ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಫೈಲ್ ಆಗಿದ್ದರೂ ಆವರ ರಾಜೀನಾಮೆಯನ್ನು ಬಿಜೆಪಿಗರು ಕೇಳುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಫೈಲ್ ಆಗಿದ್ದರೂ ಆವರ ರಾಜೀನಾಮೆಯನ್ನು ಬಿಜೆಪಿಗರು ಕೇಳುತ್ತಿಲ್ಲ. ಅದರ ಬದಲಾಗಿ ಡೆತ್‌ ನೋಟ್ ನಲ್ಲಿ ನನ್ನ ಹೇಸರೇ ಇಲ್ಲದಿದ್ದರೂ ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಇದು ಹಾಸ್ಯಾಸ್ಪದ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ರಾಜೀನಾಮೆ ಕೇಳಿದರೆ ನಿಮಗೂ ಎಚ್ ಐ ವಿ ಸೋಂಕು ಚುಚ್ಚುತ್ತಾರೆಂಬ ಭಯವೇ? ಎಂದು ಸಚಿವರು ಪ್ರಶ್ನಿಸಿದರಲ್ಲದೆ, ಹಿಟ್ ಆಂಡ್ ರನ್ ಮಾಡುವಲ್ಲಿ ಬಿಜೆಪಿಗರು ಪಿಎಚ್ ಡಿ ತೆಗೆದುಕೊಂಡಿದ್ದಾರೆ, ಆದ್ದರಿಂದ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಸಚಿನ್ ಪಾಂಚಾಳ್ ಆತ್ಮಹತ್ಯೆ ಪುಕರಣಕ್ಕೆ ಸಂಬಂಧಿಸಿದಂತೆ ಅವರು ಬರೆದಿರುವ ಡೆತ್ ನೋಟ್ ನಲ್ಲಿ ನನ್ನ ಹೆಸರಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಮತ್ತು ನನ್ನ ಕುಟುಂಬದ ಜೀವ ಬೆದರಿಕೆ ಹಾಕಿರುವ ಆಡಿಯೋ ಬಗ್ಗೆ ದೂರು ಕೊಟ್ಟರೂ ಅಂದಿನ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗರಿಗೆ ನಾಚಿಕೆ ಆಗಲ್ವಾ? ಈ ಪುಕರಣಕ್ಕೆ ನನಗೆ ಸಂಬಂಧ ಇಲ್ಲ. ಹಾಗಿದ್ದರೂ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗರು ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರಲ್ಲದೆ, ಈ ಹಿಂದ ಗುತ್ತಿಗೆದಾರರ ಸಂತೋಷ್ ಪಾಟೀಲ್ ಅವರು ನನ್ನ ಸಾವಿಗೆ ನೇರ ಕಾರಣ ಕೆ.ಎಸ್ ಈಶ್ವರಪ್ಪ ಎಂದಿದ್ದರು. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂತೋಷ್ ಪಾಟೀಲ್ ತಮ್ಮ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದರು. ಅಲ್ಲದೆ, ಹೆಂಡತಿ ಮಕ್ಕಳಿಗೆ ಪರಿಹಾರ ಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಹೇಳಿದ್ದರು ಎಂದು ಸಂತೋಷ್ ಪಾಟೀಲ್ ಡೆತ್ ನೋಟ್ ನಲ್ಲಿದ್ದ ಅಂಶಗಳನ್ನು ಪ್ರಿಯಾಂಕ್‌ ಖರ್ಗೆ ಬಹಿರಂಗ ಪಡಿಸಿದರು.

ಇದನ್ನೂ ಓದಿ : 1991ರ ಕಾಯ್ದೆ ಪರಿಣಾಮಕಾರಿ ಜಾರಿ: ಓವೈಸಿ ಮನವಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ಆದರೆ ಸಂತೋಷ್ ಪಾಟೀಲ್ ಕುಟುಂಬಕ್ಕೆ ಬಿಜೆಪಿಗರು ಸಹಾಯ ಮಾಡಿದ್ದಾರಾ? ಸಂತೋಷ್ ಪಾಟೀಲ್ ಕುಟುಂಬವನ್ನು ಏಕೆ ಭೇಟಿ ಮಾಡಿಲ್ಲ? ಕೇವಲ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಬಿಜೆಪಿಗರು ಸುಳ್ಳಿನ ಶೂರರು ಬಿಜೆಪಿ ನಾಯಕರಾದ ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿ, ಪಿ ರಾಜೀವ್ ಸುಳ್ಳು ಆರೋಪ ಮಾಡಿದ್ದಾರೆ. ಅವರೀಗ ಸುಳ್ಳಿನ ಶೂರರಾಗಿದ್ದಾರೆ. ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಈ ಹಿಂದೆಯೇ ಹಾಕಿದ್ದ. ಸುಳ್ಳು ಬಿಜೆಪಿಯ ಬಂಡವಾಳ ಆಗಿದೆ. ರಾಜಕೀಯ ಅಸ್ತಿತ್ವ ಕಾಂಗ್ರೆಸ್‌ ನಾಯಕರ ಜಪ ಮಾಡುತ್ತಿದ್ದಾರೆ ಎಂದರು.

ಸಕಾರಾತ್ಮಕವಾಗಿ ಟೀಕೆ ಮಾಡಿದರೆ ನಾನು ಪ್ರತಿಕ್ರಿಯೆ ನೀಡಬಹುದು. ವೈಯಕ್ತಿಕವಾಗಿ ಟೀಕೆ ಮಾಡಿದರೆ ಹೇಗೆ, ಈ ಹಿಂದೆ ಬಿಜೆಪಿ ಕಲಬುರಗಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ್ ಕೊಲೆ ಬೆದರಿಕೆ ಬಗ್ಗೆ ಉತ್ತರ
ಕೂಡಿ ಎಂದು ಸವಾಲು ಹಾಕಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಕೇಂದ್ರ ಸಚಿವ ಅಮಿತ್‌ ಶಾ ಭೇಟಿ ಸಂದರ್ಭದಲ್ಲಿಯೂ ನನ್ನ ವಿಚಾರ ಚರ್ಚೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿಗರು ಕಲಬುರಗಿ ಬಂದರೆ ಎಳನೀರು, ಮಜ್ಜಿಗೆ ಕೊಡುತ್ತೇವೆ. ಬಿಜೆಪಿಯವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹುಡುಗರಿಗೆ ಸೂಚನೆ ನೀಡಿದ್ದೇನೆ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.

ಕುಟುಂಬ ರಾಜಕಾರಣ ನಮ್ಮಲ್ಲಿ ಇದಾ ಬಿಜೆಪಿಯಲ್ಲಿ ಇದ್ಯಾ? ಇವರಿಗೆಲ್ಲಾ ಡಿಎನ್ ಎ ಟೆಸ್ಟ್ ಉಚಿತವಾಗಿ ಮಾಡಿಸಲು ನಾನು ರಡಿ ಇದ್ದೇನೆ. ಬೇರೆ ಏನಾದರೂ ಇರಬಹುದು ಎಂದು ಅವರಿಗೆ ಭಯ ಇರಬಹುದೇನು? ಬ್ಯಾಟ್ ಹಿಡಿಯಲು ಬಾರದವರಿಗೆ ಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ನಾನು ಮಲ್ಲಿಕಾರ್ಜುನ ಖರ್ಗೆ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ನಾನು ಎಲೆಕ್ಸೆಡ್, ಸೆಲೆಡ್ ಅಲ್ಲ ಎಂದು ಕುಟುಂಬ ರಾಜಕಾರಣ ಆರೋಪಕ್ಕೆ ತಿರುಗೇಟು ನೀಡಿದರು.

ಇದೇ ಸಂದರ್ಭದಲ್ಲಿ ಕ್ಯಾಬಿನೆಟ್ ಪುನರ್ ರಚನೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಯಾರನ್ನು ಕ್ಯಾಬಿನೆಟ್ ನಲ್ಲಿ ಇಟ್ಟುಕೊಳ್ಳುವುದು, ಬಿಡುವುದು ಸಿಎಂ ಅವರ ವಿವೇಚನೆಯಾಗಿದೆ ಎಂದು ತಿಳಿಸಿದರು.

ಇದನ್ನೂ ನೋಡಿ : ಸಂಸತ್ತಿನ ಅಧಿವೇಶನವನ್ನು ಬೀದಿ ಜಗಳದ ಮಟ್ಟಕ್ಕಿಳಿಸಿದ ಬಿಜೆಪಿಯ ಅನೈತಿಕ ರಾಜಕಾರಣದ ಅನಾವರಣ…. Janashakthi Media

Donate Janashakthi Media

Leave a Reply

Your email address will not be published. Required fields are marked *