ಉತ್ತರ ಪ್ರದೇಶ : ಮಹಾಕುಂಭಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. 10 ಕ್ಕೂ ಹೆಚ್ಚು ಮಂದಿ ಸಾವನ್ನೊಪ್ಪಿದ್ದೂ, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಘಟನೆಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಕಾಲ್ತುಳಿತ
ತ್ರಿವೇಣಿ ಸಂಗಮದಲ್ಲಿ ನಡೆದಿರುವ ದುರಂತಕ್ಕೆ ತೀವ್ರ ವಿಷಾದವಿದೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಯಚೂರು| ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ; ನಾಲ್ವರ ವಿರುದ್ಧ ದೂರು ದಾಖಲು
ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಸಂತ್ರಸ್ತರ ನೆರವಿಗೆ ಬರುವಂತೆ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ.
ಇನ್ನು , ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಕೂಡ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಿಎಂ ಯೋಗಿ ಸರ್ಕಾರದ ವೈಫಲ್ಯಕ್ಕೆ ಇದೊಂದು ದೊಡ್ಡ ಉದಾಹರಣೆ ಎಂದು ಲೇವಡಿ ಮಾಡಿದ್ದಾರೆ.
ವಿಶ್ವದರ್ಜೆಯ ವ್ಯವಸ್ಥೆಯ ಮುಖವಾಡ ಕಳಚಿಬಿದ್ದಿದೆ. ಕೂಡಲೇ ಮಹಾಕುಂಭದ ಸಂಪೂರ್ಣ ಆಡಳಿತವನ್ನು ಸೇನೆಗೆ ವಹಿಸಬೇಕು ಎಂದು ಅಖಿಲೇಶ್ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಸುಣ್ಣಕಲ್ಲಬಿದರಿ : ಹಾಸ್ಟೆಲ್ ಅವ್ಯವಸ್ಥೆ- ವಿದ್ಯಾರ್ಥಿಗಳ ಪರದಾಟ Janashakthi Media