ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಕಚೇರಿಯೊಳಗಿನ ಕೆಲ ಪೀಠೋಪಕರಣಗಳಿಗೆ ಹಾನಿಯಾಗಿದೆ ಸಿಸಿಟಿವಿ ಕ್ಯಾಮರಾ ಕೂಡ ಕಿತ್ತುಕೊಂಡು ಹೋಗಿದ್ದಾರೆ.
ಜನರಿಗೆ ಘಟನೆ ಶನಿವಾರ ಬೆಳಿಗ್ಗೆಯೇ ಗೊತ್ತಾಗಿದೆ. ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ, ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಟ್ಟಡದ ಕಿಟಕಿಗೆ ಎಸೆಯಲಾಗಿದೆ. ಕಿಟಕಿಗೆ ಹೊತ್ತಿಕೊಂಡ ಬೆಂಕಿ ಕೆಲ ನಿಮಿಷಗಳ ಬಳಿಕ ತಾನಾಗಿಯೇ ನಂದಿದೆ. ಅದರ ಪಕ್ಕದಲ್ಲಿ ಟೇಬಲ್, ಕುರ್ಚಿಗಳೊಗೆ ಹಾನಿಯಾಗಿದೆ. ಯಾವುದೇ ದಾಖಲೆಗಳು ಸುಟ್ಟಿಲ್ಲ.
ಈ ಗ್ರಾಮ ಸಚಿವ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ವಿಧಾನಸಭಾ ಕ್ಷೇತ್ರ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ.
ಇದನ್ನೂ ಓದಿ: ಪೂರ್ವಿಕರ ಕೃಷಿ ಭೂಮಿ ಮಾರಾಟ ʼಕುಟುಂಬದ ಸದಸ್ಯರಿಗೆ ʼ ಮೊದಲ ಆದ್ಯತೆ – ಸುಪ್ರೀಂ ಕೋರ್ಟ್
ಸಂಸದೆ ಪ್ರಿಯಾಂಕಾ ಅವರು ಶುಕ್ರವಾರ ಗ್ರಾಮಕ್ಕೆ ಬಂದು ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಗ್ರಾಮದ ಒಂದು ಗುಂಪು ಅವರನ್ನು ಆಹ್ವಾನಿಸಿತ್ತು. ಸಂಸದೆಯನ್ನು ಗ್ರಾಮದ ವಾಲ್ಮೀಕಿ ಗಲ್ಲಿಗೂ ಕರೆದುಕೊಂಡು ಬರಬೇಕು ಎಂದು ಇನ್ನೊಂದು ಗುಂಪು ಒತ್ತಾಯ ಮಾಡಿತ್ತು.
ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಗಲಾಟೆ ಕೂಡ ನಡೆದಿತ್ತು. ಗ್ರಾಮ ಪಂಚಾಯಿತಿಗೆ ಪೆಟ್ರೋಲ್ ಬಾಂಬ್ ಎಸೆದ ಘಟನೆಗೂ ಇದಕ್ಕೂ ಸಂಬಂಧವಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ನೋಡಿ: ಮೋದಿಯವರೇ ಹತ್ತು ವರ್ಷದಲ್ಲಿ ಎಷ್ಟು ಆಶ್ವಾಸನೆ ಈಡೇರಿಸಿದ್ದಿರಿ ಸ್ಪಷ್ಟಪಡಿಸಿ – ವಿ ಎಸ್ ಉಗ್ರಪ್ಪ Janashakthi Media