ಪ್ರಧಾನಿ ಹುದ್ದೆಗೆ ಮೋದಿ ಕಳಂಕ – ಜಾಗೃತ ನಾಗರಿಕ ಕರ್ನಾಟಕ ಆರೋಪ

ಬೆಂಗಳೂರು: ಚುನಾವಣಾ ಆಯೋಗ ಯಾವ ಮರ್ಜಿ‌ ಮುಲಾಜಿಗೆ ಒಳಗಾಗದೇ ಕ್ರಮಕ್ಕೆ ಮುಂದಾಗಿ ದೇಶದ ಸಾಮರಸ್ಯ ಪರಂಪರೆಯನ್ನು ಕಾಯುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಬೇಕಿದೆ ಎಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ಒತ್ತಾಯಿಸಿದೆ.

ನರೇಂದ್ರ ಮೋದಿ ರಾಜಸ್ಥಾನದ ಚುನಾವಣಾ ಭಾಷಣದಲ್ಲಿ ಸಾಂವಿಧಾನಿಕ ಹುದ್ದೆಗೆ ಕಳಂಕ ತರುವಂತಹ ಮಾತನ್ನಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚಲಿದೆ, ಭೂಮಿ, ಒಡವೆ- ವಸ್ತು, ಕಡೆಗೆ ಹೆಣ್ಣು ಮಕ್ಕಳ ಮಂಗಳ ಸೂತ್ರವನ್ನು ಸಹ ಅವರಿಗೇ ಕೊಟ್ಟುಬಿಡಲಾಗುತ್ತದೆ ಎಂದು ಬಹು ಸಂಖ್ಯಾತ ಸಮುದಾಯವನ್ನು ಹೆದರಿಸಿದ್ದಾರೆ.

ಅಲ್ಲದೆ ಮುಸ್ಲಿಮರು ಅತಿ ಹೆಚ್ಚು ಮಕ್ಕಳನ್ನು ಪಡೆಯುವಂಥವರು ಎಂದು ಚುಚ್ಚಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತುಗಳು ಮಾತ್ರವಲ್ಲ ಇದು ದ್ವೇಷ ಭಾಷಣವೊಂದರ ಅತ್ಯಂತ ಕೆಟ್ಟ, ಉಗ್ರವಾದ ಮಾದರಿ.

ಇದನ್ನೂ ಓದಿ: ಗೋ ಬ್ಯಾಕ್‌ ಮೋದಿ…ಗೋ ಬ್ಯಾಕ್‌ ಅಮಿತ್‌ ಶಾ.. ಎಂಡ್‌ ಗೋ ಬ್ಯಾಕ್‌ ನಿರ್ಮಲಾ ಸೀತಾರಾಮನ್‌

ಇಂತಹ ಭಾಷಣಗಳು ಉಂಟು ಮಾಡುವ ಪರಿಣಾಮಗಳನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಚುನಾವಣೆ ಮುಗಿದ ಮೇಲೂ ಸಹ ಇದರ ಗಾಯಗಳು ದಶಕಗಳ ಕಾಲ ಉಳಿಯುತ್ತವೆ. ಶ್ರೀ ಮೋದಿಯವರು ಅನೇಕ ದ್ವೇಷ ಭಾಷಣಗಳನ್ನು ಹಿಂದೆಯೂ ಮಾಡಿದ್ದಾರೆ ಆದರೆ ಅವರು ಈ ಬಾರಿ ತಮ್ಮ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ದ್ವೇಷ ಭಾಷಣದ ಪಾತಾಳಕ್ಕೆ ಇಳಿದಿದ್ದಾರೆ.ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದೆ ಎಂದು ಜಾಗೃತ ಕರ್ನಾಟಕದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿಗೆ ಲಗಾಮನ್ನು ತೊಡಿಸುವಲ್ಲಿ ಹಾಗೂ ಶಿಕ್ಷೆ ವಿಧಿಸುವಲ್ಲಿ ಚುನಾವಣಾ ಆಯೋಗ ಮತ್ತು ನ್ಯಾಯಾಂಗ ವಿಫಲವಾದರೆ ಅಲ್ಲಿಗೆ ಭಾರತದಲ್ಲಿ ಧರ್ಮ ನಿರಪೇಕ್ಷ ಜನತಂತ್ರ ಮರಣಶಯ್ಯೆಯಲ್ಲಿದೆ ಎಂದೇ ಅರ್ಥ. ಕೂಡಲೇ ಆಯೋಗವು ದೂರನ್ನು ದಾಖಲಿಸಿಕೊಂಡು ಕಾರ್ಯ ಪ್ರವೃತ್ತವಾಗದಿದ್ದರೆ ಚುನಾವಣಾ ಆಯೋಗವು ಅತ್ಯಂತ ಪಕ್ಷಪಾತಿಯು ಬೆನ್ನುಮೂಳೆ ಇಲ್ಲದಿರುವ ಸಂಸ್ಥೆ ಎಂಬದು ಜಗಜ್ಜಾಹೀರಾಗುತ್ತದೆ .ಈ ಚುನಾವಣೆಯಲ್ಲಿ, ಹೆಚ್ಚಿದ ಜನರ ಬಡತನ, ನಿರುದ್ಯೋಗ ಬೆಲೆ ಏರಿಕೆಗಳ ಕುರಿತು ಆಗುತ್ತಿರುವ ಚರ್ಚೆಯ ದಾರಿ ತಪ್ಪಿಸಿ ಭಾವನಾತ್ಮಕವಾಗಿ ಸೆಳೆಯುವ ಮತ್ತು‌ ಮುಸ್ಲಿಂ ದ್ವೇಷವನ್ನು ಬೆಳೆಸುವ ಉದ್ದೇಶದಿಂದಲೇ ಈ ಮಾತುಗಳನ್ನಾಡಿರುವುದು ಸುಸ್ಪಷ್ಟವಾಗಿ ಕಾಣುತ್ತಿದೆ ಎಂದು ಜಾಗೃತ ನಾಗರೀಕರು ಕರ್ನಾಟಕ ಸ್ಪಷ್ಟಪಡಿಸಿದೆ

ಇದನ್ನೂ ನೋಡಿ: ಸುಳ್ಳಿನಾ ಸರದಾರಾ ಮೋದಿಯ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *