ಮೊದಲ ಲಸಿಕೆ ಪಡೆದವರಿಗೆ ಸೋಂಕು ದೃಢಪಟ್ಟಿದೆ: ಎಚ್ಚರಿಕೆಯಿಂದರಲೂ ಸೂಚನೆ

ಕೊಡಗು: ಕೋವಿಡ್‌ ರೋಗವನ್ನು ತಡೆಯಲು ಅತ್ಯಂತ ಪರಿಣಾಮಕಾರಿಯಾದ ಅಸ್ತ್ರವೆಂದರೆ ಲಸಿಕೆಯನ್ನು ಪಡೆಯುವುದು. ಅದು ಕೂಡಾ ಎರಡು ಲಸಿಕೆಯನ್ನು ಹಾಕಿಸಿಕೊಂಡವರಿಗೆ ರೋಗ ನಿರೋಧಕ ಶಕ್ತಿ ಉಲ್ಬಣಿಸಲಿದೆ.

ಆದರೆ, ಜಿಲ್ಲೆಯಲ್ಲಿ ಮೊದಲ ಲಸಿಕೆ ಪಡೆದುಕೊಂಡವರು ಕೋವಿಡ್‌ ನಿಯಮಗಳು ಉಲ್ಲಂಘನೆ ಮಾಡಿರುವ ಪರಿಣಾಮವಾಗಿ ಬೇಕಾಬಿಟ್ಟಿಯಾಗಿ ಓಡಾಡಿರುವ ಹಿನ್ನೆಲೆಯಲ್ಲಿ 953 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಅವರಲ್ಲಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.

ಆರೋಗ್ಯದಲ್ಲಿ ಹೆಚ್ಚಿನ ಪರಿಣಾಮ ಬೀರಿರುವವರಿಗೆ ಆಸ್ಪತ್ರೆಯಲ್ಲಿ ಹಾಗೂ ಕಡಿಮೆ ಸಮಸ್ಯೆ ಇರುವವರಿಗೆ ಮನೆ ಆರೈಕೆಯಲ್ಲಿಯೇ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಎರಡು ಲಸಿಕೆಯನ್ನು ಪಡೆದುಕೊಂಡವರಿಗೆ ಕೋವಿಡ್‌ ಸಂಬಂಧಿತ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೆ, ಜನರು ಮೊದಲ ಲಸಿಕೆಯನ್ನು ಪಡೆದ ನಂತರದಲ್ಲಿ ಮುಂಜಾಗ್ರತೆಯನ್ನು ವಹಿಸದೆ ಇರುವ ಪರಿಣಾಮವಾಗಿ ಸೋಂಕು ಹರಡುತ್ತಿರುವುದು ಕಂಡು ಬಂದಿದೆ.

ಹಾಗಾಗಿ, ಮೊದಲ ಲಸಿಕೆ ಪಡೆದುಕೊಂಡವರು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕು ಮತ್ತು ಅಂತರಕಾಯ್ದುಕೊಂಡು, ಮಾಸ್ಕ್‌ ಧರಿಸಿ ಕೋವಿಡ್‌ ಹರಡದಂತೆ ಮುಂದಾಗಬೇಕೆಂದು ಸರಕಾರ ಸೂಚನೆ ನೀಡಿದೆ.

ವರದಿ: ಆರ್ವಿ ಹಸನ್

Donate Janashakthi Media

Leave a Reply

Your email address will not be published. Required fields are marked *