ಸಮಾಜಮುಖಿ ಹಿರಿಯ ಪತ್ರಕರ್ತ ಎಂ ಕೆ ಭಾಸ್ಕರರಾವ್ ಇನ್ನಿಲ್ಲ

ಬೆಂಗಳೂರು: ಸಮಾಜಮುಖಿ ಹಿರಿಯ ಪತ್ರಕರ್ತ ಎಂ ಕೆ ಭಾಸ್ಕರರಾವ್ ಇನ್ನಿಲ್ಲವಾಗಿದ್ದು, 75 ವರ್ಷ ವಯಸ್ಸಿನವರಾಗಿದ್ದ ಭಾಸ್ಕರರಾವ್, ಎರಡು ವರ್ಷದಿಂದ ಕ್ಯಾನ್ಸರ್‌‌ನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಕಳೆದ 15 ದಿನದ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾಸ್ಕರರಾವ್, ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಎಂ ಕೆ ಭಾಸ್ಕರರಾವ್

ಮೂಲತಃ ಶಿರಸಿ ತಾಲ್ಲೂಕಿನವರಾದ ಎಂ.ಕೆ.ಭಾಸ್ಕರರಾವ್‌ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಅಲ್ಲಿಯೇ ಶಿಕ್ಷಣ ಮುಗಿಸಿ ನಂತರ ಪತ್ರಿಕೋದ್ಯಮ ಸೇರಿದವರು. ಪ್ರಜಾವಾಣಿ ಪತ್ರಿಕೆಯಲ್ಲಿಯೇ ಮೂರು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದ್ದರು.

ರಾಯಚೂರು ಜಿಲ್ಲಾ ವರದಿಗಾರರಾಗಿದ್ದರು. ಆ ಭಾಗದ ಸಮಸ್ಯೆಗಳ ಕುರಿತು ಬರೆದ ಅವರ ವರದಿಗಳು ಗಮನ ಸೆಳೆದಿದ್ದವು. ಆನಂತರ ಬೆಂಗಳೂರಿನಲ್ಲಿ ಸಿನೆಮಾ ಪತ್ರಕರ್ತರಾಗಿಯೂ ಕೆಲವು ಕಾಲ ಭಾಸ್ಕರರಾವ್‌ ಕಾರ್ಯನಿರ್ವಹಿಸಿದ್ದರು.ಎಂ ಕೆ ಭಾಸ್ಕರರಾವ್

ಇದನ್ನು ಓದಿ : ಸುಳ್ಳು ಹೇಳಿದ್ದೆ ಬಿಜೆಪಿಯ ಹತ್ತು ವರ್ಷದ ಸಾಧನೆ – ರಾಘವಲು

ಸಮಾಜಮುಖಿ ಪತ್ರಕರ್ತರಾಗಿದ್ದ ಭಾಸ್ಕರರಾವ್‌ ತಮ್ಮ ಹರಿತ ಬರವಣಿಗೆ ಮಾತ್ರವಲ್ಲದೇ ಮಾತಿನಿಂದಲೂ ಗುರುತಿಸಿಕೊಂಡಿದ್ದರು. ಚುನಾವಣೆ ವೇಳೆ ಹಲವಾರು ಚಾನೆಲ್‌ಗಳಲ್ಲಿ ವಿಶ್ಲೇಷಣೆ ಮಾಡುತಿದ್ದರು. ಪ್ರಚಲಿತ ವಿದ್ಯಾಮಾನಗಳ ಕುರಿತು ನಿಖರವಾಗಿ ಮಾತನಾಡುವ ಜ್ಞಾನ ಅವರಲ್ಲಿತ್ತು.

ನಿವೃತ್ತಿ ನಂತರ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಪ್ರವಾಸ ಕೈಗೊಳ್ಳುತ್ತಲೇ ಬರವಣಿಗೆಯಲ್ಲಿ ನಿರತರಾಗಿದ್ದರು. ಕೆಲವು ವರ್ಷದ ಹಿಂದೆಯಷ್ಟೇ ಕ್ಯಾನ್ಸರ್‌ಗೆ ಸಿಲುಕಿ ಚಟುವಟಿಕೆಗಳಿಂದ ದೂರವಾಗಿದ್ದರು.ಎಂ ಕೆ ಭಾಸ್ಕರರಾವ್

ಮೃತರಿಗೆ ಪತ್ನಿ ಜಯಾ, ಪುತ್ರ ಅಭಿಜಿತ್‌ ಇದ್ದಾರೆ. ಬೆಂಗಳೂರಿನ ಬನ್ನೇರಘಟ್ಟ ರಸ್ತೆಯಲ್ಲಿರುವ ಸೌತ್‌ ಸಿಟಿ ಅಪಾರ್ಟ್‌ ಮೆಂಟ್‌ ಗೆ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಗ ಅಭಿಜಿತ್‌ ವಿದೇಶದಲ್ಲಿದ್ದು ಬಂದ ನಂತರ ಅಂತ್ಯಕ್ರಿಯೆ ಕುರಿತು ನಿರ್ಧರಿಸಲಾಗುತ್ತದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ

Donate Janashakthi Media

Leave a Reply

Your email address will not be published. Required fields are marked *