ಪಹಲ್ಗಾಮ್ ಭಯೋತ್ಪಾದಕ ದಾಳಿಯ ಭದ್ರತಾ ವೈಫಲ್ಯದ ಹೊಣೆ ಹೊತ್ತು ಮೋದಿ, ಶಾ ರಾಜೀನಾಮೆ ನೀಡಲಿ – ಬಿಕೆ ಇಮ್ತಿಯಾಜ್

ಮಂಗಳೂರು: ಪಹಾಲ್ಗಮ್ ಭಯೋತ್ಪಾದಕರ ಅಮಾನುಷ ಕೃತ್ಯ ದೇಶದ ಸಾರ್ವಭೌಮತೆಯ ಮೇಲೆ ನಡೆದ ದಾಳಿ ದೇಶದ ಏಕತೆಯನ್ನು ಕಾಪಾಡಿಕೊಂಡು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ಹೇಳಿದರು.

ಅವರು ಇಂದು ಪಹಾಲ್ಗಮ್ ಭಯೋತ್ಪಾದಕ ಕೃತ್ಯ ಖಂಡಿಸಿ ಡಿವೈಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇದನ್ನು ಓದಿ :-ಜೆಎನ್‌ಯು ವಿದ್ಯಾರ್ಥಿ ಸಂಘ ಚುನಾವಣೆ: ಶೇ 70 ಮತದಾನ

ಪಹಾಲ್ಗಮ್ ಪ್ರಕೃತಿ ರಮಣೀಯ ತಾಣ ಪ್ರತಿನಿತ್ಯ ಸಾವಿರಾರು ಪ್ರವಾಸಿಗಳು ವಿನೋದ ವಿಹಾರ ಕ್ಕಾಗಿ ಬರುತ್ತಾರೆ. ಕಾಶ್ಮೀರದ ಗಲ್ಲಿ ಗಲ್ಲಿ ಗಳಲ್ಲಿ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗುತ್ತದೆ ಆದರೆ ಸಾವಿರಾರು ಪ್ರವಾಸಿಗರು ಬರುವ ಪಹಾಲ್ಗಮ್ ನಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿ ಯನ್ನು ನೇಮಿಸದೆ 28ಜನರ ಅಮಾನುಷ ಹತ್ಯೆಗೆ ಕೇಂದ್ರ ಸರಕಾರದ ವೈಫಲ್ಯವೇ ಕಾರಣ ಎಂದ ಅವರು ಭದ್ರತಾ ಲೋಪಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಮಾತನಾಡಿ ಭಯೋತ್ಪಾದಕ ದಾಳಿಯ ನಂತರ ಬಿಜೆಪಿ, ಸಂಘ ಪರಿವಾರ ತನ್ನ ತಪ್ಪನ್ನು ಮರೆಮಾಚಲು ಮುಸ್ಲಿಂ ಸಮುದಾಯದ ಮೇಲೆ ಆರೋಪ ಹೊರಿಸುತ್ತಿದೆ, ಮೋದಿ ಶಾ ರಿಂದ ಗೋದಿ ಮೀಡಿಯಾಗಳು ನೈಜ ಸುದ್ದಿಗಳನ್ನು ಬಿತ್ತರಿಸದೆ ದೇಶದಲ್ಲಿ ಆರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಆದರೆ ಕಾಶ್ಮೀರದ ಜನತೆ ಒಂದಾಗಿ ಸಂಘ ಪರಿವಾರ ಮತ್ತು ಗೋದಿ ಮೀಡಿಯಾಗಳ ಸುಳ್ಳು ಮತ್ತು ಸಂಚುಗಳನ್ನು ಸೋಲಿಸಿದ್ದಾರೆ ಎಂದು ಅವರು ಹೇಳಿದರು.

ಇದನ್ನು ಓದಿ :-ಇರಾನ್-ಯು.ಎಸ್ ಮಾತುಕತೆ : ಅಣು ಒಪ್ಪಂದಕ್ಕೆ ಹಾದಿಯೋ, ಯುದ್ಧಕ್ಕೆ ಮುನ್ನುಡಿಯೋ?

ಡಿ ವೈ ಎಫ್ ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಮಾಧುರಿ ಬೋಳಾರ, ಯೋಗೀತಾ ಉಳ್ಳಾಲ, ಅಶ್ರಫ್ ಹರೇಕಳ, ರಿಯಾಜ್ ಮುಡಿಪು, ಉದಯಚಂದ್ರ ರೈ, ಜಂಷೀರ್ ಬೆಂಗ್ರೆ, ಬಿಲಾಲ್ ಬೆಂಗ್ರೆ, ನಾಸಿರ್ ಬಾಸ್,ಶ್ರೀನಾಥ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸಹ ಕಾರ್ಯದರ್ಶಿ ಗಳಾದ ರಿಜ್ವಾನ್ ಖಂಡಿಗ ಸ್ವಾಗತಿಸಿ, ತಯ್ಯುಬ್ ಬೆಂಗ್ರೆ ವಂದಿಸಿದರು.

Donate Janashakthi Media

Leave a Reply

Your email address will not be published. Required fields are marked *