ನವದೆಹಲಿ: ʻವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್’ (ಗ್ರಾಮೀಣ) ಮಸೂದೆ 2025 (ವಿಬಿ- ಜಿಆರ್‌ಎಎಂಜಿ) ಎಂಬ ಹೊಸ ಮಸೂದೆಯನ್ನು ಮಂಡಿಸುವ ಮೂಲಕ ಕೇಂದ್ರ ಸರಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗ)ಯನ್ನು ವಾಸ್ತವಿಕವಾಗಿ ಕೆಡವಿಯೇ ಬಿಟ್ಟು, ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿಯ ಗ್ರಾಮೀಣ ಕುಟುಂಬಗಳ ಹಕ್ಕನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತಿದೆಮತ್ತು ಅವನ್ನು ಕಾರ್ಯಾಂಗ/ಸರ್ಕಾರಗಳ ಮರ್ಜಿಗೆ ಒಳಪಡಿಸುತ್ತದೆ ಎನ್ನುತ್ತ ಇದು ಕೇಂದ್ರ ಸರಕಾರದ ಅತ್ಯಂತ ಪ್ರತಿಗಾಮಿ ನಡೆ ಎಂದು ಸಿಐಟಿಯು ಬಲವಾಗಿ ಖಂಡಿಸಿದೆ. ಯೋಜನೆ
ಹೊಸ ಮಸೂದೆಯು 100 ದಿನಗಳ ಬದಲಿಗೆ 125 ದಿನಗಳ ಉದ್ಯೋಗವನ್ನು ಖಚಿತಪಡಿಸಿಸುವುದಾಗಿ ಹೇಳುತ್ತದೆ. ಆದರೆ ಅದು ಸಂಪೂರ್ಣವಾಗಿ ಮೋಸಗೊಳಿಸುವ ಕಸರತ್ತಲ್ಲದೆ ಬೇರೇನೂ ಅಲ್ಲ, ಈ ಮಸೂದೆಯ ಉದ್ದೇಶ ಮತ್ತು ಮನರೇಗದ ಅಡಿಯಲ್ಲಿನ ಬೇಡಿಕೆ-ಆಧಾರಿತ ನಿಬಂಧನೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿ ಅರ್ಹ ಗ್ರಾಮೀಣ ಜನರ ದೊಡ್ಡ ವಿಭಾಗವನ್ನು ಖಾತರಿಪಡಿಸಿದ ಉದ್ಯೋಗ ಯೋಜನೆಯ ವ್ಯಾಪ್ತಿಯಿಂದ ಹೊರಗಿಡುವುದೇ ಆಗಿದೆ ಎಂದು ಸಿಐಟಿಯು ಹೇಳಿದೆ.
ಉದ್ಯೋಗ ಚೀಟಿಗಳನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಇದನ್ನು ಮಾಡಲಾಗುವುದು. ಇದನ್ನು ಅಧಿಕಾರಿಶಾಹಿ/ಸರ್ಕಾರ ನಿರ್ಧರಿಸುತ್ತವೆ. ಇದರ ಜೊತೆಗೆ ಉದ್ಯೋಗಾಕಾಂಕ್ಷಿಗಳಿಗೆ ಡಿಜಿಟಲ್ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ, ಇದು ಈ ಯೋಜನೆಯಡಿಯಲ್ಲಿ ಉದ್ಯೋಗ ಹುಡುಕುತ್ತಿರುವ ಅರ್ಹರನ್ನು ಹೊರಗಿಡುವುದನ್ನು ಮತ್ತಷ್ಟು ಉತ್ತೇಜಿಸುತ್ತದೆ. ಹೀಗೆ ಗ್ರಾಮೀಣ ಜನಗಳನ್ನು ಈ ಯೋಜನೆಯಿಂದ ಹೊರಗಿಡುವ ಬಹು-ವಿಧಗಳ ವಿಕೃತ ವಿಧಾನವನ್ನು ಉತ್ತೇಜಿಸುವುದು ಮಸೂದೆಯ ಹಿಂದಿನ ಕೇಂದ್ರ ಉದ್ದೇಶಗಳಲ್ಲಿ ಒಂದಾಗಿದೆ ದು ಸಿಐಟಿಯು ಕಟುವಾಗಿ ಟೀಕಿಸಿದೆ.
ಇದನ್ನೂ ಓದಿ: ಕೊನೆಗೊಳ್ಳದ ಕೋಳಿ/ಮೊಟ್ಟೆ ಮಿಥ್ಯಗಳು !!!
ಈ ಮಸೂದೆಯ ಮೂಲಕದ ಮತ್ತಷ್ಟು ಬುಡಮೇಲು ಕ್ರಮವೆಂದರೆ ನಿಧಿ ಹಂಚಿಕೆಯ ಪ್ರಶ್ನೆ, ಇದು ಕಾಯ್ದೆಯ ಪ್ರಕಾರ ಕೇಂದ್ರೀಯ ಯೋಜನೆಯಾಗಿದೆ. ಹಿಂದಿನ ಮನರೇಗ ಅಡಿಯಲ್ಲಿ ನೂರು ಪ್ರತಿಶತ ಕೇಂದ್ರೀಯವಾಗಿ ನಿಧಿ ಹಂಚಿಕೆಯಾಗುವ ಈ ಬೇಡಿಕೆ ಆಧಾರಿತ ಉದ್ಯೋಗ ಖಾತರಿ ಯೋಜನೆಯ ವೆಚ್ಚವನ್ನು ಈಗ ರಾಜ್ಯಗಳಿಗೆ ವರ್ಗಾಯಿಸುವ ಮತ್ತು ಅದರ ಜೊತೆಗೇ ನಿರುದ್ಯೋಗ ಭತ್ಯೆ ಮತ್ತು ವಿಳಂಬ ಪರಿಹಾರದ ಹಣಕಾಸಿನ ಜವಾಬ್ದಾರಿಯನ್ನೂ ವಹಿಸುವ ಒಂದು
ಯೋಜನೆಯಾಗಿ ಇದನ್ನು ಪ್ರಸ್ತಾಪಿಸಲಾಗಿದೆ, ಆದರೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮಾತ್ರ ಕೇಂದ್ರದೊಂದಿಗೇ ಉಳಿಯುತ್ತದೆ.
ಕೇಂದ್ರವು ರಾಜ್ಯವಾರು ವೆಚ್ಚದ ಮಿತಿಯನ್ನು ವಿಧಿಸುವ ಮತ್ತು ರಾಜ್ಯಗಳ ಮೇಲೆ ಹೆಚ್ಚುವರಿ ವೆಚ್ಚದ ಹೊರೆಯೊಂದಿಗೆ ವಾಢಿಕೆ ಹಂಚಿಕೆ ಎಂದು ಕರೆಯಲ್ಪಡುವ ವಿಧಾನವನ್ನು ತರುವುದು ಹಿಂದಿನ ಮನರೇಗ ಅಡಿಯಲ್ಲಿ ಇನ್ನಷ್ಟು ಜನಗಳನ್ನು ಹೊರತುಪಡಿಸಲು ಮತ್ತು ಭರವಸೆ ನೀಡಲಾದ ಪ್ರಯೋಜನಗಳನ್ನು ಕಡಿತಗೊಳಿಸಲು ಕಾರಣವಾಗುತ್ತದೆ
ಎಂದು ಸಿಐಟಿಯು ಆತಂಕ ವ್ಯಕ್ತಪಡಿಸಿದೆ.
ದೇಶದಲ್ಲಿ ಹಣಕಾಸು ಸಂಪನ್ಮೂಲ ನಿರ್ವಹಣೆಯ ಮೇಲೆ ಕೇಂದ್ರೀಕೃತ ನಿಯಂತ್ರಣವು ಹೆಚ್ಚುತ್ತಿರುವುದು ಒಕ್ಕೂಟ ತತ್ವದ ಮೂಲ ಸ್ವರೂಪವನ್ನು ತುಳಿದು ಹಾಕುತ್ತ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚಿಕೆ ಮಾನದಂಡಗಳನ್ನು ದುರಹಂಕಾರದಿಂದ ಉಲ್ಲಂಘಿಸಿ ಹಲವಾರು ರಾಜ್ಯ ಸರ್ಕಾರಗಳೊಂದಿಗೆ ತಾರತಮ್ಯದಿಂದ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ,
ಪ್ರಸ್ತಾವಿತ ವಿಬಿ-ಜಿಆರ್‌ಎಎಂಜಿ ಮಸೂದೆಯ ಪ್ರತಿಗಾಮಿ ನಿಬಂಧನೆಗಳು ಮನರೇಗ ಅಡಿಯಲ್ಲಿ ಗ್ರಾಮೀಣ ಉದ್ಯೋಗಾಕಾಂಕ್ಷಿಗಳನ್ನು ಹೊರಗಿಡುವುದರ ಮತ್ತು ಈಗಾಗಲೇ ಬಿಕ್ಕಟ್ಟಿನಿಂದ ಬಳಲುತ್ತಿರುವ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಂಚನೆಯ ಬಲಿಪಶುಗಳನ್ನಾಗಿ ಮಾಡುತ್ತದೆ ಎಂದು ಸಿಐಟಿಯು ಆಕ್ರೋಶ ವ್ಯಕ್ತಪಡಿಸಿದೆ.
ಇದು ಮನರೇಗ ಯೋಜನೆಯನ್ನು ಹಾಳುಗೆಡಹುವ ಮತ್ತು ಕಳಚಿ ಹಾಕುವ ಮೋದಿ ಸರ್ಕಾರದ ಅಮಾನವೀಯ ಹೇಯ ಯೋಜನೆ ಎಂದು ಖಂಡಿಸಿರುವ ಸಿಐಟಿಯು, ಮಸೂದೆಯನ್ನು ಸಾರಾಸಗಟು ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.. ದುಡಿಯುವ ಜನಗಳು ಒಂದು ಗೂಡಬೇಕು, ವಿರೋಧಿಸಬೇಕು ಮತ್ತು ಪ್ರತಿರೋಧಿಸಬೇಕು ಎಂದು ಅದು ಕರೆ ನೀಡಿದೆ.
ಇದನ್ನೂ ನೋಡಿ: ’ಕಸ ನಿರ್ವಹಣೆ–ಜನರಿಗೂ ಇದೆ ಹೊಣೆ’ Janashakthi Media
