EU ನಿರ್ಧಾರವನ್ನು ಒಕ್ಕೂಟ ಸರ್ಕಾರ ಖಂಡಿಸಿದ್ದು, ಮಣಿಪುರ ಘಟನೆಯು ಭಾರತದ ಆಂತರಿಕ ವಿಚಾರ ಎಂದಿದೆ
ನವದೆಹಲಿ: ಎರಡು ದಿನಗಳ ಫ್ರಾನ್ಸ್ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ಯಾರಿಸ್‌ಗೆ ತೆರಳಿದ್ದಾರೆ. ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಗೌರವಾನ್ವಿತ ಅತಿಥಿಯಾಗಿ ಪ್ರಧಾನಿಯನ್ನು ಆಹ್ವಾನಿಸಿದ್ದರು. ಹೀಗಾಗಿ ಜುಲೈ 13 ಮತ್ತು 14 ರಂದು ಪ್ರಧಾನಿ ಮೋದಿ ಫ್ರಾನ್ಸ್‌ನಲ್ಲಿ ಇರಲಿದ್ದಾರೆ.
ಶುಕ್ರವಾರ (ಜುಲೈ 13) ಪ್ರಧಾನ ಮಂತ್ರಿಗಳು ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಲಿದ್ದಾರೆ, ಇದರಲ್ಲಿ 269 ಸದಸ್ಯರ ಭಾರತೀಯ ತ್ರಿ-ಸೇವಾ ತುಕಡಿ ಭಾಗವಹಿಸಲಿದೆ. ಈ ಸಂದರ್ಭದಲ್ಲಿ ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ (ಐಎಎಫ್) ಮೂರು ರಫೇಲ್ ಫೈಟರ್ ಜೆಟ್‌ಗಳು ಫ್ಲೈಪಾಸ್ಟ್‌ಗೆ ಸೇರಿಕೊಳ್ಳಲಿವೆ.
ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದರ ನಂತರ ಪ್ರಧಾನಿ ಮೋದಿ ಯುಎಇ ದೇಶದ ಅಬುಧಾಬಿಗೆ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ: 2024 ಲೋಕಸಭ ಚುನಾವಣೆ: ರಾಮನಾಥಪುರಂನಿಂದ ಪ್ರಧಾನಿ ಮೋದಿ ಸ್ಪರ್ಧೆ?
ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಫ್ರಾನ್ಸ್‌ನಿಂದ 26 ರಫೇಲ್ ಎಂ ನೇವಲ್ ಜೆಟ್‌ಗಳು ಮತ್ತು ಮೂರು ಹೆಚ್ಚುವರಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುವ ಒಪ್ಪಂದವನ್ನು ಘೋಷಿಸುವ ನಿರೀಕ್ಷೆಯಿದೆ. ಸರಿಸುಮಾರು 90,000 ಕೋಟಿ ಮೌಲ್ಯದ ಒಪ್ಪಂದಗಳು ನಡೆಯಲಿದ್ದು, 26 ರಫೇಲ್ ಎಂ ವಿಮಾನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 22 ಸಿಂಗಲ್ ಸೀಟರ್ ಮತ್ತು ನಾಲ್ಕು ಡಬಲ್ ಸೀಟರ್ ಟ್ರೈನರ್ ಇದರಲ್ಲಿ ಇರಲಿವೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಮೂರು ಹೆಚ್ಚುವರಿ ಜಲಾಂತರ್ಗಾಮಿ ನೌಕೆಗಳು ಪ್ರಾಜೆಕ್ಟ್ 75 ರ ಅಡಿಯಲ್ಲಿ ಸ್ಕಾರ್ಪೀನ್ ಒಪ್ಪಂದದ ಭಾಗವಾಗಿರುತ್ತವೆ.
ಈ ನಡುವೆ ಯುರೋಪಿಯನ್ ಯುನಿಯನ್(EU) ಸಂಸತ್ತಿನಲ್ಲಿ ಜುಲೈ 12 ರಂದು ಮಣಿಪುರದ ಹಿಂಸಾಚಾರದ ಬಗ್ಗೆ “ತುರ್ತು ಚರ್ಚೆ” ನಡೆಸುವ ನಡೆಸುವ ನಿರ್ಣಯ ಮಂಡಿಸಲಾಗಿದೆ. ಬ್ರುಸೆಲ್ಸ್ ಮೂಲದ ಯುರೋಪಿನ್ ಯುನಿಯನ್ ಸಂಸತ್ತಿನಲ್ಲಿ ನಿರ್ಣಯವನ್ನು ಮಂಡಿಸಲಾಗಿದ್ದು, ಅದನ್ನು ಬುಧವಾರ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತಾವನೆಯನ್ನು ಆರು ಸಂಸದೀಯ ಗುಂಪುಗಳು ಅಂಗೀಕರಿಸಿವೆ. ಅದಾಗ್ಯೂ ಭಾರತ ಸರ್ಕಾರ ಇದನ್ನು ಖಂಡಿಸಿದ್ದು ಮಣಿಪುರ ಘಟನೆಯು ಭಾರತದ ಆಂತರಿಕ ವಿಚಾರ ಎಂದು ಹೇಳಿದೆ.
ಇದನ್ನೂ ಓದಿ: ಯುಸಿಸಿ: ಆದಿವಾಸಿಗಳಿಗೆ ವಿನಾಯಿತಿ ನೀಡುವಂತೆ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಸಲಹೆ