ಪರಿಷತ್ ಫಲಿತಾಂಶ ಪ್ರಕಟ : ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ 11 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಎಸ್ ಮೈಸೂರು ಮತ್ತು ಹಾಸನದಲ್ಲಿ ಮಾತ್ರ ಗೆಲುವು ಸಾಧಿಸಿದೆ.

2015ರ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದ 14 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಕೂಡ ಪರಿಷತ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ

ಬಿಜೆಪಿ ಗೆಲುವು  – 11
ಬೆಂಗಳೂರು ನಗರ – ಗೋಪಿನಾಥ ರೆಡ್ಡಿ
ಮಡಿಕೇರಿ – ಸುಜಾ ಕುಶಾಲಪ್ಪ
ಶಿವಮೊಗ್ಗ – ಡಿ.ಎಸ್.ಅರುಣ್
ಚಿತ್ರದುರ್ಗ – ಕೆಎಸ್ ನವೀನ್
ಬಳ್ಳಾರಿ – ವೈಎಂ ಸತೀಶ್
ಉತ್ತರ ಕನ್ನಡ – ಗಣಪತಿ ಉಳ್ವೇಕರ್
ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
ಉಡುಪಿ-ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ
ಕಲಬುರಗಿ – ಯಾದಗಿರಿ – ಬಿ ಜಿ ಪಾಟೀಲ್
ಹುಬ್ಬಳ್ಳಿ – ಧಾರವಾಡ – ಪ್ರದೀಪ್ ಶೆಟ್ಟರ್
ವಿಜಯಪುರ-ಬಾಗಲಕೋಟೆ – ಪಿ ಎಚ್ ಪೂಜಾರ್

ಕಾಂಗ್ರೆಸ್ – 11
ಬೀದರ್ – ಭೀಮರಾವ್ ಬಿ ಪಾಟೀಲ್
ತುಮಕೂರು – ರಾಜೇಂದ್ರ
ಕೋಲಾರ – ಎಂ.ಎಲ್. ಅನಿಲ್ ಕುಮಾರ್
ವಿಜಯಪುರ-ಬಾಗಲಕೋಟೆ – ಸುನೀಲ್ ಗೌಡ ಪಾಟೀಲ್
ಹುಬ್ಬಳ್ಳಿ – ಧಾರವಾಡ – ಸಲೀಂ ಅಹ್ಮದ್
ರಾಯಚೂರು-ಕೊಪ್ಪಳ – ಶರಣಗೌಡ ಪಾಟೀಲ್ ಬಯ್ಯಾಪುರ
ಮಂಡ್ಯ – ದಿನೇಶ್ ಗೂಳಿಗೌಡ
ಮೈಸೂರು – ಚಾಮರಾಜನಗರ – ಡಿ. ತಿಮ್ಮಯ್ಯ
ಉಡುಪಿ-ದಕ್ಷಿಣ ಕನ್ನಡ – ಮಂಜುನಾಥ್ ಭಂಡಾರಿ
ಬೆಳಗಾವಿ-ಚಿಕ್ಕೋಡಿ ಚನ್ನರಾಜು
ಬೆಂಗಳೂರು ಗ್ರಾಮಾಂತರ – ಎಸ್.ರವಿ

ಜೆಡಿಎಸ್- 2
ಹಾಸನ – ಸೂರಜ್ ರೇವಣ್ಣ

ಮೈಸೂರು -ಚಾಮರಾಜನಗರ: ಸಿ.ಎನ್. ಮಂಜೇಗೌಡ

ಪಕ್ಷೇತರ – 1
ಬೆಳಗಾವಿ-ಚಿಕ್ಕೋಡಿ – ಲಖನ್ ಜಾರಕಿಹೊಳಿ

ಇಂದಿನ 11 ಸ್ಥಾನಗಳ ಗೆಲುವಿನೊಂದಿಗೆ ಬಿಜೆಪಿ ವಿಧಾನ ಪರಿಷತ್ ನಲ್ಲಿ ಬಹುಮತ ಪಡೆಯುವ ಸನಿಹದಲ್ಲಿದೆ. 75 ಸದಸ್ಯಬಲದ ಮೇಲ್ಮನೆಯಲ್ಲಿ 38 ಮ್ಯಾಜಿಕ್ ನಂಬರ್ ಆಗಿದೆ. ಇಂದಿನ ಫಲಿತಾಂಶದ ಬಳಿಕ ಬಿಜೆಪಿ ಸರಿಯಾಗಿ 37 ಸ್ಥಾನಗಳನ್ನು ಪಡೆದಿದೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಂಬಲ ನೀಡುವ ಸಾಧ್ಯತೆ ಇದೆ. ಆಗ ರಮೇಶ್ ಜಾರಕಿಹೊಳಿ ಸಚಿವ ಸ್ಥಾನದ ಬೇಡಿಕೆ ಇನ್ನಷ್ಟು ಬಲಗೊಳ್ಳಲಿದೆ.

ಈ ಹಿಂದೆ 29 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್  ಇದೀಗ  11 ಮಂದಿ ಗೆಲುವು ಕಂಡಿದ್ದು, ಪರಿಷತ್ ನಲ್ಲಿ ಕಾಂಗ್ರೆಸ್ ಬಲ 26ಕ್ಕೆ ಇಳಿಕೆಯಾಗಿದೆ.

12 ಸದಸ್ಯರನ್ನು ಹೊಂದಿದ್ದ ಜೆಡಿಎಸ್ , ಇದೀಗ ಎರಡು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಜೆಡಿಎಸ್ ನ ಸದಸ್ಯ ಬಲ 10 ಕ್ಕೆ ಬಂದು ನಿಂತಿದೆ.

Donate Janashakthi Media

Leave a Reply

Your email address will not be published. Required fields are marked *