ಕೊಪ್ಪಳದ ಶಾಸಕರು, ಸಚಿವರು, ಸಂಸದರು ಕಾಲಹರಣ ಮಾಡುತ್ತಿದ್ದಾರೆ- ರೈತ ಮುಖಂಡ ಟಿ. ಯಶವಂತ ಆಕ್ರೋಶ

ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿ ಗ್ರಾಮೀಣಾಭಿವೃದ್ಧಿ ನಿರ್ಲಕ್ಷ್ಯ ಮಾಡುತ್ತಿದೆ ಎಂದ ರೈತ ಮುಖಂಡ ಯಶವಂತ

ಕೊಪ್ಪಳ: ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಲು ಬಚಾವತ್ ತೀರ್ಪಿನ ಪ್ರಕಾರ ಸಿಕ್ಕಿರುವ ಕೃಷ್ಣ ನದಿ ನೀರನ್ನು ಬಳಸಲು ಯೋಜನೆ ರೂಪಿಸದೇ ಇಲ್ಲಿನ ಶಾಸಕರು, ಸಚಿವರು, ಸಂಸತ್ ಸದಸ್ಯರು ಕಾಲಹರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು. ಅವರು ನಗರದಲ್ಲಿ ಕೆಪಿಆರ್‌ಎಸ್ ನಾಲ್ಕನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮ್ಮೇಳನದಲ್ಲಿ ಮಾತನಾಡಿದ ಯಶವಂತ ಅವರು, “ರೈತರ ಆದಾಯವನ್ನು ಡಬಲ್ ಮಾಡುವುದಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಯಾವುದೇ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡದೇ ವಂಚಿಸಿದೆ. ರೈತರ ಆತ್ಮಹತ್ಯೆಗಳು ಡಬಲ್ ಆಗಿವೆ ,ರೈತ ಕುಟುಂಬದ ಸಾಲ ಮಾತ್ರವೇ ಡಬಲ್ ಆಗಿದೆ. ಇಂತಹ ರೈತ ವಿರೋಧಿ ಆಡಳಿತವನ್ನು ತಿರಸ್ಕರಿಸಬೇಕು. ಕೇಂದ್ರ ಸರ್ಕಾರ ಸತತವಾಗಿ ಆರೋಗ್ಯ, ಶಿಕ್ಷಣ, ಉದ್ಯೋಗ ಖಾತರಿ, ಆಹಾರ ಭದ್ರತೆ ಹಾಗೂ ಗ್ರಾಮೀಣ ಮೂಲಸೌಕರ್ಯಕ್ಕೆ ಅನುದಾನ ಕಡಿತ ಮಾಡುತ್ತಿದ್ದು ಗ್ರಾಮೀಣಾಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ; ದೇಶದಲ್ಲೆ ಮೊದಲು!

ಯಾವಾಗಲೂ ಬರ ಪಡೀತ ಪ್ರದೇಶವಾಗಿರುವ ಕೊಪ್ಪಳ ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಲು ಬಚಾವತ್ ತೀರ್ಪಿನ ಪ್ರಕಾರ ಸಿಕ್ಕಿರುವ ಕೃಷ್ಣ ನದಿ ನೀರನ್ನು ಬಳಸಲು ಯೋಜನೆ ರೂಪಿಸದೇ ಇಲ್ಲಿನ ಶಾಸಕರು, ಸಚಿವರು, ಸಂಸತ್ ಸದಸ್ಯರು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಯಶವಂತ ಅವರು, “ತೀವ್ರವಾದ ಹೋರಾಟದ ಮೂಲಕ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ” ಎಂದು ಹೇಳಿದರು.

ಕೊಪ್ಪಳದ ಸಂಸದ, ಶಾಸಕರು, ಸಚಿವರು ಕಾಲಹರಣ ಮಾಡುತ್ತಿದ್ದಾರೆ - ಯಶವಂತ MPs, MLAs, Ministers of Koppal are lingering - Yashwant

ರೈತ ಮುಖಂಡ ಎಚ್.ಆರ್. ನವೀನ್ ಕುಮಾರ್‌ ಅವರು ಮಾತನಾಡಿ, “ಸ್ವಾತಂತ್ರ ಬಂದು ಎಪ್ಪಾತ್ತರು ವರ್ಷ ಕಳೆದರು ರೈತರಿಗೆ ಬೆಲೆ ನಿಗದಿಯ ಸ್ವತಂತ್ರ ಸಿಕ್ಕಿಲ್ಲ. ನಿರುದ್ಯೋಗ ಬಡತನ ಬೆಳೆಯುತ್ತಿದೆ. ಕೃಷಿ ಭೂಮಿ ಉದ್ದಿಮಿಗಳ ಪಾಲಾಗುತ್ತಿದೆ. ಇದೆ ರೀತಿ ಮುಂದುವರೆದರೆ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಸೃಷ್ಟಿಯಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಹೋರಾಟಗಾರ ದೊಡ್ಡನಗೌಡ ಪಾಟೀಲ್ ಅವರು ಈ ಸಭೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಹ ಕಾರ್ಯದರ್ಶಿ ಜಿ. ನಾಗರಾಜ್ ಮತ್ತು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಖಾಸಿಂ ಸರ್ದಾರ್, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಮುಖಂಡರಾದ ಸಂಗಮ್ಮ, ವಕೀಲರಾದ ಆರ್.ಕೆ. ದೇಸಾಯಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಮ್. ಸಿದ್ದಪ್ಪ, ಕೊಪ್ಪಳ ಜಿಲ್ಲಾ ರೈತ ಮುಖಂಡ ಶಿವಕುಮಾರ್ ಗಂಗಾವತಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಡಿಯೊ ನೋಡಿ: ಧರ್ಮಸ್ಥಳ, ಉಜಿರೆಯಲ್ಲಿ 463 ಅಸಹಜ ಸಾವು – ಖಾವಂದರಿಂದ ಮಾನವ ಹಕ್ಕುಗಳ ಉಲ್ಲಂಘನೆ – ನರೇಂದ್ರ ನಾಯಕ್‌ ನೇರ ಆರೋಪ

Donate Janashakthi Media

Leave a Reply

Your email address will not be published. Required fields are marked *