ದೇಗಲು ನಿರ್ಮಾಣಕ್ಕೆ ಹಣ ನಿರಾಕರಣೆ : ಸಿಖ್ ಭಕ್ತರ ಮೇಲೆ ಗುಂಪು ದಾಳಿ

ಪಾಟ್ನಾ: ದೇಗುಲ ನಿರ್ಮಾಣಕ್ಕೆ ಹಣಕೊಡಲಿಲ್ಲ ಎಂಬ ಕಾರಣಕ್ಕೆ ಸಿಖ್​ ಸಮುದಾಯದ ಆರು ಜನರಿಗೆ, ಗುಂಪೊಂದು ಥಳಿಸಿದ ಘಟನೆ ಬಿಹಾರದ ಭೋಜಪುರದಲ್ಲಿ ನಡೆದಿದೆ  ಸಿಖ್​ ಭಕ್ತರ ಮೇಲೆ ಹಲ್ಲೆ ನಡೆಸಿದ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಸುತ್ತಿದ್ದಾರೆ.

ಪಾಟ್ನಾ ಸಾಹೀಬ್​​ (ತಕ್ತ್​ ಶ್ರೀ ಹರಿಮಂದಿರ್​ ಜಿ) ಗುರುದ್ವಾರಕ್ಕೆ ಭೇಟಿ ನೀಡಿದ್ದ ಸುಮಾರು 60 ಮಂದಿ ಸಿಖ್​ ಭಕ್ತರು ಪಂಜಾಬ್​ನ ಮೊಹಾಲಿಗೆ ವಾಪಸ್​ ತೆರಳುತ್ತಿದ್ದರು. ಈ ವೇಳೆ ಅವರ ಮೇಲೆ ಹಲ್ಲೆಯಾಗಿದೆ ಎಂದು ಪಿರೋ ಉಪವಿಭಾಗದ ಪೊಲೀಸ್ ಅಧಿಕಾರಿ ರಾಹುಲ್​ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ :  ಸವರ್ಣೀಯರ ಬೀದಿಗೆ ಹೋಗಿ ಪಾನಿಪುರಿ ತಿಂದಿದ್ದಕ್ಕೆ ದಲಿತರ ಮನೆಗೆ ನುಗ್ಗಿ ಹಲ್ಲೆ

ಟ್ರಕ್‌ನಲ್ಲಿ ಕುಳಿತಿದ್ದ ಸಿಖ್‌ ಭಕ್ತರು, ಧ್ಯಾನಿ ತೋಲಾ ಎಂಬ ಸ್ಥಳವನ್ನು ತಲುಪುತ್ತಿದ್ದಂತೆ ಕೆಲವರು ಬಂದು, ದೇಗುಲ ನಿರ್ಮಾಣಕ್ಕಾಗಿ ಯಜ್ಞ ಮಾಡಬೇಕಾಗಿದೆ. ಹಾಗಾಗಿ ಚಂದಾ ಎತ್ತುತ್ತಿದ್ದೇವೆ. ಹಣ ಕೊಡಿ ಎಂದು ಸಿಖ್​ ಭಕ್ತರ ಬಳಿ ಹೇಳಿದ್ದಾರೆ. ಅದೂ ಅವರು ಮೊದಲು ಕೇಳಿದ್ದು ಟ್ರಕ್​ ಡ್ರೈವರ್ ಬಳಿ. ಆತ ತಾನು ಕೊಡುವುದಿಲ್ಲ ಎಂದು ಹೇಳುತ್ತಿದ್ದಂತೆ, ಚಂದಾ ಎತ್ತಲು ಬಂದವರು ಅವನ ಮೇಲೆ ಹಲ್ಲೆಗೆ ಮುಂದಾದರು. ಆಗ, ಕೆಲವು ಸಿಖ್​ ಭಕ್ತರು ಚಾಲಕನ ಸಹಾಯಕ್ಕೆ ಬಂದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಸಿಖ್​ ಸಮುದಾಯದ ಸುಮಾರು 6ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಚಾರ್ಪೋಖ್ರಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸದ್ಯ ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ.  ಗಾಯಗೊಂಡವರನ್ನು ಮೊಹಾಲಿ ನಿವಾಸಿಗಳಾದ ಮನ್‌ಪ್ರೀತ್ ಸಿಂಗ್, ಬೀರೇಂದ್ರ ಸಿಂಗ್, ಹರ್‌ಪ್ರೀತ್ ಸಿಂಗ್, ಜಸ್ವೀರ್ ಸಿಂಗ್ ಮತ್ತು ಬಲ್ವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದೇವೆ. ಐವರನ್ನು ವಶಕ್ಕೆ ಪಡೆದಿದ್ದೇವೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದೂ  ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *