರ, ಡಿ ಕಂಪನಿ ಮತ್ತು ದಾವೂದ್ ಇಬ್ರಾಹಿಂ ಭಾರತದಲ್ಲಿ ಭಯೋತ್ಪಾದನೆ ನಿಧಿ, ನಾರ್ಕೋ ಟೆರರ್, ಡ್ರಗ್ಸ್ ಸ್ಮಗ್ಲಿಂಗ್ ಮತ್ತು ನಕಲಿ ಕರೆನ್ಸಿ(ಎಫ್ಐಸಿಎನ್) ವ್ಯವಹಾರ ಮಾಡುವ ಮೂಲಕ ಭಯೋತ್ಪಾದನೆಯನ್ನು ಹರಡಲು ಕೆಲಸ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ, ದಾವೂದ್ ಇಬ್ರಾಹಿಂ ಮತ್ತು ಅದರ ಡಿ ಕಂಪನಿಯು ಲಷ್ಕರ್-ಎ-ತೈಬಾ (ಎಲ್ಇಟಿ), ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಅಲ್ ಖೈದಾ ಮೂಲಕ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ.

ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಫೆಬ್ರವರಿ 2022 ರಲ್ಲಿ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿತ್ತು. ಎನ್‌ಐಎ ದೇಶದ ಅತಿದೊಡ್ಡ ಭಯೋತ್ಪಾದನಾ ತನಿಖಾ ಸಂಸ್ಥೆಯಾಗಿದೆ.

ಸದ್ಯಕ್ಕೆ ಇಬ್ರಾಹಿಂ ಮತ್ತು ಆತನ ಸಹಚರರು ಪಾಕಿಸ್ತಾನದಲ್ಲಿ ಅಡಗಿಕೊಂಡು ಭಯೋತ್ಪಾದನಾ ಕಾರ್ಯಗಳನ್ನ ಮಾಡುತ್ತಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಎನ್‌ಐಎ ದಾವೂದ್ ಇಬ್ರಾಹಿಂ ಮತ್ತು ಆತನ ಡಿ ಕಂಪನಿಯ ಭಯೋತ್ಪಾದಕ ಚಟುವಟಿಕೆಗಳ ತನಿಖೆ ಮಾತ್ರವಲ್ಲದೆ ಭೂಗತ ಪಾತಕಿ ಛೋಟಾ ಶಕೀಲ್, ಜಾವೇದ್ ಚಿಕ್ನಾ, ಟೈಗರ್ ಮೆನನ್, ಇಕ್ಬಾಲ್ ಮಿರ್ಚಿ (ಮೃತ), ದಾವೂದ್ ಸಹೋದರಿ ಹಸೀನಾ ಪಾರ್ಕರ್ (ಮೃತ) ಅವರ ಭಯೋತ್ಪಾದಕ ಚಟುವಟಿಕೆಗಳ ತನಿಖೆಯನ್ನೂ ನಡೆಸಲಿದೆ.

Donate Janashakthi Media

Leave a Reply

Your email address will not be published. Required fields are marked *