ಬೆಂಗಳೂರು : ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಕಳೆದ 3 ರಿಂದ ನಾಲ್ಕು ತಿಂಗಳವರೆಗೆ ಹಣ ಖಾತೆಗೆ ಜಮೆ ಆಗದಿರುವುದು ಇದೀಗ ಟೀಕೆಗೆ ಗುರಿಯಾಗಿದೆ.
ಹಣ ವಿಳಂಬ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಎಲ್ಲಾ ಹಣವನ್ನು ಕೇಂದ್ರವೇ ಕಿತ್ತುಕೊಂಡು ಹೋಗುತ್ತಿದೆ. ಹೀಗಾಗಿ ನಮ್ಮ ಸರ್ಕಾರಕ್ಕೆಲ್ಲಿ ಹಣ ಉಳಿಯುತ್ತದೆ ಹೇಳಿ ಎಂದಿದ್ದಾರೆ. ಈ ಮೂಲಕ ಗ್ಯಾರಂಟಿ ಯೋಜನೆಗಳ ಹಣ ಜಮೆಯಾಗದಕ್ಕೆ ಪರೋಕ್ಷವಾಗಿ ಕೇಂದ್ರದತ್ತ ಸಚಿವರು ಬೆರಳು ಮಾಡಿ ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ :ಕಾರವಾರ| ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆ ಸೇತುವೆಯ 1 ಭಾಗ ಕುಸಿತ
ರಾಜ್ಯಕ್ಕೆ ತೆರಿಗೆ ಪಾಲಿನ ಹಣ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಕುಟುಕಿದ ರೆಡ್ಡಿ ಅವರು, ಒಂದೆರಡು ತಿಂಗಳು ತಡವಾಗಿರಬಹುದು. ಆದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಷ್ಟು-ಇಷ್ಟು ಕೊಟ್ಟಿದೆ ಎಂದು ಸುಳ್ಳು ಹೇಳುತ್ತಿದೆ. ಇನ್ನೊಂದೆಡೆ ರಸಗೊಬ್ಬರದ ದರವನ್ನೂ ಹೆಚ್ಚಿಸಿದೆ ಎಂದು ತಿವಿದಿದ್ದಾರೆ.
ಕರ್ನಾಟಕ ಸರ್ಕಾರ ಕೇಂದ್ರಕ್ಕೆ ರೂ.4.5 ಲಕ್ಷ ಕೋಟಿ ತೆರಿಗೆ ಪಾವತಿಸುತ್ತದೆ. ವಾಪಸ್ ಅವರು ನಮಗೆ ಎಷ್ಟು ಕೊಟ್ಟಿದ್ದಾರೆ? ಎಲ್ಲಾ ಹಣ ಕೇಂದ್ರಕ್ಕೆ ಹೋದರೆ ನಮ್ಮಲ್ಲಿ ಹಣದ ಅಭಾವವಾಗಲ್ವಾ?.. ಗ್ಯಾರಂಟಿ ಯೋಜನೆಗಳನ್ನು ನಾವು ಯೋಜಿತವಾಗಿ ಮಾಡಿದ್ದಾರೆ. ಒಂದೆರಡು ತಿಂಗಳು ಹಣ ವರ್ಗಾವಣೆಗೆ ತಡವಾಗಿದೆ. ಸಮಸ್ಯೆ ಸದ್ಯದಲ್ಲೇ ಸರಿಹೋಗಲಿದೆ ಎಂದಿದ್ದಾರೆ.