ಮೊದಲ ಹಂತದ ಗ್ರಾಮಪಂಚಾಯಿತಿ ಚುನಾವಣೆ : ರಂಗೇರಿದ ಮತಗಟ್ಟೆಗಳು

ಬೆಂಗಳೂರು :  ಕೋರೋನಾ ವೈರಾಣು ಆತಂಕದ ನಡವೆಯೂ ಮುನ್ನೇಚ್ಚರಿಕೆ ಕ್ರಮಗಳೊಂದಿಗೆ ಇಂದು ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಬಿರುಸಿನ ಮತದಾನ ಪ್ರಗತಿಯಲ್ಲಿದೆ.

ರಾಜ್ಯದ 30 ಜಿಲ್ಲೆಗಳ 113 ತಾಲೂಕುಗಳ 3019 ಗ್ರಾಮ ಪಂಚಾಯ್ತಿಗಳಿಗೆ ಮತದಾನ ನಡೆಯಲಿದೆ. ಒಟ್ಟು 23,625 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ  ಮತದಾನ ಆರಂಭಗೊಂಡಿದ್ದು, ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.

ಒಟ್ಟು 48,048 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆ ಆಗಿರುವುದರಿಂದ 43,238 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ.

ಚುನಾವಣೆ ಆಯೋಗವು ವ್ಯವಸ್ಥಿತವಾದ ಚುನವಾಣೆ ನಡೆಸಲು ಸಕಲ ಸಿದ್ದತೆ ನಡೆಸಿದ್ದು, ಸುರಕ್ಷತ ಮತದಾನಕ್ಕಾಗಿ 1,41,750 ಚುನಾವಣಾ ಸಿಬ್ಬಂದಿ ನೇಮಿಸಲಾಗಿದ್ದು, 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆ.

ಬೀದರ್ ಜಿಲ್ಲೆಯಲ್ಲಿ ಮಾತ್ರ ಮತಯಂತ್ರ(ಇವಿಎಂ) ಬಳಕೆ ಮಾಡಲಾಗುತ್ತಿದ್ದು, ಉಳಿದೆಡೆ ಮತಪತ್ರಗಳ ಮೂಲಕವೇ ಚುನಾವಣೆ ನಡೆಯುತ್ತಿದೆ.

ಒಟ್ಟು 1,64,550 ನಾಮಪತ್ರ ಸಲ್ಲಿಕೆ ಆಗಿದೆ. 40,352 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. 432 ಸ್ಥಾನಗಳು ನಾಮಪತ್ರ ಸಲ್ಲಿಕೆ ಮಾಡದೆ ಖಾಲಿ ಉಳಿದಿವೆ. ಅಂತಿಮವಾಗಿ 1,17,383 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉದ್ಯೋಗಕ್ಕಾಗಿ ಗುಳೆ ಹೋಗಿದ್ದಂತ ಜನರು ಗ್ರಾಮ ಪಂಚಾಯಿತ್ ಚುನಾವಣೆ ಮತದಾನ ಮಾಡಲು ಗ್ರಾಮಗಳಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಕೆಲವರು ಮತದಾನ ಅರಿತು ಮತದಾನಮಾಡಲು ಆರಂಭಿಸಿದ್ದರೆ ಇನ್ನು ಕೆಲವರು ನಾವಿದ್ದ ಜಾಗದಿಂದ ವಾಹನ ವ್ಯವಸ್ಥೆ ಮಾಡಿದ್ದರಿಂದ ಮತದಾನ ಮಾಡಲು ಹೋಗಿದ್ದೇವೆ ಎಂಬ ಮಾತುಗಳು ಕೇಳಿಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *