ಮೃಣಾಲ್ ಸೆನ್ ಅವರ ಸಮಕಾಲೀನತೆ ವರ್ಷಪೂರ್ತಿ ಮಾಸಿಕ ವೆಬಿನಾರ್ ಸರಣಿಯ ಉಪನ್ಯಾಸ 3 ಕಾರ್ಯಕ್ರಮವನ್ನು ಡಿಸೆಂಬರ್-3 ರಂದು ಬೆಳಿಗ್ಗೆ-11 ಕ್ಕೆ ಆಯೋಜಿಸಲಾಗಿದೆ. ಸರಣಿ
ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ ಸಿನೆಮಾ ಮಹಾನ್ ತ್ರಿವಳಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್ ಇನ್ನಿಬ್ಬರು) ಒಬ್ಬರು. ‘ಎಡಪಂಥೀಯ ರಾಜಕೀಯ ಸಿನೆಮಾದ ಪ್ರವರ್ತಕರು’, ‘ಸಿನೆಮಾದ ಬೀದಿ ಹೋರಾಟಗಾರ’, ‘ಶಾಶ್ವತ ಪ್ರಯೋಗಶೀಲ’ ಎಂದೆಲ್ಲ ಹೆಸರಾದವರು. ಅವರ ಶತಮಾನೋತ್ಸವದ ಸಂದರ್ಭದಲ್ಲಿ ಚಿತ್ರ ಸಮುದಾಯ ಅವರ ಫಿಲಂಗಳ ಸದಾ ಸಮಕಾಲೀನತೆಯ ಅನುಸಂಧಾನ ಮಾಡುವ ವೆಬಿನಾರ್ ಸರಣಿಯನ್ನು ಆಯೋಜಿಸುತ್ತಿದೆ. ವೆಬಿನಾರ್
ಪ್ರತಿ ತಿಂಗಳ ಒಂದರಂತೆ ವರ್ಷಪೂರ್ತಿ ನಡೆಯುವ ಈ ಸರಣಿಯಲ್ಲಿ ಕರ್ನಾಟಕದ ಸಿನೆಮಾ ಕರ್ಮಿಗಳು, ಸಿನೆಮಾ ಪ್ರಿಯರು, ಪರಿಣತರು, ಸಿನೆಮಾ ಕಲೆಗೆ ಅವರ ಕೊಡುಗೆಯ ಹಲವು ಮಗ್ಗುಲುಗಳನ್ನು ಕಂಡುಕೊಳ್ಳುವ ಉಪನ್ಯಾಸ/ಸಂವಾದಗಳನ್ನು ನಡೆಸಲಿದ್ದಾರೆ. ವೆಬಿನಾರ್
ಇದನ್ನೂ ಓದಿ:ನಾಳೆ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ; ಇಲ್ಲಿದೆ ವಿವರ
ವೆಬಿನಾರ್ ನ ಉದ್ಘಾಟನಾ ಉಪನ್ಯಾಸವನ್ನು ಭಾರತದ ಸಮಕಾಲೀನ ಸಿನೆಮಾ ದಿಗ್ಗಜಗಳಲ್ಲಿ ಒಬ್ಬರಾದ ಅಡೂರ್ ಗೋಪಾಲಕೃಷ್ಣನ್ ಈಗಾಗಲೇ ಸೆಪ್ಟೆಂಬರ್ 2ರಂದು ನೀಡಿದ್ದಾರೆ. ವೆಬಿನಾರ್
ಕನ್ನಡದ ಪ್ರಸಿದ್ಧ ಸಮಕಾಲೀನ ನಿರ್ದೇಶಕ ಬಿ ಸುರೇಶ ಅವರು ಅಕ್ಟೋಬರ್ 14 ರಂದು ಅಕಾಲೇರ್ ಶಂಧಾನೆ : ಬರ ಅಂದ್ರೆ ಎಲ್ರಿಗೂ ಇಷ್ಟ ಎಂಬ ವಿಷಯದ ಕುರಿತು ವೆಬಿನಾರ್ ಸರಣಿಯ 2 ನೇ ಉಪನ್ಯಾಸವನ್ನು ನೀಡಿದ್ದಾರೆ. ವೆಬಿನಾರ್
ಈ ವೆಬಿನಾರ್ ಸರಣಿಯ 3 ನೇ ಉಪನ್ಯಾಸವನ್ನು ಸಿನೆಮೋತ್ಸಾಹಿ, ಪತ್ರಕರ್ತ ಬಿ ಎಂ ಸುಜಯ್ ಅವರು ಡಿಸೆಂಬರ್ 3 ರಂದು ಭುವನ್ ಶೋಂ ಫಿಲಂ ಕುರಿತು ನೀಡಲಿದ್ದಾರೆ.
ಎಲ್ಲ ಸಿನೆಮಾ ಆಸಕ್ತರು ಈ ಕೆಳಗಿನ
https://us06web.zoom.us/j/
Meeting ID : 823 7769 6990
Passcode : 067349
ಉಪನ್ಯಾಸದ ನಂತರ ಸಂವಾದವಿದ್ದು ಅದರ ನಿರ್ವಹಣೆಯನ್ನು ಸಿನಿಮಾ ಪರಿಣತ ಕೆ.ಫಣಿರಾಜ್ ಮಾಡಲಿದ್ದಾರೆ. ಜನಶಕ್ತಿ ಮೀಡಿಯಾದಲ್ಲಿ ಕಾರ್ಯಕ್ರಮದ ನೇರ ಪ್ರಸಾರವಾಗಲಿದೆ. ವೆಬಿನಾರ್
ವಿಡಿಯೋ ನೋಡಿ:‘ಸಿನಿಮಾ’ ಸಾಮಾಜಿಕ ತಲ್ಲಣಗಳ ಪ್ರತಿಬಿಂಬ – ನಟ, ನಿರ್ದೇಶಕ ಬಿ.ಸುರೇಶ ಜೊತೆ ಮಾತುಕತೆ Janashakthi Media