ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಫರ್ನಿಚರ್ ಅಂಗಡಿ, ಗೋಡೌನ್‌ಗೆ ಬೆಂಕಿ – 1.50 ಕೋಟಿ ರೂ. ಮೌಲ್ಯದ ವಸ್ತುಗಳು ಭಸ್ಮ

Please follow and like us:

ಕೋಲಾರ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ(Short Circuit) ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಪೀಠೋಪಕರಣದ ಅಂಗಡಿ (Furniture Shop) ಮತ್ತು ಗೋಡೌನ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಪ್ರವಾಸಿ ಮಂದಿರದ ಬಳಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಡಿಲಕ್ಸ್ ಎಂಟರ್ಪ್ರೈಸ್ ಫರ್ನಿಚರ್ ಅಂಗಡಿ ಹೊತ್ತಿ ಉರಿದಿದೆ. ಮುಳಬಾಗಲು ನಗರದ ಶೌಕತ್ ಎಂಬುವವರಿಗೆ ಸೇರಿದ ಫರ್ನಿಚರ್ ಅಂಗಡಿ ಹಾಗೂ ಗೋಡೌನ್‌ನಲ್ಲಿದ್ದ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ

ಇದನ್ನು ಓದಿ :BBMP: 4.30 ಕೋಟಿ ರೂ ವೆಚ್ಚದಲ್ಲಿ 1.84 ಲಕ್ಷ ಬೀದಿನಾಯಿಗಳಿಗೆ ಲಸಿಕೆ

ಇನ್ನೂ ಬೆಂಕಿಯ ಕೆನ್ನಾಲಿಗೆ ಪಕ್ಕದ ಅಂಗಡಿ ಹಾಗೂ ಮನೆಗಳನ್ನ ಆವರಿಸುವ ಆತಂಕದ ಮಧ್ಯೆ ಸ್ಥಳಕ್ಕೆ ಆಗಮಿಸಿದ ಆಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಪೀಠೋಪಕರಣಗಳು ಒಂದೇಸಮನೆ ಹೊತ್ತಿ ಉರಿದ ಹಿನ್ನೆಲೆ ಮೂರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

 

Please follow and like us:
Donate Janashakthi Media

Leave a Reply

Your email address will not be published. Required fields are marked *