ಡಿ.ಕೆ.ಶಿವಕುಮಾರ್ ಹೇಳಿಕೆ ಕೊಡುವುದರಲ್ಲಿ ನಿಪುಣರು -ಯಡಿಯೂರಪ್ಪ

ಬೆಂಗಳೂರು: ಒಕ್ಕಲಿಗ ಸರ್ಕಾರವನ್ನು ಬಿಜೆಪಿಯವರೇ ಉರುಳಿಸಿದರು ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಬಿ.ಎಸ್.ಯಡಿಯೂರಪ್ಪ, ಡಿ. ಕೆ. ಶಿವಕುಮಾರ್‌ಗೆ ಇಂತಹ ಹೇಳಿಕೆ ಬಿಟ್ಟು ಬೇರೆ ಏನು ಹೇಳಲು ಸಾಧ್ಯವಿದೆ ಎಂದು‌ ಸೂಚ್ಯವಾಗಿ‌ ಹೇಳಿದ್ದಾರೆ. ಡಿ.ಕೆ.ಶಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಒಕ್ಕಲಿಗ ಸಮಾಜ ಸೇರಿದಂತೆ ಎಲ್ಲರು ಕೂಡ ಒಂದಾಗಿದ್ದಾರೆ. ನಮ್ಮ ಜೊತೆ ಇದ್ದಾರೆ. ಇಂತಹ ಹೇಳಿಕೆ ನೀಡುವುದರಲ್ಲಿ ಡಿ.ಕೆ. ಶಿವಕುಮಾರ್ ಪ್ರವೀಣರು ಅಲ್ವಾ..? ಎಲ್ಲದ್ದಕ್ಕೂ ಅವರೇ ಉತ್ತರ ಕೊಡುತ್ತಿದ್ದಾರೆ. ಇದರಲ್ಲಿ ಸ್ವಾಮೀಜಿಗಳನ್ನು ಕೇಳುವುದರಲ್ಲಿ ಏನಿದೆ..? ಎಂದು ಪ್ರಶ್ನಿಸಿದರು.

ಇದನ್ನು ಓದಿ : ಮಂಗಳೂರಿನಿಂದ ಮೈಸೂರಿಗೆ ಮೋದಿ ಸಮಾವೇಶ ಶಿಫ್ಟ್‌

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆದ್ದು, ರಾಜ್ಯದಲ್ಲಿ 28 ಕ್ಷೇತ್ರ ಗೆದ್ದು ಸಂಸದರನ್ನು ದೆಹಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಡಿ.ಕೆ.ಶಿ

ಇದನ್ನು ನೋಡಿ : ತೇಜಸ್ವಿ ಸೂರ್ಯಗೆ ಮತ ನೀಡುವ ಮೊದಲು ಯೋಚಿಸಿ – ಮೋಹನ್ ರಾವ್ ಬಹಿರಂಗ ಪತ್ರ

Donate Janashakthi Media

Leave a Reply

Your email address will not be published. Required fields are marked *