ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ‍ಪ್ರಚಾರ ಮುಗಿಸಿ ಈಗ ವಿಶ್ರಾಂತಿಯಲ್ಲಿದ್ದು,  ಶುಕ್ರವಾರ ಬೆಳಿಗ್ಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೊರಿಯಲ್‌ನ ಧ್ಯಾನ ಮಂಟಪದಲ್ಲಿ ಧ್ಯಾನಾಸಕ್ತರಾದರು.

ಅವರು ಧ್ಯಾನ ಮಾಡುವ ವಿಡಿಯೊವನ್ನು ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ.

ಇದನ್ನು ಓದಿ: ದ್ವೇಷದ ಭಾಷಣ ಮಾಡುವ ಮೂಲಕ ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ: ಡಾ.ಮನಮೋಹನ್ ಸಿಂಗ್

ಖಾವಿ ಬಟ್ಟೆ ತೊಟ್ಟು, ಹಣೆಗೆ ವಿಭೂತಿ ಹಚ್ಚಿ, ಕೈಯಲ್ಲಿ ಜಪಮಣಿ ಹಿಡಿದುಕೊಂಡು ಸ್ವಾಮಿ ವಿವೇಕಾನಂದರ ಪ್ರತಿಮೆ ಮುಂದೆ ಪ್ರಧಾನಿ ಧ್ಯಾನ ಮಗ್ನರಾಗಿದ್ದಾರೆ.

ಇಲ್ಲಿಯೇ ಸ್ವಾಮಿ ವಿವೇಕಾನಂದ ಅವರು ಧ್ಯಾನ ಮಾಡಿದ್ದರು. ಧ್ಯಾನಕ್ಕೂ ಮುನ್ನ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇಗುಲದಲ್ಲಿ ಅರ್ಘ್ಯ ಅರ್ಪಿಸಿದರು. ಜೂನ್ ಒಂದರವರೆಗೆ ಅವರು ಇಲ್ಲಿ ಧ್ಯಾನ ಮಾಡಲಿದ್ದಾರೆ. 45 ಗಂಟೆಗಳ ದೀರ್ಘ ಧ್ಯಾನ ಅವರದ್ದಾಗಿರಲಿದೆ ಎಂದು ಬಿಜೆಪಿ ಬರೆದುಕೊಂಡಿದೆ.

ಇದನ್ನು ನೋಡಿ : ಮಂಗಳ ಸೂತ್ರ ಮತ್ತು ಮತ ರಾಜಕಾರಣ – ಡಾ. ಮೀನಾಕ್ಷಿ ಬಾಳಿ, ಕೆಎಸ್‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *