ಬೆಂಗಳೂರು : ಈ ಬಾರಿ ಹೇಗಾದರೂ ಮಾಡಿ ಹಳೆ ಮೈಸೂರು ಭಾಗದಲ್ಲಿ ಕಮಲವನ್ನು ಅರಳಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಆ ಭಾಗದ ಪ್ರಮುಖ ಸಮುದಾಯ ಎನೆಸಿಕೊಂಡಿರುವ ಒಕ್ಕಲಿಗರ ಮತಬುಟ್ಟಿಗೆ ಕೈಹಾಕಿ, ಈ ಮತಗಳನ್ನು ಬಾಚಿಕೊಳ್ಳಲು ಎಲ್ಲೆಲ್ಲಿ ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದೆ. ಮೋದಿ ಸಮಾವೇಶ
ಕಲಬುರುಗಿ, ಶಿವಮೊಗ್ಗಕ್ಕೆ ಪ್ರಚಾರಕ್ಕಾಗಿ ಬಂದಿದ್ದ ಮೋದಿಯ ಚಿತ್ತವೀಗ ಮೈಸೂರಿನತ್ತ ಹರಿದಿದೆ. ಇದಕ್ಕಾಗಿಯೇ ಮಂಗಳೂರಿನಲ್ಲಿ ನಡೆಯಬೇಕಿದ್ದ ಸಮಾವೇಶ ಮೈಸೂರಿಗೆ ಶಿಪ್ಟ್ ಆಗಿದೆ. ಮೋದಿ ಸಮಾವೇಶ
ಇದನ್ನು ಓದಿ : ಬರಪರಿಹಾರಕ್ಕೆ ಮಾದರಿ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ: ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ
ಏಪ್ರಿಲ್ 14 ಕ್ಕೆ ಕರ್ನಾಟಕಕ್ಕೆ ಆಗಮಿಸಲಿರುವ ಮೋದಿ, ಮಂಗಳೂರಿನಲ್ಲಿ ಸಮಾವೇಶ ನಡೆಸುವುದಿತ್ತು. ಆದರೀಗ ಇದಕ್ಕ್ಕಿದ್ದಂತೆ ಪ್ಲ್ಯಾನ್ ಚೇಂಜ್ ಆಗಿದೆ. ಕೆಲ ಮೂಲಗಳು ಬಿಸಿಲು, ಶನಿವಾರ ಭಾನುವಾರ ಆಗಿರುವುದರಿಂದ ಜನ ಸೇರುವುದು ಕಷ್ಟ ಹೀಗಾಗಿ ಸಮಾವೇಶ ರದ್ದಾಗಿರಬಹುದು ಎಂದಿವೆ. ಮೋದಿ ಸಮಾವೇಶ
ಈ ಸಮಾವೇಶ ಮೈಸೂರಿಗೆ ಶಿಪ್ಟ್ ಆಗಿದ್ದು, ಸಂಜೆ 6 ಗಂಟೆಗೆ ಮಂಗಳೂರಿನಲ್ಲಿ ರೋಡ್ ಶೋ ನಡೆಸುವ ಮೊದಲು, ಸಂಜೆ 4 ಗಂಟೆಗೆ ಮೈಸೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ, ಮಾತನಾಡಲಿದ್ದಾರೆ. ಮೈಸೂರಿನಿಂದ ಕಮಲ ಚಿಹ್ನೆಗೆ ಯಧುವೀರ್ ಒಡೆಯರ್ ಅಭ್ಯರ್ಥಿಯಾಗಿದ್ದಾರೆ. ಮೋದಿ ಸಮಾವೇಶ
ಇನ್ನು ಏಪ್ರಿಲ್ 15 ರಂದು ಕೇಂದ್ರದ ವಿದೇಶಾಂಗ ಸಚಿವ ಜೈಶಂಕರ್ ಆಗಮಿಸಲಿದ್ದು, ಅಂದು ಸಂಜೆ ಬಿಜೆಪಿಯಿಂದ 4 ಗಂಟೆಗೆ ಐಐಎಸ್ಟಿನಲ್ಲಿ ವಿಶೇಷ ಸಭೆ, 7 ಗಂಟೆಗೆ ಪರಿಣಿತರ ಜೊತೆ ಸಭೆ ನಡೆಯಲಿದೆ.ಏಪ್ರಿಲ್ 20 ರ ಒಳಗೆ ಬಿಜೆಪಿ 20 ರ ಒಳಗೆ ರಾಜ್ಯದ ಪ್ರತಿ ಬೂತ್ ನಲ್ಲಿ ಎರಡು ಸಭೆ ನಡೆಸಲಿದೆ ಎಂದು ಬಿಜೆಪಿಯ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನು ನೋಡಿ : ಕೋಮುವಾದಿ ಶಕ್ತಿಗಳನ್ನು ಓಡಿಸದ ಹೊರತು ಪ್ರಜಾಪ್ರಭುತ್ವಕ್ಕೂ ಸಂವಿಧಾನಕ್ಕೂ ಉಳಿಗಾಲವಿಲ್ಲ – ಎಸ್‌ಜಿ ಸಿದ್ದರಾಮಯ್ಯ