10,000 ರನ್‌ ಕಲೆ ಹಾಕಿದ ಭಾರತೀಯ ಮೊದಲ ಆಟಗಾರ್ತಿ ಮಿಥಾಲಿ ರಾಜ್

ಲಖನೌ : ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಆಟದಲ್ಲಿ 10,000 ರನ್‌ ಗಳಿಸಿದ ಭಾರತೀಯ ಮೊಟ್ಟಮೊದಲ ಆಟಗಾರ್ತಿ ಮಿಥಾಲಿ ರಾಜ್‌ ವಿಶ್ವದಲ್ಲಿ ಎರಡನೇ ಆಟಗಾರ್ತಿ.

ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್ ಅವರು ಮೊದಲ ಸಾಧನೆಯಲ್ಲಿದ್ದರೆ, ಮಿಥಾಲಿ ರಾಜ್‌ ಅವರು ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಏಕದಿನ ಪಂದ್ಯವು ಇಂದು ಲಖನೌನಲ್ಲಿ ನಡೆಯಿತು. ಇನ್ನಿಂಗ್ಸ್‌ನ 28ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ ಮಿಥಾಲಿ ರಾಜ್‌ ಅವರ ಸಾಧನೆಗೆ ಬ್ಯಾಟ್ಸ್‌ಮನ್ ವಿ.ವಿ.ಎಸ್. ಲಕ್ಷ್ಮಣ್ ಅವರು ಅನುಭವಿ ಆಟಗಾರರಾದ ಮಿಥಾಲಿ ರಾಜ್‌ ಅವರ ಸಾಧನೆ ಉದಯೋನ್ಮೂಖ ಆಟಗಾರರಿಗೆ ಸ್ಪೂರ್ತಿ ಎಂದು ಪ್ರಶಂಸಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಅವರು ʻʻಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮಟ್ಟದ ಸಾಧನೆ ಮಾಡಿದ ಮಿಥಾಲಿ ರಾಜ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರೀ ದೊಡ್ಡಮಟ್ಟದ ಸಾಧನೆ ಮಾಡಿದ್ದೀರಿ ಹೀಗೆ ಮುಂದುವರೆಯಲಿ ಈ ನಿಮ್ಮ ಸಾಧನೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜೈ ಷಾ ಸೇರಿದಂತೆ ವಿವಿಧ ಕ್ರಿಕೆಟ್‌ ತಂಡಗಳು ಮತ್ತು ಅಭಿಮಾನಿಗಳು ಸೇರಿದಂತೆ ಖ್ಯಾತನಾಮರಿಂದ ಪ್ರಶಂಸೆಯ ಶುಭಾಶಯಗಳು ವ್ಯಕ್ತಪಡಿಸಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ನಾಯಕಿಯೂ ಆಗಿರುವ ಮಿಥಾಲಿ ರಾಜ್‌ ಅವರು ಏಕದಿನ 6974 ರನ್‌, ಟಿ-20ಯಲ್ಲಿ 2,364 ರನ್‌ ಹಾಗೂ 10 ಟೆಸ್ಟ್‌ ಪಂದ್ಯಗಳಲ್ಲಿ 663 ರನ್‌ ಪಡೆದಿದ್ದಾರೆ. ಮಿಥಾಲಿ ರಾಜ್‌ ಅವರು 1999ರ ಜೂನ್‌ರ ಏಕದಿನ ಪಂದ್ಯದಲ್ಲಿ ಐರ್ಲೆಂಟ್‌ ವಿರುದ್ಧ ನಡೆದ ಅಂತರರಾಷ್ಟ್ರೀಯ ಪಂದ್ಯದ ಮೂಲಕ ಪಾದಾರ್ಪನೆ ಮಾಡಿದರು. ಈವರೆಗೆ ಅವರು ಏಳು ಶತಕಗಳು ಮತ್ತು 54 ಅರ್ಧಶತಕಗಳನ್ನು ಗಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *