ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ತಮ್ಮ ಹೇಳಿಕೆಗಳ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಪರಿಶೀಲನೆ ನಡೆಸಿರುವ ಚುನಾವಣಾ ಆಯೋಗವು ಏಪ್ರಿಲ್ 29ರ ಬೆಳಿಗ್ಗೆ 11ಗಂಟೆ ಒಳಗೆ ಉತ್ತರಿಸುವಂತೆ ಸೂಚಿಸಿದೆ. ಸಂಹಿತೆ
ಮುಸ್ಲಿಂ ಎಂಬ ಪದ ಬಳಸದೆ ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ಹೇಳುವ ಮೂಲಕ ಮೋದಿ, ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ : ಚಾಮರಾಜನಗರ ಲೋಕಸಭಾ (ಎಸ್.ಸಿ ಮೀಸಲು) ಕ್ಷೇತ್ರ:ಲೋಕಸಭಾ ಅಖಾಡ-2024
ಜಾತಿ, ಧರ್ಮ, ಭಾಷೆ ಮತ್ತು ಸಮುದಾಯದ ಆಧಾರದ ಮೇಲೆ ಇಬ್ಭಾಗಿಸುವ ಮತ್ತು ದ್ವೇಷ ಹರಡುವ ಹೇಳಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪಿಸಿವೆ. ಮೋದಿ ಹೇಳಿಕೆ ಕುರಿತಂತೆ ಪ್ರತಿಕ್ರಿಯೆಗೆ ಆರಂಭದಲ್ಲಿ ನಿರಾಕರಿಸಿದ್ದ ಚುನಾವಣಾ ಆಯೋಗವು, ಬಿಜೆಪಿ ನಾಯಕ ನೀಡಿದ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಬಳಿಕ ಉತ್ತರಿಸಿತ್ತು.
ಇದನ್ನು ನೋಡಿ : ಬಿಜೆಪಿ ಮತ್ತು ಮಿತ್ರಪಕ್ಷಗಳಿಗಿಲ್ಲ ಕಾರ್ಮಿಕರ ಮತ – ಕಾರ್ಮಿಕ ನಾಯಕರ ಅಭಿಮತ Janashakthi Media